ದೂಧಗಂಗಾ ಬಾಯ್ಲರ ಪ್ರದೀಪನ ಹಾಗೂ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ

0
28
loading...


ಚಿಕ್ಕೋಡಿ 11: ಸ್ಥಳೀಯ ಶ್ರೀ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ 2016-17ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯಲರ ಪ್ರದೀಪನ ಹಾಗೂ ಕಬ್ಬು ನುರಿಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ದೊರೆಯಿತು.
ಮುಂಜಾನೆ ನಿಡಸೋಸಿಯ ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬಾಯಲರ ಪ್ರದೀಪನ ನೇರವೇರಿತು. ನಂತರ ಕಾರ್ಖಾನೆಯ ರೂವಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ|| ಪ್ರಭಾಕರ ಕೋರೆಯವರ ಉಪಸ್ಥಿತಿಯಲ್ಲಿ, ಕೇನ ಕ್ಯಾರಿಯರದಲ್ಲಿ ಕಬ್ಬು ಹಾಕುವ ಮೂಲಕ ಸನ್ 2016-17ನೇ ಸಾಲಿನ ಕಬ್ಬು ಅರೆಯುವ ಕಾರ್ಯ ಚಾಲನೆ ನೀಡಲಾಯಿತು.
ಪ್ರಾರಂಭದಲ್ಲಿ ಕಾರ್ಖಾನೆಯ ಅಧ್ಯಕ್ಷ ಹಾಗೂ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಉಪಾಧ್ಯಕ್ಷ ಅಮಿತ ಕೋರೆ, ಉಪಾಧ್ಯಕ್ಷ ಭರತೇಶ ಬನವಣೆ ಹಾಗೂ ಸಂಚಾಲಕ ಮಂಡಳಿಯವರು ತೂಕ ಮಾಡುವ ಯಂತ್ರ ಮತ್ತು ಕೇನ ಕ್ಯಾರಿಯರಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಸಂಚಾಲಕರುಗಳಾದ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ, ಅಜೀತ ದೇಸಾಯಿ, ಸಾತಪ್ಪಾ ಸಪ್ತಸಾಗರ, ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಕೋರೆ, ಪರಸಗೌಡಾ ಪಾಟೀಲ, ತಾತ್ಯಾಸಾಹೇಬ ಕಾಟೆ, ಕಲ್ಲಪ್ಪಾ ಮೈಶಾಳೆ, ಸುಭಾಷ ಕಾತ್ರಾಳೆ, ಸಂದೀಪ ಪಾಟೀಲ, ಮಹಾವೀರ ಮಿರ್ಜಿ, ಬಾಳಗೌಡಾ ರೇಂದಾಳೆ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀಶೈಲ ಎಸ್. ಶಿಂತ್ರಿ ಹಾಗೂ ಕಾರ್ಖಾನೆಯ ರೈತಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here