ಜಿಲ್ಲಾ ಆಸ್ಪತ್ರೆಯನ್ನು ಸರಿಪಡಿಸುವಂತೆ ಮನವಿ

0
25
loading...

ಕನ್ನಡಮ್ಮ ಸುದ್ದಿ ಬೆಳಗಾವಿ
ನಗರದ ಜಿಲ್ಲಾ ಆಸ್ಪತ್ರೆಯು ಅವ್ಯವಸ್ತೆಯ ಆಗರವಾಗಿದೆ. ಅಲ್ಲದೆ ಜನಸಾನ್ಯರಿಗೆ ಸರಿಯಾಗಿ ಸ್ಪಂದನೆ ನೀಡದಿರುವುದರಿಂದ ಜನರು ಸಮಸ್ಯೆ ಅನುಭವಿಸುವದ್ದನ್ನು ಪ್ರಶ್ನಿಸಿ ಜಾಗೃತ ನಾಗರಿಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಆಸ್ಪತ್ರೆಯಲ್ಲಿ ಜನನ, ಮರಣ, ನೋದಣಿ ಕನ್ನಡದಲ್ಲಿ ಬರೆದ ಅರ್ಜಿಗಳನ್ನು ಸ್ವಿಕರಿಸುತ್ತಿಲ್ಲ ಹಾಗೂ ಅರ್ಜಿಗಳನ್ನು ಪೂರೈಸುತ್ತಿಲ್ಲ. ಆಸ್ಪತ್ರೆಯ ಸಿಬ್ಬಂದಿಗಳು ಸಾರ್ವಜನಿಕರಿಗೆ ಸರಿಯಾಗಿ ಕೆಲಸ ಮಾಡಿಕೊಡುತ್ತಿಲ್ಲ ಹಾಗೂ ಹೆರಿಗೆ ವಾರ್ಡಿನಲ್ಲಿ ಸ್ವಚ್ಚತೆಯ ಕೊರತೆ ಎದ್ದು ಕಾಣುತ್ತಿದೆ ಇವುಗಳನ್ನೆಲ್ಲಾ ಕೂಲಂಕುಶವಾಗಿ ಪರಿಶೀಲಿಸಿ ಸಾರ್ವಜನಿಕರ ಹಿತ ಕಾಪಾಡಬೇಕೆಂದು ಮನವಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಮಹೇಶ ಗಡಿವಡ್ಡರ, ರಾಜಕುಮಾರ ಟೋಪಣ್ಣವರು, ಹನಮಂತ ಗರಗೊಟಿ, ವಿನಾಯಕ ಪಾಟೀಲ, ಗಣೇಶ, ಭೀಮರಾವ್, ವಿನೋದ, ದುರ್ಗಪ್ಪ, ರವಿ ಗಡಿವದ್ದರ, ಉಮೇಶ ಗಡಿವದ್ದರ, ಪರಸುರಾಮ ಸೇರಿದಂತೆ ಅನೇಕರು ಎದ್ದರು.

loading...

LEAVE A REPLY

Please enter your comment!
Please enter your name here