ಗಾಂಧಿಜಿ, ಶಾಸ್ತ್ರೀಜಿಯವರು ದೇಶ ಕಂಡ ಧಿಮಂತ ನಾಯಕರು : ಎಸಿ ಶಿವಾನಂದ ಭಜಂತ್ರಿ -(ಂ)

0
32
loading...

ಗಾಂಧಿಜಿ, ಶಾಸ್ತ್ರೀಜಿಯವರು ದೇಶ ಕಂಡ ಧಿಮಂತ ನಾಯಕರು : ಎಸಿ ಶಿವಾನಂದ ಭಜಂತ್ರಿ

ಕನ್ನಡಮ್ಮ ಸುದ್ದಿ ಬೈಲಹೊಂಗಲ

ಅಹಿಂಸಾ ಚಳುವಳಿಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯ ಮಹಾತ್ಮಾ ಗಾಂಧಿಜಿಯವರು ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

ಅವರು ರವಿವಾರ ಪಟ್ಟಣದ ತಾಲೂಕಾ ಸಭಾಭವನದಲ್ಲಿ ಮಹಾತ್ಮಾಗಾಂಧಿಜಿ, ಮಾಜಿ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರೀ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಗಾಂಧಿಜಿ ಅವರು ಜಗತ್ತು ಕಂಡ ಅತ್ಯಂತ ಧೀಮಂತ ನಾಯಕರು ಸ್ವಾತಂತ್ರ್ಯಾ ಪೂರ್ವದಲ್ಲಿ ಅನೇಕ ಚಳುವಳಿಗಳನ್ನು ಮಾಡಿ ಭಾರತದ ಶಕ್ತಿ ಏನೆಂಬುವದನ್ನು ಬ್ರಿಟಿಷರಿಗೆ ತೋರಿಸಿ ಅಹಿಂಸೆಯ ಮೂಲಕ ದೇಶವನ್ನು ಅವರ ಸಂಕೋಲೆಯಿಂದ ಬಿಡುಗಡೆಗೊಳಿಸಿದರು. ಅವರ ತತ್ವ, ಆದರ್ಶಗಳನ್ನು ಇಂದಿನ ಜನತೆ ಪಾಲಿಸುವದು ಅತ್ಯವಶ್ಯವಾಗಿದೆ ಎಂದರು.

ಲಾಲಬಹಾದ್ದೂರ ಶಾಸ್ತ್ರೀಯವರು ಅತ್ಯಂತ ಸರಳ ಜೀವಿಯಾಗಿದ್ದು ಎಲ್ಲರಿಗೂ ಆದರ್ಶವಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೆ ಆದ ಕೊಡುಗೆ ನೀಡಿದ ಅವರು ತಮ್ಮ ಆಡಳಿತದ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡ, ದೀನ ದಲಿತರ ಉದ್ದಾರಕ್ಕಾಗಿ ಹಗಲಿರುಳು ಶ್ರಮಿಸಿ ಜನಮಾಸನದಲ್ಲಿ ಅಜರಾಮರವಾಗಿದ್ದಾರೆ. ಈ ಇಬ್ಬರ ಮಹನೀಯರ ಜನ್ಮದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ಸ್ವಚ್ಚ ಮತ್ತು ಸುಂದರವಾಗಿ ಕಾಣುವ ಉದ್ದೇಶದಿಂದ ಸ್ವಚ್ಚ ಭಾರತ ಅಭಿಯಾನ ಯೋಜನೆ ಘೋಷಿಸಿದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.

ತಹಶೀಲ್ದಾರ ಪ್ರಕಾಶ ಗಾಯಕವಾಡ ಮಾತನಾಡಿ, ಮಹಾತ್ಮಾ ಗಾಂಧಿಜಿ, ಲಾಲಬಹಾದ್ದೂರ ಶಾಸ್ತ್ರೀಯವರು ಕೇವಲ ವ್ಯಕ್ತಿಗಳಾಗಿರಲಿಲ್ಲ ಅವರು ದೇಶದ ಶಕ್ತಿಯಾಗಿದ್ದರು. ಯುವಕರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ವೇದಿಕೆಯ ಮೇಲೆ ತಾಪಂ ಸಿಇಓ ವಿ.ಜಿ.ಹಿತ್ತಲಮನಿ, ಕ್ಷೇತ್ರಶಿಕ್ಷಣಾಧಿಕಾರಿ ಶರೀಫ ನದಾಫ, ಸಿಡಿಪಿಓ ಎ.ಎಸ್‌.ಮರಕಟ್ಟಿ, ಉಪತಹಶೀಲ್ದಾರ ಜಯದೇವ ಅಷ್ಟಗೀಮಠ, ಎಹ್‌.ಕೆ.ಒಂಟಗೋಡಿ, ಸ್ವಾತಂತ್ರ್ಯ ಹೋರಾಟಗಾರ ಅಣ್ಣಪ್ಪ ಕಂಠಿ ಇದ್ದರು.

ಈ ಸಂದರ್ಭದಲ್ಲಿ ಶಿರಸ್ತೇದಾರ ಶ್ರೀಕಾಂತ ಬೆಟಗೇರಿ, ಕಂದಾಯ ನಿರೀಕ್ಷಕರಾದ ವಿ.ಬಿ. ಬಡಗಾವಿ, ಐ.ಕೆ.ಖುಂದುನಾಯ್ಕ, ಗ್ರಾಮಲೆಕ್ಕಾಧಿಕಾರಿಗಳಾದ ವಿಶ್ವನಾಥ ಚತ್ರಾಚಾರಿಮಠ, ಎಂ.ಎಂ.ಮಾವೂತ, ವಿರುಪಾಕ್ಷ ಕುಡಸೋಮಣ್ಣವರ, ಕುಮಾರ ಲಕ್ಕನಗೌಡರ, ಫಕೀರಯ್ಯ ಕೆಳಗೇರಿ, ಶ್ರೀದೇವಿ ಸಂಗೊಳ್ಳಿ, ನೀಲವ್ವ ಮಡಿವಾಳರ, ಸುಮಾ ಹಿರೇಮಠ, ಮಂಜುನಾಥ ಇಳ್ಳೂರ, ರಾಮು ಹಿಟ್ಟಣಗಿ, ಅನು ರಾಮದುರ್ಗ, ಎಲಿಗಾರ, ಮಲ್ಲಿಕಾರ್ಜುನ ಸನದಿ, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು ಸಾರ್ವಜನಿಕರು ಇದ್ದರು.

ಬಸವರಾಜ ಭರಮಣ್ಣವರ ಸ್ವಾಗತಿಸಿ, ನಿರೂಪಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು ಶ್ರಮಾದಾನದಲ್ಲಿ ಪಾಲ್ಗೊಂಡು ಜನ್ಮದಿನವನ್ನು ವಿಶಿಷ್ಟವಾಗಿ ಆಚರಣೆ ಮಾಡಿದರು.

loading...

LEAVE A REPLY

Please enter your comment!
Please enter your name here