ಫಣಸೋಲಿಯಲ್ಲಿ “ಆನೆ ದಿನಾಚರಣೆ

0
28
loading...

ಕನ್ನಡಮ್ಮ ಸುದ್ದಿ- ದಾಂಡೇಲಿ : ಅರಣ್ಯ ಇಲಾಖೆ ಹಾಗು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ 62ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಜೊಯಿಡಾ ತಾಲೂಕಿನ ಫಣಸೋಲಿಯಲ್ಲಿ ಆನೆ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಆನೆ ದಿನಾಚರಣೆ ನಿಮಿತ್ತ ಆನೆ ಶಿಬಿರದ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಕೃಷ್ಣ ಪಾಟೀಲ, ರಮೇಶ ನಾಯ್ಕ, ಕಾಳಿ ಹುಲಿ ಯೋಜನೆಯ ನಿರ್ದೇಶಕ ಓ.ಪಾಲಯ್ಯ, ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಪರಿಸರ ಅಭಿವೃದ್ಧಿ ಸಮಿತಿಯವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್-ಪುಸ್ತಕಗಳನ್ನು ವಿತರಿಸಲಾಯಿತು. ದಾಂಡೇಲಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ವೈ..ಎನ್.ಮುನವಳ್ಳಿಯವರು ಆನೆಯ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದರು. ಪ್ರಾಣೇಶ ಕಾರ್ಯಕ್ರಮ ನಿರೂಪಿಸಿದರು. ವಲಯ ಅರಣ್ಯಾಧಿಕಾರಿಗಳಾದ ಕೆ. ರಾಠೋಡ ಸ್ವಾಗತಿಸಿದರು. ಗಜಾನನ ಹೆಗಡೆ ವಂದಿಸಿದರು.

loading...

LEAVE A REPLY

Please enter your comment!
Please enter your name here