ನಿಮ್ಮ ಉತ್ಸವ ಬರಲಿ ನಮ್ಮ ಶಕ್ತಿ ಎನ್ನೆಂಬುದು ತೋರಿಸುತ್ತವೆ: ಶ್ರೀಗಳು

0
22
loading...

ಚನ್ನಮ್ಮನ ಕಿತ್ತೂರು : ಜಿಲ್ಲಾಡಳಿತವು ಈ ರೀತಿಯಾಗಿ ಪತ್ರಿಕಾ ಪ್ರಕಟಣೆಯನ್ನು ಕೊಡುವ ಮುಖಾಂತರ ಕಿತ್ತೂರು ಶಾಸಕರನ್ನು ಸಮರ್ಥಿಸಿಕೊಳ್ಳುತ್ತಿದೆ, ಕಾವಿ ಅರಿವೆಯನ್ನು ತೊಟ್ಟ ನಮ್ಮ ಮೇಲೆ ಶಾಸಕರು ಯಾವ ರೀತಿ ದ್ವೇಷ ಸಾಧಿಸುತ್ತಿದ್ದಾರೆಂದು ಉತ್ಸವದ ಆಮಂತ್ರಣ ಪತ್ತಿಕೆ ನೊಡಿದರೆ ಎಲ್ಲರಿಗೂ ತಿಳಿಯುತ್ತದೆ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿಯ ವೀರಭದ್ರೇಶ್ವರ ಕಲಾಣ್ಯ ಮಂಟಪದಲ್ಲಿ ನಡೆದ ಪ್ರತಿ ವರ್ಷ ನಡೆದುಕೊಂಡು ಬರುತ್ತಿರುವ ಕಿತ್ತೂರು ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಕಲ್ಮಠಶ್ರೀ ಮತ್ತು ನಿಚ್ಚಣಕಿ ಶ್ರೀಗಳನ್ನು ಸಾನಿಧ್ಯದಿಂದ ಕೈ ಬಿಟ್ಟರುವ ಕುರಿತು ನಡೆದ ಮಠದ ಭಕ್ತರ ಮತ್ತು ಪಕ್ಷಾತೀತ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಸುಳ್ಳು ಹೇಳಿಕೆ ಸರಿಯಲ್ಲ.
ಚನ್ನಮ್ಮಾಜೀಯ ಅಭಿಮಾನದಿಂದ ಪ್ರತಿ ವರ್ಷ ಕಿತ್ತೂರು ಉತ್ಸವದಲ್ಲಿ ಭಾಗವಹಿಸುತ್ತಾ ಬಂದಿದ್ದೇವೆ. ಪಾಕಿಸ್ಥಾನದಲ್ಲಿ ನಾವಿಲ್ಲ ಭಾರತದಲ್ಲಿದ್ದೇವೆ ವಾಕ್‌ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಒಳ್ಳೆಯ ಸಂದೇಶ ಮತ್ತು ಮಾರ್ಗದರ್ಶನವನ್ನಾ ನೀಡುವ ತಾಕತ್ತು ಖಾವಿಗೆ ಇದೆ. ಸಮಾಜಕ್ಕೆ ಎಲ್ಲಿ ಅನ್ಯಾಯ ನಡೆಯುತ್ತಿದ್ದೆ. ಅಲ್ಲಿ ಖಾವಿ ಮಾತನಾಡುತ್ತದೆ ಆದರೆ ಇವರು ನಮ್ಮನು ವಿರೋಧಿಗಳ ರೀತಿಯಲ್ಲಿ ನೋಡುತ್ತಿರುವದು ತಪ್ಪು ಶಾಸಕ ಡಿ.ಬಿ.ಇನಾಮದಾರ ಅವರೆ ತಾಲೂಕು ಘೋಷಣೆಯಾಗಿ ನಾಲ್ಕು ವರ್ಷವಾಯಿತು ಎನ್ನು ಮಾಡುತ್ತಿದ್ದಿರಿ ನಿಮ್ಮನ್ನು ನಾವು ನಿದ್ದೆಯಿಂದ ಎಚ್ಚರಿಸಿದ್ದು ತಪ್ಪಾ ? ನೇರವಾಗಿ ಆರೋಪಿಸಿದರು. ಉತ್ಸವಕ್ಕೆ ನಮ್ಮ ಬಹಿಷ್ಕಾರ ಇಲ್ಲ ಬಹಿಷ್ಕಾರ ಹಾಕುವ ಹಕ್ಕುಯಾರಿಗೂ ಇಲ್ಲ. ಶಾಸಕರೆ ಇನ್ನೂ ಒಂದುವರೆವರ್ಷಕ್ಕೆ ನಿಮ್ಮ ಉತ್ಸವ ಬರಲಿ ನಮ್ಮ ಶಕ್ತಿ ಎನ್ನೆಂಬುದನ್ನು ತೋರಿಸುತ್ತೇವೆ ಎಂದು ಸವಾಲು ಹಾಕಿದರು. ನಮ್ಮ ಅಧಿಕಾರಾವಧಿಯಲ್ಲಿ ಉತ್ಸವಕ್ಕೆ ಸರಕಾರದಿಂದ 2 ಲಕ್ಷ ನೀಡಲಾಗುತ್ತಿತು ಆದರೆ ಅದನ್ನು 30 ಲಕ್ಷಕ್ಕೆ ಹೆಚ್ಚಿಸಿ ಸಿ.ಎಂ. ಅವರಿಂದ 40 ಲಕ್ಷ ಹೆಚ್ಚಿನ ಅನುದಾನ ತಂದು ನಾಡಿನ ವಿವಿಧ ಮಠಾಧೀಶರನ್ನು ಕರೆಯಿಸಿ ಅದ್ದೂರಿ ಉತ್ಸವವನ್ನು ಆಚರಿಸುತ್ತಿದ್ದೇವು ಅಲ್ಲದೆ ಮುಖ್ಯಮಂತ್ರಿಗಳಿಂದ ಕಿತ್ತೂರು ಉತ್ಸವಕ್ಕೆ ಆಹ್ವಾನಿಸಿ ಕಿತ್ತೂರು 177ನೇ ಪೂರ್ಣ ಪ್ರಮಾಣದ ತಾಲೂಕ್ಕೆಂದು ಘೋಷಿಸಿ ರಾಜ್ಯ ಪತ್ರವನ್ನು ಹೊರಡಿಸಲಾಗಿದೆ. ಕಲ್ಮಠಶ್ರೀಗಳು ಸೌಮ್ಯ ಸ್ವಭಾವದವರು ಇಂದು ಈ ಘಟನೆಯಿಂದ ಅವರ ಮನಸ್ಸಿಗೆ ನೋಂವುಟಾಗಿದೆ. ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಇದು ಸ್ವಾಮೀಜಿಗಳ ಹೋರಾಟ ಅಲ್ಲ ಇದು ಪರಂಪರೆ ಅಳೆಸುವವರ ವಿರುದ್ದ ಹೋರಾಟ ರಾಜ್ಯದ ಜನತೆಯ ಉತ್ಸವ ಇದು ಕಾಂಗ್ರೇಸ್‌ ಉತ್ಸವಲ್ಲ ಮಠಾಧೀರ ಮೇಲೆ ನಿಮ್ಮ ಗದಾಪ್ರಹಾರ ಸಲ್ಲದು ಶಾಸಕರೆ ನಮ್ಮ ಮೇಲೆ ಗುಂಡು ಹಾರಿಸಿದರು ನಾವು ಹೆದರುವದಿಲ್ಲ ನೀವು ಇಲ್ಲಿ ತರುತ್ತಿರುವ ಅಮೇರಿಕಾ ಪಾಶ್ಚಿಮಾತ ಸಂಸ್ಕೃತಿ ಇಲ್ಲಿ ನಡೆಯದು. ಹಬೀಬ ಶೀಲ್ಲೆದ್ದಾರ ಮಾತನಾಡಿದರು. ಜಿಪಂ ಸದಸ್ಯ ಶಂಕರ ಮಾಡಲಗಿ, ಕಿ.ನಾವಿವ ಸಂಘದ ಅಧ್ಯಕ್ಷ ಜಗದೀಶ ವಸ್ತ್ರದ, ಮಲಪ್ರಭಾ ಸಕ್ಕರೆ ಕಾರ್ಖಾನೆ ನಿರ್ದೇಶಕ ವಿರೇಶ ಕಂಬಳ್ಳಿ, ಮಹಾಲಕ್ಷೀ ಬ್ಯಾಂಕ್‌ ಅಧ್ಯಕ್ಷ ಈರಣ್ಣ ಮಾರಿಹಾಳ, ಮಹಾಂತೇಶ ದೊಡಗೌಡರ, ಪಟ್ಟಣ ಪಂಚಾಯತಿ ಅಧ್ಯಕ್ಷ ಹನೀಪ ಸುತ್ತಗಟ್ಟಿ, ಯ.ರು.ಪಾಟೀಲ, ಬಸವರಾಜ ಕುಪ್ಪಸಗೌಡರ, ಉಮೇಶ ಹಿರೇಮಠ, ಯಲ್ಲಪ್ಪ ವಕ್ಕುಂದ ಹನಮಂತ ಲಂಗೋಟಿ, ದಿನೇಶ ವಳಸಂಗ, ಸಂದೀಪ ದೇಶಪಾಂಡೆ, ಸೈಯದ ಮನ್ಸೂರ, ಶಿವನಶಿಂಗ ಮೋಖಾಶಿ, ಮಹಾದೇವಿ ಮಣವಡ್ಡರ, ಕಲ್ಲಪ್ಪ ಕುಗಟಿ, ಸೇರಿದಂತೆ ಇತರರು ಮಾತನಾಡಿದರು. ತಾಲೂಕು ಪಂಚಾಯತಿ ಅಧ್ಯಕ್ಷ ಶೈಲಾ ಬಸನಗೌಡ ಸಿದ್ರಾಮನಿ, ಜಿಪಂ ಸದಸ್ಯರಾದ ಲಾವಣ್ಯ ಶ್ಯಾಮಸುಂದರ ಶಿಲ್ಲೇದಾರ, ಬಸವ್ವ ಕೋಲಕಾರ, ಪಪಂ ಉಪಾಧ್ಯಕ್ಷ ಕಿರಣ ಪಾಟೀಲ, ಮಲ್ಲಿಕಾರ್ಜುನ ಸಾಣಿಕೊಪ್ಪ, ಸೇರಿದಂತೆ ಸುತ್ತಮುತ್ತಲ್ಲಿನ ಜನತೆ ಸಭೆಯಲ್ಲಿ ಭಾಗವಹಿಸಿತ್ತು.

loading...

LEAVE A REPLY

Please enter your comment!
Please enter your name here