ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಿಸಿಲ್ಲ: ಸಾರ್ವಜನಿಕರ ಆರೋಪ

0
31
loading...

ನರಗುಂದ: ತಾಲೂಕಿನ ಬನಹಟ್ಟಿ- ಕುರ್ಲಗೇರಿ ಒಳ ರಸ್ತೆಯನ್ನು ಆ ಭಾಗದ ರೈತರಿಗೆ ಮತ್ತು ಕುರ್ಲಗೇರಿ ಗ್ರಾಮಕ್ಕೆ ತೆರಳಲು ಸಮೀಪವಾಗುವುದೆಂಬ ಹಿನ್ನಲೆಯಲ್ಲಿ ಕಳೆದ 2010-11 ರಲ್ಲಿ ನಿರ್ಮಿಸಲಾಗಿತ್ತು. ಜಿಪಂ ಇಂಜನೀಯರಿಂಗ್ ವಿಭಾಗದಿಂದ ನಡೆದ ಈ 5 ಕಿಮಿ ರಸ್ತೆ ನಿರ್ಮಾಣಕ್ಖಾಗಿ ಆಗಿನ ಸಂದರ್ಭದಲ್ಲಿ 1.59 ಲಕ್ಷರೂ ವೆಚ್ಚಮಾಡಲಾಗಿತ್ತು. ರಸ್ತೆ ಸಮಪರ್ಕವಾಗದ ಹಿನ್ನಲೆಯಲ್ಲಿ ರಸ್ತೆಗೆ ಬಳಸಲಾಗಿದ್ದ ಡಾಂಬರ್ ಕಿತ್ತು ಮತ್ತು ಸಂಚಾರಕ್ಕೆ ಆಯೋಗ್ಯವಾಗಿ ಕಂಡು ಬಂದಿದ್ದರಿಂದ ಇದನ್ನು ಲಕ್ಷಿಸಿ ಜಿಪಂ ಇಂಜನೀಯರಿಂಗ್ ವಿಭಾಗದವರು ರಸ್ತೆಯನ್ನು ಸುಸಜ್ಜಿತಗೊಳಿಸಬೇಕೆಂದು ಗ್ರಾಪಂ ಸದಸ್ಯರ ಹಾಗೂ ಅಲ್ಲಿಯ ಗ್ರಾಮಸ್ಥರ ಮೂಲ ಭೇಡಿಕೆಯಾಗಿದೆ.
ರಸ್ತೆ ಕಾಮಗಾರಿಯನ್ನು ಆಗಿನ ಸಂದರ್ಭದಲ್ಲಿ ಗುತ್ತಿಗೆದಾರರು ಸರಿಯಾಗಿ ನಿರ್ವಹಿಸಿಲ್ಲವೆಂಬುದು ಅಲ್ಲಿಯ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ. ಈ ರಸ್ತೆ ನಿರ್ವಹಣೆಯನ್ನು 5 ವರ್ಷದ ವರೆಗೆ ಜಿಪಂ ಇಂಜನೀಯರಿಂಗ್ ವಿಭಾಗದಿಂದದಲೇ ನಿರ್ವಹಿಸುವ ನಿಯಮಗಳಿದ್ದು ಆದರೆ ಕಳೆದ ವರ್ಷ ಗ್ರಾಪಂ ಹಾಗೂ ಗ್ರಾಮಸ್ಥರು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ರಸ್ತೆಗೆ ತೇಪೆಹಾಕುವ ಕೆಲಸ ನಡೆದಿತ್ತೆ ಹೊರತು ಆದರೆ ಆ ಕೆಲಸ ಸರಿಯಾಗಿ ನಿರ್ವಹಣೆಆಗಲಿಲ್ಲ. ಹೀಗಾಗಿ ಪುನಹ ರಸ್ತೆಗೆ ಹಾಕಿದ್ದ ಪ್ಯಾಚ್‍ವರ್ಕ ಸಹ ಅವಸಾನಗೊಂಡು ಗ್ರಾಮಸ್ಥರ ಸಂಚಾರಕ್ಕೆ ಆಯೋಗ್ಯವಾಗಿದೆ ಎಂದು ಗ್ರಾಮಸ್ಥರಿಂದ ಅನೇಕ ಟೀಕೆಗಳು ಕೇಳಿಬಂದಿವೆ.
ಈ ಕುರಿತು ಜಿಪಂ ಇಂಜನೀಯರಿಂಗ್ ವಿಭಾಗದ ಸಹಾಯಕ ಅಭಿಯಂತರ ಪೊಲೀಸ್‍ಪಾಟೀಲ ಅವರು ಪತ್ರಿಕೆಗೆ ವಿವರ ನೀಡಿ, ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಸರಿಯಾಗಿ ನಡೆಸಿದ್ದಾರೆ. ಆದರೆ ರಸ್ತೆ ನಿರ್ವಹಿಸುವ ಭಾಗದಲ್ಲಿರುವ ಮಣ್ಣು ಗುಣಾತ್ಮಕವಾಗಿರದ ಕಾರಣವಾಗಿ ರಸ್ತೆ ಪದೇ ಪದೇ ದುರಸ್ತಿಗೆ ಬರುವಂತಾಗಿದೆ. ರಸ್ತೆ ಮಾಡುವ ಸಂದರ್ಭದಲ್ಲಿ ಗುಣಾತ್ಮಕತೆಯ ಗರ್ಸನ್ನು ಉಪಯೋಗಿಸಿ ರಸ್ತೆ ತಳಪಾಯದ ಹಂತದಲ್ಲಿ ರೋಲರ್ ಹಾಕಿ ಕೆಲಸ ನಿರ್ವಹಿಸಲಾಗಿತ್ತು. ಈ ಕುರಿತು ಸರಿಯಾಗಿ ರಸ್ತೆ ನಿರ್ಮಿಸಲು ಸಹ ಆಗ ಗುತ್ತಿಗೆದಾರರಿಗೆ ತಿಳಿಸಲಾಗಿತ್ತು. ಆದರೆ ರಸ್ತೆ ಪದೇ ಪದೇ ದುರಸ್ತಿಗೆ ಬರುತ್ತಲೇ ಇದೆ. ಈ ಕಾರಣದಿಂದ ಬನಹಟ್ಟಿ ಮತ್ತು ಗುರ್ಲಕಟ್ಟಿ ಗ್ರಾಮಸ್ಥರು ಆಗಾಗ ರಸ್ತೆ ದುರಸ್ತಿಗಾಗಿ ಮನವಿ ಮಾಡಿಕೊಳ್ಳುತ್ತಲೇ ಇದ್ದ ಪರಿಣಾಮ ರಸ್ತೆ ಪುನಹ ಪರಿಶೀಲಿಸಿ ದುರಸ್ತಿಮಾಡುವ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here