ಪ್ರತ್ಯೇಕ ರಾಜ್ಯ, ಉಮೇಶ ಕತ್ತಿ ಹೇಳಿಕೆ ಬೆಂಬಲಿಸಿದ ಶಾಸಕ ರಾಜು ಕಾಗೆ.

0
20
loading...

ಕನ್ನಡಮ್ಮ ಸುದ್ದಿ-ಮೋಳೆ

ಮಾಜಿ ಸಚಿವ ಉಮೇಶ ಕತ್ತಿ ಪ್ರಸ್ತಾಪಿಸಿರುವ ಉತ್ತರ ಕರ್ನಾಟಕ ರಾಜ್ಯ ರಚನೆಗೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ಶಾಸಕ ರಾಜು ಕಾಗೆ ಹೇಳಿದ್ದಾರೆ.

ಶಾಸಕ ರಾಜು ಕಾಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತಿಯೊಂದು ವಿಷಯದಲ್ಲೂ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿರುವ ಉತ್ತರ ಕರ್ನಾಟಕ ರಾಜ್ಯ ರಚನೆ ಮಾಡುವುದು ಪ್ರಸ್ತುತ ಸಂದರ್ಭದಲ್ಲಿ ಅತೀ ಅವಶ್ಯವೆಂದು ಅಭಿಪ್ರಾಯಪಟ್ಟರು.

ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗ ಉತ್ತರ ಕರ್ನಾಟಕದ ಜನತೆ ಭೇದಭಾವವಿಲ್ಲದೇ ಸಂಪೂರ್ಣ ಬೆಂಬಲ ಸೂಚಿಸುತ್ತ ಬಂದಿದ್ದಾರೆ. ಹೀಗಾಗಿ, ಪ್ರಾದೇಶಿಕ ಸಮಾನತೆಯಿಂದ ಇಂದಿಗೂ ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿರುವ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂದಿರುವ ಮಾಜಿ ಸಚಿವ ಕತ್ತಿಯವರ ಹೇಳಿಕೆಯನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕ ಮಲತಾಯಿತ ಧೋರಣೆಯಿಂದ ಪ್ರತಿ ಕ್ಷೇತ್ರದಲ್ಲಿಯೂ ತಾರತಮ್ಯಕ್ಕೆ ಒಳಗಾಗಿದೆ.ನೀರಾವರಿ, ಶಿಕ್ಷಣ, ಯುವ ಜನತೆಯ ನಿರುದ್ಯೋಗ ಸಮಸ್ಯೆ, ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಹಲವು ವಿಷಯಗಳಲ್ಲದೇ, ಪ್ರಮುಖವಾಗಿ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿಯೂ ಉ.ಕ ಭಾಗ ಸರ್ಕಾರಗಳ ನಿರ್ಲಕ್ಷ್ಯದಿಂದ ಹಿಂದುಳಿದಿದೆ. ಆದ್ದರಿಂದ, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೋಸ್ಕರ ಉ.ಕ ಪ್ರತ್ಯೇಕ ರಾಜ್ಯವನ್ನಾಗಿಸುವುದು ಅತೀ ಅವಶ್ಯವೆಂದು ಶಾಸಕ ರಾಜು ಕಾಗ ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯ ಮೈಸೂರು ಸೇರಿದಂತೆ ಆ ಭಾಗದ ಜನರಿಗೆಕಾವೇರಿ ನದಿ ನೀರಿಗಾಗಿ ಎಲ್ಲರೂ ಪಕ್ಷಾತೀತವಾಗಿ ಒಂದಾಗಿ ನೀರಿಗಾಗಿ ಹೋರಾಡುತ್ತಿದ್ದಾರೆ. ಅದಕ್ಕೆ ನನ್ನದು ಸಂಪೂರ್ಣ ಬೆಂಬಲವಿದೆ. ಆದರೆ ಮೊನ್ನೆ ಬೇಸಿಗೆಯ ಕಾಲದಲ್ಲಿ ಕೃಷ್ಣಾ ನದಿ 4 ತಿಂಗಳುಗಳ ಕಾಲ ಬತ್ತಿ ಹೋಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಆಹಾಕಾರ ಎದ್ದಾಗ ಯಾವೊಬ್ಬು ಮಂತ್ರಿಯಾಗಲಿ, ಮುಖ್ಯಮಂತ್ರಿಗಳಾಗಲಿ ಚಕಾರ ಎತ್ತಲಿಲ್ಲ, ಕುಡಿಯಲು ನೀರಿಲ್ಲದೆ ಕುಡಿಯಲು ಬೆಳಗಾವಿ, ವಿಜಯಪೂರ, ಬಾಗಲಕೋಟ ಜಿಲ್ಲೆಯ ಜನರು ಪರಿತಪಿಸಿದಾಗ ಸರಕಾರ ತಿರುಗಿ ನೋಡಲಿಲ್ಲ, ಇಂಥ ತಾರತಮ್ಯ ಹೋಗಬೇಕಾದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಮಾತ್ರ ಸಾಧ್ಯ ಎಂದು ಹೇಳಿದರು.

loading...

LEAVE A REPLY

Please enter your comment!
Please enter your name here