ಗದುಗಿನಲ್ಲಿ ಸಾಮೂಹಿಕ ವಿವಾಹಕ್ಕೆ ಸಕಲ ಸಿದ್ದತೆ

0
17
loading...

ಗದಗ: ಗದಗ ಜಿಲ್ಲೆಯ ಮಾಜಿ ಜಿಲ್ಲಾಉಸ್ತುವಾರಿ ಸಚಿವರು ಹಾಲಿ ಬಳ್ಳಾರಿ ಸಂಸದರೂ ಹಾಗೂ ಬಿ.ಜೆ.ಪಿ ರಾಜ್ಯ ಉಪಾಧ್ಯಕ್ಷರಾದ ಬಿ.ಶ್ರೀರಾಮುಲುರವರ ನೇತ್ರತ್ವದಲ್ಲಿ ಗದುಗಿನ ಬಿ.ಶ್ರೀರಾಮುಲು ಅಭಿಮಾ£ ಬಳಗವು ಪ್ರತಿ ವರ್ಷ ಸರ್ವಧರ್ಮದವರಿಗಾಗಿ ಉಚಿತ ಸಾಮೂಹಿಕ ವಿವಾಹ ನಡೆಸಿಕೊಂಡು ಬಂದಿದ್ದು, ಈಗಾಗಲೇ ರಾಜ್ಯದಲ್ಲಿ ಶ್ರೀರಾಮುಲುರವರ ನೇತೃತ್ವದಲ್ಲಿ 40 ಸಾವಿರ ಜೋಡಿ ವಿವಾಹಗಳನ್ನು ಪೂರೈಸಿ ಗದಗನಲ್ಲಿ ಯಶಸ್ವಿ 10 ನೇ ವರ್ಷದ ಸಂಭ್ರದಲ್ಲಿ ಇದೀಗ ಅ. 27 ಗುರುವಾರರÀÀಂದು ಗದುಗಿನಲ್ಲಿ 651 ಜೋಡಿಗಳ ಉಚಿತ ಸಾಮೂಹಿಕ ವಿವಾಹಗಳನ್ನು ಎರ್ಪಡಿಸಿದೆ ಎಂದು ಗದುಗಿನ ಶ್ರೀರಾಮುಲು ಅಭಿಮಾ£ ಬಳಗದ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಎಚ್ ಶಿವನಗೌಡರ ತಿಳಿಸಿದರು.
ಸಮಾಜ ಮತ್ತು ಕುಟುಂಬದ ಹಿತದೃಷ್ಠಿಯ£್ನರಿಸಿಕೊಂಡು ಪಾಲಕ ಪೋಷಕರಿಗೆ ತಮ್ಮ ಮಕ್ಕಳ ಮದುವೆ ಮಾಡಲು ಆರ್ಥಿಕ ಹೊರಯಾಗಬಾರದು, ವರದಕ್ಷಿಣೆ ಪಿಡುಗನ್ನು ತೊಲಗಿಸಲು ಹಾಗೂ ಸರಳ ವಿವಾಹಗಳಿಗೆ ಉತ್ತೇಜನ £ೀಡುವ ಹಿರಿದಾದ ಉದ್ದೇಶವ£್ನರಿಸಿಕೊಂಡು ಸರ್ವಧರ್ಮದವರಿಗಾಗಿ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬಂದ ಹೆಗ್ಗಳಿಕೆ ಶ್ರೀರಾಮುಲು ಅಭಿಮಾ£ ಬಳಗದ್ದಾಗಿದೆ ಎಂದು ಅವರು ಮಂಗಳವಾರ ಸಂಸದ ಬಿ.ಶ್ರೀರಾಮುಲು ಅವರ ಗದಗಿನ ಗೃಹಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಸಾಮೂಹಿಕ ಮದುವೆ ಜರುಗಿಸಲು ಎಲ್ಲ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾಲ್ಯ ವಿವಾಹ ಹಾಗೂ ಎರಡನೇ ಸಂಬಂಧದ ಮದುವೆ ತಪ್ಪಿಸಲು ಪಾರದರ್ಶಕ ಕ್ರಮ ಅನುಸರಿಸಲಾಗಿದ್ದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪರಿಶೀಲಿಸಿದ ಅರ್ಹರಿರುವ, ತಹಶೀಲ್ದಾರರು ಅನುಮತಿ £ೀಡಿರುವ ಜೋಡಿಗಳಿಗೆ ಮಾತ್ರ ಸಾಮೂಹಿಕ ವಿವಾಹಕ್ಕೆ ಒಳಪಡಿಸಲಾಗಿದೆ.
ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ನೆರೆಯ ರಾಜ್ಯದ ಪಾಲಕ ಪೋಷಕರು ತಮ್ಮ ಮಕ್ಕಳ ಮದುವೆಯನ್ನು ಇಲ್ಲಿ ನೆರವೇರಿಸಲು ಮುಂದೆ ಬಂದಿದ್ದಾರೆ. ಮದುವೆಗೆ ವಧು-ವರರಿಗೆ ಉಚಿತವಾಗಿ ಬಟ್ಟೆ, ಬಾಸಿಂಗ, ಬಂಗಾರದ ತಾಳಿ, ಬೆಳ್ಳಿಯ ಕಾಲುಂಗುರ ಹಾಗೂ ಆದರ್ಶ ವಿವಾಹ ಯೋಜನೆಯಡಿಯಲ್ಲಿ 10 ಸಾವಿರ ಸಾಮಾನ್ಯ ವರ್ಗದವರಿಗೆ ಹಾಗೂ 50 ಸಾವಿg ಎಸ್.ಸಿ/ಎಸ್.ಟಿ ವರ್ಗದವರಿಗೆÀÀ ಪ್ರೋತ್ಸಾಹ ಧನ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ಮದುಮಕ್ಕಳು, ಪಾಲಕ ಪೋಷಕರು, ಬಂಧು ಬಳಗ ಸೇರಿದಂತೆ ಸಾಮೂಹಿಕ ವಿವಾಹದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಜನರು ಪಾಲ್ಗೋಳ್ಳುವ £ರೀಕ್ಷೆಯನ್ನು ಹೊಂದಲಾಗಿದ್ದು, ಇವರೆಲ್ಲರಿಗೂ ಕೆ.ಎಚ್.ಪಾಟೀಲ ಸಭಾ ಭವನ ಮುಂಭಾಗದಲ್ಲಿ, ಎ.ಪಿ.ಎಂ.ಸಿ.ಮಾಳಗೊಂಡ ಸೊಸೈಟಿ ಆವರಣದಲ್ಲಿ ಹಾಗೂ ಚೇತನಾ ಕ್ಯಾಂಟಿನ ಹತ್ತಿರದ ಆ್ಯಂಗ್ಲೋ ಉರ್ದು ಸ್ಕೂಲ್ ಆವರಣದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು ಊಟದ ವ್ಯವಸ್ಥೆಗೆ ವಿವಿಧ ಸಂಘ ಸಂಸ್ಥೆಗಳಿಂದ ಸುಮಾರು 1500 ಸ್ವಯಂ ಸೇವಕರು ಸ್ವಯಂ ಸ್ಪೂರ್ತಿಯಿಂದ ಮುಂದೆ ಬಂದಿದ್ದಾರೆ. ಊಟಕ್ಕೆ 100 ಕ್ವಿಂmಲ್ ಬುಂದೆ 175 ಕ್ವಿಂಟಲ್ ಅಕ್ಕಿಯ ಅನ್ನ ಹಾಗೂ ಉಪ್ಪಿನಕಾಯಿಯ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾದಾನ ಸಮಿತಿ ಮೈದಾನದಲ್ಲಿ ಸುಮಾರು ಒಂದು ಲಕ್ಷ ಚದರ ಅಡಿಯಲ್ಲಿ ಸುಸಜ್ಜಿತ ಪೆಂಡಾಲ್ ಹಾಕಲು ಕ್ರಮ ಜರುಗಿಸಲಾಗಿದೆ. ಅ. 27 ರಂದು ಗುರುವಾರ ಮುಂಜಾನೆ 11 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗಲಿದ್ದು ಹಿಂದಿನ ದಿನ ಅ. 26 ರಂದು ಬುಧವಾರ ಸಂಜೆ 5.30 ಗಂಟೆಗೆ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಹಾಕಲಾಗಿರುವ ಭವ್ಯ ವೇದಿಕೆಯಲ್ಲಿ ಖ್ಯಾತ ಸಂಗೀತ ಗಾಯಕರಾದ ಗುರುಕಿರಣ ತಂಡ ಹಾಗೂ ಮಂಗಳೂರಿನ ಹೆಜ್ಜೆ ನಾದ ಕಲಾತಂಡಗಳಿಂದÀ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿವೆ.
ಮದುವೆ ಕಾರ್ಯಕ್ರಮಕ್ಕೆ ನಾಡಿನ ಮಠಾಧೀಶರು, ಕೇಂದ್ರದ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು ಹಾಗೂ ಗಣ್ಯ ವ್ಯಕ್ತಿಗಳು ಪಾಲ್ಗೋಳ್ಳುವರು.
ಪತ್ರಿಕಾಗೋಷ್ಠಿಯಲ್ಲಿ ಬ.ಜೆ.ಪಿ ಧುರಿಣರಾದ ಕೆ.ಬನ್ಸಾಲಿ, ಎಮ್. ಎಮ್. ಹಿರೇಮಠ, ಈಶ್ವರ ಮುನವಳ್ಳಿ, ಸತೀಶ ಮುದಗಲ್ಲ, ಕಿರಣ ಭೂಮಾ, ಶಿವಲಿಂಗಯ್ಯ ಸಿದ್ದಾಪುರ, ಅಮರೇಶ ಹಿರೇಮಠ ಅನೇಕ ಮಹ£ೀಯರು ಉಪಸ್ತಿತರಿದ್ದರು.

loading...

LEAVE A REPLY

Please enter your comment!
Please enter your name here