ದೈಹಿಕವಾಗಿ ಹಾಗೂ ಮಾನಸಿಕವಾಗಿ ಗಟ್ಟಿ ತನದಿಂದ ಇದ್ದರೆ ಮಾತ್ರ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಾದ್ಯ

0
20
loading...

ಮೂಡಲಗಿ: ಸತತ ಪ್ರಯತ್ನ, ನಿರಂತರ ಅಭ್ಯಾಸ, ಗುರುವಿನ ಮಾರ್ಗದರ್ಶನ ದೈಹಿಕವಾಗಿ ಹಾಗೂ ಮಾನಸಿಕವಾಗಿ ಗಟ್ಟಿ ತನದಿಂದ ಇದ್ದರೆ ಮಾತ್ರ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಾದ್ಯ ಎಂದು ಮೂಡಲಗಿ ಕ್ಷೇತ್ರ ಶಿP್ಪ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಅವರು ಶನಿವಾರ ಮೇಘಾ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿಯಲ್ಲಿ ಓದುತ್ತಿರುವ ಪ್ರತಿಭಾನ್ವಿತ ಎಸ್ಸಿ ಮತ್ತು ಎಸ್ಟಿ ಮಕ್ಕಳಿಗೆ ಆಯೋಜಿಸಿದ್ದ ದಸರಾ ರಜೆ ಅವಧಿಯಲ್ಲಿ ವಿಶೇಷ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳು ದಸರಾ ರಜಾ ಅವಧಿಯಲ್ಲಿ ಕಾಲ ಕಳೆಯದೆ ಶಿಕ್ಷಣ ಇಲಾಖೆ ಆಯೋಜಿಸಿರುವ ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೋಳ್ಳಬೇಕು. ವಿಶೇಷ ನೂರಿತ ಸಂಪನ್ಮೂಲ ಶಿಕ್ಷಕರಿದ್ದು ಅವರಿಂದ ವಿವಿಧ ವಿಷಯಗಳ ಕುರಿತು ಕ್ಲೀಷ್ಠಾಂಶ, ಸುಲಭ ಕಲಿಕಾ ವಿಧಾನಗಳನ್ನು ಕಲಿಯ ಬೇಕು ಹಾಗೂ ಮುಂದಿನ ಜೀವನದಲ್ಲಿ ಉನ್ನತ ವ್ಯಾಸಂಗ ಹಾಗೂ ಉನ್ನತ ಕನಸುಗಳನ್ನು ನನಸಾಗಿಸಿಕೊಳ್ಳಲು ಸಹಾಯಕವಾಗುವದು ಎಂದು ನುಡಿದರು.
ಹಳ್ಳೂರ ಜಿ.ಪಂ ಸದಸ್ಯೆ ವಾಸಂತಿ ತೇರದಾಳ ಮಾತನಾಡಿ, ಸರಕಾರವು ಎಸ್ಸಿ, ಎಸ್ಟಿ ಮಕ್ಕಳಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸಿದ್ದು ಅದರ ಸದುಪಯೋಗ ಪಡೆದುಕೊಂದು ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳ ಬೇಕೆಂದು ಹೇಳಿದರು.
ವಿವಿಧ ದಲಿತ ಸಂಘಟನೆಯ ಮುಖಂಡರುಗಳಾದ ಸತ್ತೇಪ್ಪ ಕರಬಡಿ, ರಮೇಶ ಸಣ್ಣಕ್ಕಿ, ಭೀಮಶಿ ಸಣ್ಣಕ್ಕಿ ಮಾತನಾಡಿ, ದಸರೆ ರಜೆಯಲ್ಲಿ ತರಭೇತಿ ಆಯೋಜಿಸಿದ್ದು ಸಂತಸದ ಸಂಗತಿಯಾಗಿದ್ದು, ವಿಶೇಷವಾಗಿ ಎಸಿ ಮತ್ತು ಎಸ್ಟಿ ಜನಾಂಗಕ್ಕೆ ಹೆಚ್ಚಿನ ಒತ್ತು ನೀಡಿರುವದನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಕಮಲವ್ವ ಹಳಬರ, ಗ್ರಂಥಪಾಲಕ ಬಿ.ಪಿ ಬಂದಿ, ಮಾಜಿ ಪುರಸಭೆ ಅಧ್ಯಕ್ಷ ರವೀಂದ್ರ ಸಣ್ಣಕ್ಕಿ, ಮೇಘಾ ಸಂಸ್ಥೆಯ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪುರಸಭೆ ಸದಸ್ಯ ಮರೆಪ್ಪ ಮರೆಪ್ಪಗೋಳ, ಬಿ.ಜೆ.ಪಿ ಜಿಲ್ಲಾ ಎಸ್ಸಿ ಮೊರ್ಚಾ ಉಪಾಧ್ಯಕ್ಷ ಪ್ರಕಾಶ ಮಾದರ, ಡಿ.ಎಸ್.ಎಸ್ ಮುಖಂಡರುಗಳಾದ ಮಾರುತಿ ಕರಬನ್ನವರ, ಅಶೋಕ ಸಿದ್ಲಿಂಗಪ್ಪಗೋಳ, ಶಾಬಪ್ಪ ಸಣ್ಣಕ್ಕಿ, ಬಾಳೇಶ ಬನ್ನಟ್ಟಿ, ಸುರೇಶ ಸಣ್ಣಕ್ಕಿ, ಬಸವರಾಜ ಘೋಡಗೇರಿ, ಇ.ಸಿ.ಒ ಗಳಾದ ಆರ್.ಎಸ್ ಕಡಿ, ಪಿ.ಬಿ ಮದಬಾವಿ, ಬಿ.ಆರ್.ಪಿಗಳಾದ ಬಿ.ಎಮ್ ನಂದಿ, ಪಿ.ಜಿ ಪಾಟೀಲ, ಕೆ.ಎಲ್ ಮೀಶಿ, ಸಿ.ಆರ್.ಪಿ ಸಿ.ಎಸ್ ಮೊಹಿತೆ, ಸಂಪನ್ಮೂಲ ಶಿಕ್ಷಕರಾದ ಆರ್.ಎಸ್ ಅಳಗುಂಡಿ, ಎಸ್.ಸಿ ಅರಗಿ, ಮುಖ್ಯೋಪಾಧ್ಯಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here