ಗೊಂದಲದ ಗೂಡಾದ ರಾಜ್ಯೋತ್ಸವ ಪೂರ್ವಬಾವಿ ಸಭೆ

0
17
loading...

ಕನ್ನಡಮ್ಮ ಸುದ್ದಿ ಬೈಲಹೊಂಗಲ ಪ್ರಸಕ್ತ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲಾಗುವದೆಂದು ತಹಶೀಲ್ದಾರ ಪ್ರಕಾಶ ಗಾಯಕವಾಡ ಹೇಳಿದರು. ಅವರು ಪಟ್ಟಣದ ತಾಲೂಕಾ ಸಭಾಭವನದಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕನ್ನಡದ ಹಬ್ಬವನ್ನು ವಿಜೃಂಭನೆಯಿಂದ ಆಚರಿಸಲಾಗುವದು. ಅಂದು ಶಾಲಾ ಮಕ್ಕಳ ರೂಪಕಗಳ ಮೆರವಣಿಗೆ ಪಟ್ಟಣದ ಪುರಸಭೆ ಆವರಣದಿಂದ ತೆರಳಿ ಕಿತ್ತೂರ ರಾಣಿ ಚನ್ನಮ್ಮ ಸಮಾಧಿ ಸ್ಥಳದ ಮುಂಭಾಗದ ವೇದಿಕೆಯಲ್ಲಿ ಸಮಾರಂಭ ಜರುಗುವದು. ಕನ್ನಡದ ನಾಡು, ನುಡಿ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವಿರುತ್ತದೆ ಎಂದರು. ಈ ಬಾರಿಯ ರಾಜ್ಯೋತ್ಸವ ಆಚರಣೆ ವಿಶಿಷ್ಟ ವಾಗಿಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟಣೆಗಳು, ಸಾರ್ವಜನಿಕರು, ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿ ಸಹಕಾರ ನೀಡಬೇಕೆಂದರು. ಸಭೆಯಲ್ಲಿ ಗೊಂದಲ: ಪ್ರತಿ ವರ್ಷ ಚನ್ನಮ್ಮ ಸಮಾಧಿ ಸ್ಥಳದ ಮುಂಭಾಗದಲ್ಲಿ ತಾಲೂಕಾ ಆಡಳಿತದಿಂದ ಹಾಕುವ ವೇದಿಕೆಯನ್ನು ಕರವೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡಲು ಉಪಯೋಗಿಸುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ನವ ನಿರ್ಮಾಣ ತಾಲೂಕಾ ಅಧ್ಯಕ್ಷ ಪಡೆ ಶಿವಾನಂದ ಇಂಚಲ ಸರ್ಕಾರಿ ವೇದಿಕೆಯನ್ನು ಎಲ್ಲ ಕನ್ನಡಪರ ಸಂಘಟಣೆಗಳಿಗೆ ಸಮನಾಗಿ ಹಂಚಬೇಕು. ತಾಲುಕಾ ಆಡಳಿತದಿಂದ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ಎಂದು ಪರಿಗಣಿಸಲಾಗುತ್ತಿದೆ ಎಂದಾಗ ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ ಇದನ್ನು ವಿರೋಧಿಸಿ ಪ್ರತಿಸಲ ತಾಲೂಕಾ ಆಡಳಿತ ನಿರ್ಮಿಸುವ ವೇದಿಕೆಯನ್ನು ನಾವು ಬಳಸಿಕೊಂಡು ಅವರಿಗೆ ಅರ್ಧ ಹಣ ನೀಡುತ್ತಿದ್ದೇವೆ ಎಂದಾಗ ಇಬ್ಬರ ನಡುವೆ ವಾದ ವಿವಾದ ನಡೆದು ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿತು ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಗಾಯಕವಾಡ, ಕ್ರೈಂ ಪಿಎಸ್‌ಐ ಎಂ.ಎಸ್‌.ಮಠಪತಿ ಮದ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. ವೇದಿಕೆಯ ಮೇಲೆ ತಾಪಂ ಸಹಾಯಕ ನಿರ್ದೇಶಕ ಸುಭಾಷ ಸಂಪಗಾಂವಿ, ಕ್ಷೇತ್ರ ಶಿಕ್ಷಣಾಧಿಕಾರಿ ಶರೀಫ ನದಾಫ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಕೆಆರ್‌ಸಿಇ ಮಹಾವಿದ್ಯಾಲಯ ಪ್ರಾಚಾರ್ಯ ಬಿ.ಜಿ.ಕಟ್ಟಿ, ಚನಬಸಪ್ಪ ಹೊಸಮನಿ ಇದ್ದರು. ಈ ಸಂದರ್ಭದಲ್ಲಿ ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟಣೆಗಳ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.

loading...

LEAVE A REPLY

Please enter your comment!
Please enter your name here