ಬಾಂಧವ್ಯ ವೃದ್ಧಿಸುವ ಹಳೆ ವಿದ್ಯಾರ್ಥಿಗಳ ಸಂಘ

0
51
loading...

ಗಜೇಂದ್ರಗಡ: ಹಳೆಯ ವಿದ್ಯಾರ್ಥಿಗಳ ಸಂಘಗಳು ಪ್ರಸ್ತುತ ಕಲಿಯುತ್ತಿರುವ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಬಂಧ ಬೆಸೆಯುವ ಕೊಂಡಿಯಾಗಿ ಕೆಲಸ ಮಾಡುತ್ತವೆ ಎಂದು ಬಿ.ಎಂ.ಜೆ.ಎ ಮೆಡಿಕಲ್ ಕಾಲೇಜ್ ಅಧ್ಯಕ್ಷ ಅಶೋಕಕುಮಾರ ಬಾಗಮಾರ ಹೇಳಿದರು.
ಪಟ್ಟಣದ ಭಗವಾನ ಮಹಾವೀರ ಜೈನ ಆಯುರ್ವೇದಿಕ ಮೆಡಿಕಲ್ ಕಾಲೇಜು ಆಸ್ಪತ್ರೆ, ಪಿ.ಜಿ ಸೆಂಟರ್ ದಲ್ಲಿ ಜರುಗಿದ ಹಳೆ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಸಂಸ್ಥೆಗಳು, ವಿದ್ಯಾರ್ಥಿಯು ಮೌಲ್ಯಯುತ ಶಿಕ್ಷಣ ಪಡೆದು ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ಸೇವೆ ನೀಡುವಂತಾಗಬೇಕು. ಈ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಒಳೆಯ ಸಾಧನೆ ಮಾಡುತಿದ್ದಾರೆ ಎನ್ನುವುದು ಸಂತೋಷದ ವಿಷಯ ಎಂದು ಹೇಳಿದರು.
ಉಪನ್ಯಾಸಕ ಡಾ. ಗೋಪುಕುಮಾರ ಮಾತನಾಡಿ, ಈ ಸಂಘ ಅಸ್ತಿತ್ವಕ್ಕೆ ಬಂದದ್ದು ಚಾರಿತ್ರಿಕ ಸಂದರ್ಭ. ಇದು ಹೊಸ ಹಾಗೂ ಹಳೆಯ ವಿದ್ಯಾರ್ಥಿಗಳ ಸೇತುವೆಯಾಗಿ ಕೆಲಸ ಮಾಡಬೇಕು. ಇಲ್ಲಿ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಯಿಸಿ ವ್ಯದ್ಯ ವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಅವರನ್ನು ಈ ಸಂಘದ ಸದಸ್ಯರನ್ನಾಗಿ ಮಾಡಿಕೊಂಡು ಸಂಘ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಅಜೀತ ಬಾಗಮಾರ, ಡಾ. ರವೀಂದ್ರಕುಮಾರ ಅರಹುಣಸಿ, ಡಾ. ಗಿರೀಶ ಜೀರೆ, ಡಾ. ಸತೀಶ. ಡಾ. ಸುನೀಲ ದಾನಿ, ಡಾ. ಅನೀಲ ಭೀಮನಗೌಡ್ರ, ಡಾ. ಆನಂದ ಹವಾಲ್ದಾರ, ಡಾ. ಆರ್.ಜಿ ವಸ್ತ್ರದ, ಡಾ. ಚಿದಾನಂದ ಹುಣಸ್ಯಾಳ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here