ಭಾರತದಲ್ಲೀಗ ಧರ್ಮ ಮರೆಯಾಗುತ್ತಿದೆ: ಮಾಜಿ ಸಚಿವ.ಉದಾಸಿ

0
13
loading...

ಹಾನಗಲ್ಲ:ವೀರ ಪರಂಪರೆ ಹೊತ್ತು ಜಗತ್ತಿನ ದೇವರಮನೆ ಎಂದೆನಿಸಿಕೊಂಡಿರುವ ಭಾರತದಲ್ಲೀಗ ಧರ್ಮ ಮರೆಯಾಗುತ್ತಿರುವುದು ನಿಜಕ್ಕೂ ಬೇಸರ ಮೂಡಿಸಿದೆ. ಬಿಡುವಿಲ್ಲದ ಜಂಜಾಟಗಳ ಮಧ್ಯೆ ಸಿಲುಕಿ ಪ್ರತಿಯೊಬ್ಬರೂ ಧರ್ಮ ಕಾರ್ಯಗಳಿಂದ ದೂರ ಸರಿಯುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ವಿಷಾದಿಸಿದರು.
ತಾಲೂಕಿನ ಶಂಕರಿಕೊಪ್ಪ ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ನಡೆದ ಧರ್ಮ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದಿನ ಬದಲಾದ ದಿನಮಾನಗಳಲ್ಲಿಯೂ ಧಾರ್ಮಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವತ್ತ ಪ್ರತಿಯೊಬ್ಬರೂ ಗಮನಹರಿಸಬೇಕಿದೆ. ಪರಂಪರಾಗತವಾಗಿ ಹಲವಾರು ಆಚರಣೆ ಮೈಗೂಢಿಸಿಕೊಂಡು ಧರ್ಮ ಕ್ರಾಂತಿಯ ಮೂಲಕ ನಾಡನ್ನು ಸಮೃದ್ಧಗೊಳಿಸುವ ಕಾರ್ಯ ನಡೆಯಬೇಕಿದೆ ಎಂದರು.
ಉದ್ಘಾಟನೆ ನೆರವೇರಿಸಿದ ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮನುಷ್ಯ ಸಂಕುಚಿತ ಮನೋಭಾವನೆ ಹೊಂದಿ, ಆಚರಣೆ ಕಡೆಗಣಿಸುತ್ತಿದ್ದಾನೆ. ವೈವಿಧ್ಯಮಯ ಸಂಸ್ಕøತಿ ಹೊಂದಿರುವ ನಮ್ಮ ರಾಷ್ಟ್ರ ಸರ್ವರನ್ನು ಸಮಾನವಾಗಿ ಕಾಣುವ ಅಭಿಲಾಶೆ ಹೊಂದಿದ್ದು ಅದನ್ನು ಸಾಬೀತುಪಡಿಸಬೇಕಾದ ಜವಾಬ್ದಾರಿ ಯುವ ಸಮೂಹದ ಮೇಲಿದೆ. ಕೆಲವು ಕಡೆ ಸಮಾಜದ ಡೊಂಕು ತಿದ್ದಿ ಪ್ರತಿಯೊಬ್ಬರನ್ನು ಧರ್ಮ ಮಾರ್ಗದಲ್ಲಿ ನಡೆಸಿ ಜೀವನಮುಕ್ತಿ ದೊರಕಿಸಬೇಕಾದ ಮಹತ್ತರ ಕಾರ್ಯ ಯಶಸ್ವಿಗೊಳಿಸಬೇಕಿದೆ ಎಂದರು.
ನೀಲಮ್ಮ ಉದಾಸಿ, ಶಿವಗಂಗಮ್ಮ ಉದಾಸಿ ಸೇರಿದಂತೆ ಸದ್ಭಕ್ತ ಮಂಡಳಿ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here