ಬಿಸಿಯೂಟಕ್ಕೆ ಪೂರೈಸಲಾದ ಬೇಳೆ ಕಲಬೆರಕೆ

0
18
loading...

ಶಿರಸಿ: ತಾಲೂಕಿನ ನರೇಬೈಲ್‍ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಪೂರೈಸಲಾದ ಬೇಳೆ ಕಲಬೆರಕೆಯಿಂದ ಕೂಡಿದ್ದು,ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಶಾಲೆಯ ಎಸ್‍ಡಿಎಂಸಿ ಸದಸ್ಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.
1 ರಿಂದ 5ನೇ ತರಗತಿಯವರೆಗಿರುವ ನರೇಬೈಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 30 ಮಕ್ಕಳು ಓದುತ್ತಿದ್ದು, ಕಳೆದ 2 ತಿಂಗಳಿನಿಂದ ಈ ಶಾಲೆಗೆ ಸರಬರಾಜು ಮಾಡುತ್ತಿರುವ ತೊಗರಿ ಬೇಳೆ ಕಳಪೆ ಗುಣಮಟ್ಟದಿಂದ ಕೂಡಿದೆ. ಇದರಿಂದ ಮಾಡಿದ ಸಾಂಬಾರ ಊಟ ಮಾಡಿದ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಸರ್ಕಾರ ಬಿಸಿಯೂಟಕ್ಕೆಂದೇ ಕೋಟ್ಯಾಂತರ ರು ಖರ್ಚು ಮಾಡುತ್ತಿದ್ದು, ಇದರಲ್ಲೂ ಕೂಡ ಕೆಲವರು ಕಳಪೆ ಗುಣಮಟ್ಟದ ಸಾಮಾಗ್ರಿಗಳನ್ನು ಪೂರೈಸುತ್ತಿದ್ದು, ಅಂತಹವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಎಸ್‍ಡಿಎಂಸಿಯವರು ಆಗ್ರಹಿಸಿದ್ದಾರೆ.
ಈ ಮೊದಲು ಬೇಳೆ ಚೆನ್ನಾಗಿಯೇ ಬರುತಿತ್ತು. ಕಳೆದ 2 ತಿಂಗಳಿನಿಂದ ಈ ರೀತಿ ಕಲಬೆರಕೆಯ ತೊಗರಿ ಬೇಳೆ ಪೂರೈಕೆಯಾಗುತ್ತಿದೆ. ಈ ಬಗ್ಗೆ ಆಹಾರ ಧಾನ್ಯ ಪೂರೈಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ಮಟ್ಟದ ಬೇಳೆಯಿಂದ ತಯಾರಿಸಿದ ಅಡುಗೆ ಸೇವಿಸಿ ಮಕ್ಕಳಿಗೆ ಏನಾದರೂ ತೊಂದರೆಯಾದರೇ ಯಾರು ಹೊಣೆ? ಕೂಡಲೇ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಂಡು ಗುಣಮಟ್ಟದ ಆಹಾರ ಧಾನ್ಯ ಪೂರೈಸಬೇಕು ಎಂದು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರಾದ ರಾಜು ಆರೇರ, ಸದಸ್ಯರಾದ ದೇವೇಂದ್ರ ಆರೇರ ಹಾಗೂ ಇತರರು ಒತ್ತಾಯಿಸಿದ್ದಾರೆ.

loading...

LEAVE A REPLY

Please enter your comment!
Please enter your name here