ದೇಶಿಯ ಸಂಸ್ಕøತಿ ಉಳಿಸಿ- ಬೆಳೆಸಿ: ಡಾ. ಸಾವಿತ್ರಿ

0
24
loading...

ಗಜೇಂದ್ರಗಡ: ಭಾರತೀಯ ಮಹಿಳೆಗೆ ವಿಶ್ವದಲ್ಲಿಯೇ ಅತ್ಯಂತ ಗೌರವಯುತ ಸ್ಥಾನವಿದ್ದು, ಪಾಶ್ಚೀಮಾತ್ಯ ಸಂಸ್ಕøತಿಗೆ ಮಾರುಹೋಗದೆ ದೇಶಿಯ ಸಂಸ್ಕøತಿ ಉಳಿಸಿ-ಬೆಳೆಸುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ. ಮಹಿಳೆ ಇಂದು ಪುರುಷನಷ್ಟೇ ಸರಿ ಸಮಾನಳಾಗಿ ಹೊರ ಹೊಮ್ಮಿದ್ದಾಳೆ. ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಸೇನೆ, ಶೈಕ್ಷಣಿಕ, ರಾಜಕೀಯ ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನ ಸಾಧನೆ ಮೆರೆಯುತ್ತಿದ್ದಾಳೆ ಎಂದು ಉಪನ್ಯಾಸಕಿ ಡಾ. ಸಾವಿತ್ರಿ ಪವಾರ ಹೇಳಿದರು.
ಪಟ್ಟಣದ ಮೈಸೂರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಾರದ ಸಾಹಿತ್ಯ ಚಿಂತನಗೋಷ್ಠಿಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರಕೃತಿಯ ನಿಯಮದಲ್ಲಿ ಯಾವುದು ಬದಲಾವಣೆಯಾಗಿಲ್ಲ. ಮನುಷ್ಯ ಮನೋಭಾವನೆಗಳು ಬದಲಾಗುತ್ತ ಬಂದಿವೆ. ಆದರೆ, ಪುರುಷ ಮಾತ್ರ ಸ್ತ್ರೀ ಅಭಿವೃದ್ದಿಯನ್ನು ಸಹಿಸುತ್ತಿಲ್ಲ. ಮಹಿಳಾ ಅಭಿವೃದ್ದಿಯಿಂದ ಸಮಾಜದ ಪ್ರಗತಿ ಸಾಧ್ಯ. ಈ ಹಿನ್ನೆಲೆಯಲ್ಲಿ ಸ್ತ್ರೀಯರ ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕಿದೆ ಎಂದ ಅವರು, ಟಿ.ವ್ಹಿ. ಮಾಧ್ಯಮಗಳಲ್ಲಿ ಬರುತ್ತಿರುವ ಕೆಟ್ಟ ಕೆಟ್ಟ ಧಾರಾವಾಹಿಗಳಿಗೆ ಬೆನ್ನು ಬಿದ್ದು ಸಂಸಾರದಲ್ಲಿ ಒಡಕು ಉಂಟು ಮಾಡಿಕೊಳ್ಳದೇ ಹೆಣ್ಣಿಗೆ ಶತ್ರು ಎನ್ನುವ ಮಾತನ್ನು ಸುಳ್ಳಾಗಿಸಿ ಪರಸ್ಪರ ಗೌರವಿಸುತ್ತ ಸಹಾಯ ಸಹಕಾರದಿಂದ ಸುಂದರ ಸಮಾಜ ಕಟ್ಟಬೇಕಿದೆ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪುರುಷರಿಗೆ ಸರಿಸಮಾನರಾಗಿ ಬೆಳೆಯಲು ಮಹಿಳೆಯರು ಸಂಘಟನಾತ್ಮಕ ಶಕ್ತಿಯನ್ನು ರೂಢಿಸಿಕೊಳ್ಳಬೇಕು .ಇದರಿಂದ ಮಹಿಳೆಯರು ಇನ್ನು ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯವೆಂದರು.
ಸಲ್ಮಾ ಮುಧೋಳ ಕವನ ವಾಚಿಸಿದರು. ಅಧ್ಯಕ್ಷತೆಯನ್ನು ಕಸಾಪ ತಾಲೂಕ ಅಧ್ಯಕ್ಷ ಐ.ಆರ್. ರೇವಡಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶೃತಿ ಗೋಗಿ, ವಿಜಯಲಕ್ಷ್ಮಿಕೆ., ಶೇತಾ ಗಾಯಕವಾಡ. ಜಗದೀಶ ದುದ್ಗಿ, ಎಸ್.ಎಂ ಅಗಸಿಬಾಗಿಲ, ಎಸ್.ಎಸ್. ನರೇಗಲ್, ದಾವಲಸಾಬ ತಾಲಿಕೋಟಿ, ಶೀತ¯ ಓಲೇಕಾರ, ಶಂಕರ ಕಲ್ಲಿಗನೂರ, ಬಸವರಾಜ ಮುನವಳ್ಳಿ, ಭೀಮಾಂಬಿಕಾ ನೂಲ್ವಿ, ಇತರರು ಉಪಸ್ಥಿತರಿದ್ದರು.
ಅನ್ನಪೂರ್ಣಾ ರಾಠೋಡ ನಿರೂಪಿಸಿ ವಂದಿಸಿದರು. ಶರಣಮ್ಮ ಅಂಗಡಿ ಸ್ವಾಗತಿಸಿದರು.

loading...

LEAVE A REPLY

Please enter your comment!
Please enter your name here