ಗ್ರಾಮ ಪಂಚಾಯತಿಯ ಸಂಘ ರಚನೆ: ವಿವೇಕರಾವ

0
26
loading...

ಕೋಹಳ್ಳಿ : ರಾಜ್ಯದ ಎಲ್ಲ ಪಂಚಾಯತಿ ಸದಸ್ಯರಿಗೂ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯರಾದ ವಿವೇಕರಾವ ಪಾಟೀಲ ಹೇಳಿದರು.
ಅವರು ಸಮೀಪ ಅಡಹಳ್ಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಇಂದು ರಾಜ್ಯದ ಅನೇಕ ನೌಕರರ ಸಂಘದ ಸಂಘಗಳಿವೆ, ಆದರೆ ಚುನಾಯಿತ ಪ್ರತಿನಿಧಿಗಳ ಸಂಘಗಳಿಲ್ಲ, ಇದರಿಂದ ಹೊಸದಾಗಿ ಗ್ರಾಮ ಪಂಚಾಯತಿಯ ಅನೇಕ ಸದಸ್ಯರಿದ್ದರು, ಸದಸ್ಯರ ಮೂಲ ಸೌಲಭ್ಯಗಳನ್ನು ಸಂಘಟನೆಯ ಮೂಲಕ ಪಡೆಯಲು ಸಂಘಗಳನ್ನು ರಚನೆ ಮಾಡಲಾಗಿದೆ. ಇದರಿಂದ ಪಂಚಾಯತಿ ಸದಸ್ಯರಿಗೆ ಅನುಕೂಲವಾಗುವುದು ಹಾಗೂ ಸ್ಥಳೀಯ ಗ್ರಾಮದಲ್ಲಿರುವ ಎಲ್ಲ ಕೆಲಸಗಳನ್ನು ಪ್ರಾಮಾಣಿಕವಾಗಿ ಈಡೇರಿಸಲಾಗುವುದು ಎಂದು ಹೇಳಿದರು. ತಾ.ಪಂ. ಸದಸ್ಯರಾದ ಶಿವು ಗುಡ್ಡಾಪೂರ ಮಾತನಾಡಿ, ಅಡಹಳ್ಳಿ ಹಾಗೂ ಅಡಹಳ್ಳಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡ, ಜಲಕುಂಭ, ಪಶು ಆಸ್ಪತ್ರೆ, ಬಸವೇಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರ ವತಿಯಿಂದ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಎಲ್ಲ ಗ್ರಾಮ ಪಂಚಾಯತಿ ಸದಸ್ಯರನ್ನು ವಿಧಾನ ಪರಿಷತ್‌ ಸದಸ್ಯರು ಸನ್ಮಾನಿಸಿದರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಸವರಾಜ ಬುಟಾಳಿ, ಸತ್ಯೆಪ್ಪಾ ಬಾಗೇನ್ನವರ, ಸಾತಗೌಡಾ ಪಾಟೀಲ, ಸುರೇಶ ಇಚೇರಿ, ಬಾಬು ವಾಘಮೋರೆ, ಪಾಟೀಲ ಸರ್‌, ಸದಾಶಿವ ಹರಪಾಳೆ, ತುಕಾರಾಮ ದೇವಖಾತೆ, ತುಕಾರಾಮ ಪಡತಾರೆ, ಶ್ರೀಶೈಲ ತಾಂವಶಿ, ಪಿಡಿಓ ಸುರೇಶ ದೊಡಮನಿ, ಮಹಾದೇವ ಹಿಪ್ಪರಗಿ, ಸುನೀಲ ಕೆಂಚಣ್ಣವರ, ಘೂಳಪ್ಪಾ ಕೋಳಿ, ಎಸ್‌. ಪಿ. ತಾಂವಶಿ, ಶಂಕರ ಹಿಪ್ಪರಗಿ, ಶಂಕರ ಗುಡದಿನ್ನಿ, ಸುರೇಶ ನಾಟೀಕಾರ, ಅಡಿವೆಪ್ಪಾ ಕೆಂಚಣ್ಣವರ, ಪರಮಾನಂದ ಅಥಣಿ, ಲಕ್ಷ್ಮಣ ಕೆಂಚಣ್ಣವರ, ಶ್ರೀಕಾಂತ ಪತ್ತಾರ, ಸತ್ಯಪ್ಪಾ ಸನದಿ, ರಾಮು ಕೋಳಿ, ಮೋಹನ ಸೂರ್ಯವಂಶಿ, ಮಹಾದೇವ ಪಾಟೀಲ, ಸಂಗಪ್ಪಾ ಗುಡ್ಡಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here