ಟಿಸರ್‌ ಗ್ಯಾಸ್‌ ಮಿಶ್ರಿತ ಗಾಳಿ: ಆತಂಕ

0
20
loading...

ಕನ್ನಡಮ್ಮ ಸುದ್ದಿ

ಬೆಳಗಾವಿ:18 ನಗರದ ಎಸ್ಪಿ ಕಚೇರಿ ಹತ್ತಿರದ ಪೊಲೀಸ್‌ ಮೈದಾನದಲ್ಲಿ ಮಹಿಳಾ ಪೊಲೀಸ್‌ ಪರೀಕ್ಷಾರ್ಥಿ ಅಭ್ಯರ್ಥಿಗಳಿಗೆ ಟಿಸರ್‌ ಗ್ಯಾಸ್‌ ಬಳಕೆಗೆ ಸಂಬಂಧಿಸಿದಂತೆ ತರಬೇತಿ ನೀಡುವ ಸಂದರ್ಭದಲ್ಲಿ ಗಾಳಿಯಲ್ಲಿ ಮಿಶ್ರಣಗೊಂಡ ಗ್ಯಾಸ್‌ ಸುಮಾರು 200 ಮೀಟರ್‌ ಪ್ರದೇಶ ವ್ಯಾಪ್ತಿಯಲ್ಲಿ ಪಸರಿಸಿದ ಕಾರಣ ಸುತ್ತಲಿನ ಸಾರ್ವಜನಿಕರು ತಾತ್ಕಾಲಿಕ ಕಣ್ಣುರಿಯಿಂದ ಬಳಲಿದ್ದರಲ್ಲದೆ, ಆತಂಕಗೊಂಡ ಘಟನೆ ಮಂಗಳವಾರ ನಡೆದಿದೆ.

ಇಲ್ಲಿನ ಸಾರ್ವಜನಿಕರು ಮುಖ ಮುಚ್ಚಿಕೊಂಡು ಕಣ್ಣುರಿ ಹೋಗಲಾಡಿಸಿಕೊಳ್ಳುವ ಪರದಾಟದಲ್ಲಿದ್ದರು. ಕೆಲವರು ಯಾವುದೋ ಆತಂಕ ಕಾದಿದೆ ಎನ್ನುವ ಭಯದಲ್ಲಿದ್ದರು. ಬಹುತೇಕ ಈ ಗ್ಯಾಸ್‌ನಿಂದ ಎಸ್ಪಿ ಕಚೇರಿಯ ಹೊರ ಪರಿಸರದಲ್ಲಿಯೂ ಆತಂಕ ಮನೆಮಾಡಿಕೊಂಡಿತ್ತು.

ಈ ಕುರಿತು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಅವರನ್ನು ಪತ್ರಿಕೆ ಕೇಳಿದಾಗ, 159 ಪರೀಕ್ಷಾರ್ಥಿಗಳಿಗೆ ಟಿಸ್‌ರ್‌ ಗ್ಯಾಸ್‌ ಬಳಕೆಯ ತರಬೇತಿ ನೀಡುತ್ತಿದ್ದ ಸಂದರ್ಭದಲ್ಲಿ ಗ್ಯಾಸ್‌ ಗಾಳಿಯಲ್ಲಿ ಮಿಶ್ರಣಗೊಂಡ ಕಾರಣ ಈ ಸಮಸ್ಯೆಯಾಗಿದೆ. ಇದರಿಂದ ಯಾವುದೇ ಅಪಾಯಗಳಿಲ್ಲ. ತಾತ್ಕಾಲಿಕವಾಗಿ ಕಣ್ಣುರಿ ಬಂದು ನಂತರ ಸರಿಹೋಗುತ್ತದೆ ಇದರಲ್ಲಿ ಯಾವುದೇ ರಸಾಯಣ ಮಿಶ್ರಣ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

loading...

LEAVE A REPLY

Please enter your comment!
Please enter your name here