ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳು: ಪಾಟೀಲ

0
30
loading...

ಕನ್ನಡಮ್ಮ ಸುದ್ದಿ-ಸಂಕೇಶ್ವರ
ಇಂದು ಯುವ ಜನಾಂಗದಲ್ಲಿ ಬದುಕಿನ ಬದ್ಧತೆ, ಗುರಿ ಸಾಧಿಸುವ ಪರಿಶ್ರಮದ ಪ್ರಯತ್ನ ಕಡಿಮೆಯಾಗಿದೆ. ವ್ಯಕ್ತಿತ್ವ ವಿಕಸನದ ಮಹತ್ವವನ್ನು ಅರಿಯದೆ ನಿರಾಶಾವಾದಿಗಳಾಗಿದ್ದಾರೆ ಎಂದು ಶಿಕ್ಷಕ, ಖ್ಯಾತ ವಾಗ್ಮಿ ವೀರೇಶ ಪಾಟೀಲ ಕರೆ ನೀಡಿದರು.
ಅವರು ಸ್ಥಳೀಯ ವಿಶ್ವನಾಥ ಗಡ್ಡಿ ನಿವಾಸದಲ್ಲಿ ಶರಣ ಸಂಸ್ಕೃತಿ ಅಧ್ಯಯನ ಕೇಂದ್ರ ನಿಡಸೋಸಿ, ಲೋಕ ವಿದ್ಯಾಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ 33ನೇ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿದರು. ತಮ್ಮಲ್ಲಿರುವ ಅವಗುಣ, ದುರ್ಗುಣ ಹಾಗೂ ನಕಾರಾತ್ಮಕ ಧೋರಣೆಗಳನ್ನು ಹೊರಹಾಕಬೇಕು. ವ್ಯಕ್ತಿತ್ವ ವಿಕಸನ ತರಬೇತಿ ಪಡೆಯುವ ಮೂಲಕ ಬರುವಂತದ್ದಲ್ಲ. ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗಬೇಕೆಂದು ಆದರ್ಶ ನಾನು ಏನಿದ್ದೇನೆ? ಏನಾಗಬೇಕೆಂದು ಬಯಸಿದ್ದೇನೆ? ಎಂಬುವದನ್ನು ಪ್ರಶ್ನಿಸಿಕೊಳ್ಳಬೇಕು ಆದರ್ಶ ವ್ಯಕ್ತಿತ್ವ ಕಟ್ಟಿಕೊಳ್ಳಲು ಸದಾವಕಾಲ ಸಕಾರಾತ್ಮಕ ಧೋರಣೆಯೊಂದಿಗೆ ಕ್ರೀಯಾಶೀಲರಾಗಿ ಕಾರ್ಯ ಮಾಡುವುದೇ ವ್ಯಕ್ತಿತ್ವ ವಿಕಸನದ ಧ್ಯೇಯವಾಗಿದೆಯೆಂದರು.
ಸಾನಿಧ್ಯ ವಹಿಸಿದ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರು, ತನ್ನನ್ನು ತನ್ನ ಸಾಮರ್ಥ್ಯವನ್ನು ತಿಳಿದುಕೊಳ್ಳುವುದೇ ವ್ಯಕ್ತಿತ್ವ ವಿಕಸನದ ಉದ್ದೇಶವಾಗಿದೆ. ನಿಮ್ಮ ತಲೆಗೆ ಹೂವು ತಾರನೆ ಹುಲ್ಲು ತಾರೆನು ಎಂದು ಹೇಳಿದ ಅಕ್ಕಮಹಾದೇವಿಯ ಆದರ್ಶ ನಮ್ಮದಾಗಿಸಿಕೊಳ್ಳಬೇಕು. ಯುವಕರು ನಿರಂತರ ಸತ್ಕಾರ್ಯಗಳನ್ನು ಮಾಡಿ ದೇಶದ ¸ತ್ಪ್ರಜೆಗಳಾಗಬೇಕೆಂದು ಆಶೀರ್ವಚನ ನೀಡಿದರು.
ಪ್ರೊ. ಎಲ್‌.ವಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಾಸ್ಯ ಕಲಾವಿದ ಅಜೇಯ ಸಾರಾಪೂರೆ ಹಾಸ್ಯ ಪ್ರಸಂಗಗಳನ್ನು ಹೇಳಿ ಸಭಿಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಸಂಕೇಶ್ವರದ ವೀರಶೈವ ಸಮಾಜದ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಸಂಜಯ ಶಿರಕೋಳಿ, ಎಸ್‌.ಎಸ್‌. ಕೊಣ್ಣೂರಿ, ಪ್ರಭಾಕರ ಪಾಟೀಲ, ಗಣೇಶ ನಡದಗಲ್ಲಿ, ರವಿ ಶೆಟ್ಟಿಮನಿ, ದುಂಡಪ್ಪಾ ಮಗದುಮ, ರಾಜು ಜಿರಳಿ, ಸೋಮಶೇಖರ ಬೆಳವಿ, ಕಿರಣ ನೇಸರಿ, ಹಮೀದಾಬೇಗಂ ದೇಸಾಯಿ, ಅ.ಮ. ಮುಂಡಾಸಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here