ವಿವಿಧ ವೇತನಗಳ ಮಂಜೂರಿ ಪತ್ರಗಳ ವಿತರಣೆ

0
55
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಒಂದು ಕಾಲದಲ್ಲಿ ಅರ್ಜಿ ಸಲ್ಲಿಸಿ ಅಲೆದಾಡಿದರೂ ವೇತನ ಮಂಜೂರಿ ಮಾಡಿಸಿಕೊಳ್ಳುವುದು ಕಷ್ಟ ಸಾದ್ಯವಿತ್ತು. ಆದರೆ ಈಗ ಅಧಿಕಾರಿಗಳೇ ಮನೆ ಮನೆಗೆ ತೆರಳಿ ಅರ್ಹ ಪಲಾನುಭವಿಗಳನ್ನು ಗುರುತಿಸಿ ವೇತನ ಮಂಜೂರಿ ಮಾಡಿಸಿ ಕೊಡುವ ಕೆಲಸ ನಮ್ಮ ಕಾಂಗ್ರೆಸ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು
ಮಂಗಳವಾರ ತಾಲೂಕಿನ ಕಾತೂರ ಗ್ರಾಮದಲ್ಲಿ ಎಸ್.ಸಿ.ಪಿ, ಎಸ್.ಟಿ.ಪಿ ಯೋಜನೆಯಡಿಯಲ್ಲಿ ಅನಿಲ ಸಿಲಿಂಡರ, ಸೋಲಾರ ದೀಪ, ಸೋಲಾರ ವಾಟರ್ ಹೀಟರ, ಜೇನು ಸಾಕಾಣಿಕೆದಾರರಿಗೆ ಜೇನು ಪೆಟ್ಟಿಗೆ ಮತ್ತು ಪಾಳಾ ಹೋಬಳಿಯ ಪಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಯೋಜನೆಯಡಿಯ ವಿದವಾ, ಸಂದ್ಯಾ ಸುರಕ್ಷಾ, ವೃದ್ದಾಪ್ಯ ಮುಂತಾದ ವೇತನಗಳ ಮಂಜೂರಿ ಪತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಕ್ಷೇತ್ರದಲ್ಲಿ ಈವರೆಗೆ 3456 ಪಲಾನುಭವಿಗಳಿಗೆ ವೇತನ ಮಂಜೂರಿ ಪತ್ರ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 10500 ಪಲಾನುಭವಿಗಳು ವೇತನ ಪಡೆಯುತ್ತಿದ್ದು, ತಿಂಗಳಿಗೆ 5 ಕೋಟಿ ಹಣ ವೇತನಕ್ಕಾಗಿಯೇ ಬರುತ್ತಿದೆ. ಸಮಾಜದಲ್ಲಿ ಕಷ್ಟದಲ್ಲಿ ಹಾಗೂ ನಿರ್ಗತಿಕರಾಗಿ ಜೀವನ ಸಾಗಿಸುವವರಿಗೆ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಚುನಾವಣೆ ಬಂದಾಗ ಮಾತ್ರ ಜನರ ಮನೆಗೆ ಹೋಗುವ ಬದಲು ಆಡಳಿತಕ್ಕೆ ಬಂದ ಬಳಿಕವು ಸರ್ಕಾರದ ಯೋಜನೆಗಳನ್ನು ಬಡವರ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲಿಯವರೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವುದಲ್ಲವೋ ಅಲ್ಲಿಯವರೆಗೆ ನಿರಕ್ಷರತೆ, ಬಡತನ ಹಾಗೂ ಶೋಷಣೆ ನಿವಾರಣೆಯಾಗಲು ಸಾದ್ಯವಿಲ್ಲ ಎಂದ ಅವರು, ಹೊಗೆ ಮುಕ್ತ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ಪ್ರತಿ ಬಡ ಕುಟುಂಭಕ್ಕೂ ಎಲ್.ಪಿ.ಜಿ ಸಂಪರ್ಕ ನೀಡಲಾಗುತ್ತಿದೆ ಇದರ ಸದುಪಯೋಗಪಡೆದುಕೊಳ್ಳುವಂತೆ ಹೇಳಿದರು
ಬರಗಾಲ: ನಮ್ಮ ಕ್ಷೇತ್ರ ಸಂಪೂರ್ಣ ಬರಗಾಲದಿಂದ ಕೂಡಿದ್ದು, ಈಗಾಗಲೇ ಈ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಸರ್ಕಾರಕ್ಕೆ ವರದಿ ರವಾನೆಯಾಗಿದೆ. ಮುಂದಿನ ದಿನಗಳಲ್ಲಿ ಮುಂಡಗೋಡ, ಯಲ್ಲಾಪುರ ಹಾಗೂ ಬನವಾಸಿ ಭಾಗವನ್ನು ಸಂಪೂರ್ಣ ಬರಗಾಲ ಪ್ರದೇಶವೆಂದು ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಹೆಬ್ಬಾರ ಹೇಳಿದರು.
ತಹಸೀಲ್ದಾರ ಅಶೋಕ ಗುರಾಣಿ ಮಾತನಾಡಿ, ಪಾಳಾ ಹೀಬಳಿಯಲ್ಲಿ 504 ಪಲಾನುಭವಿಗಳಿಗೆ ವೇತನ ಮಂಜೂರಿ ಪತ್ರ ವಿತರಿಸಲಾಗುತ್ತಿದೆ. ಉಚಿತ ಹಾಗೂ ಪಾರದರ್ಶಕತೆಯಿಂದ ಈ ಯೋಜನೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ಅರ್ಹ ಪಲಾನುಭವಿಗಳು ಅರ್ಜಿ ನೀಡಿದರೆ ತಕ್ಷಣ ಮಂಜೂರಿ ಮಾಡಲಾಗುವುದೆಂದು ಹೇಳಿದರು. ದುರೀಣ ಕೃಷ್ಣ ಹಿರೇಹಳ್ಳಿ ಮಾತನಾಡಿ, ಸರ್ಕಾರ ಹಾಗೂ ಅಧಿಕಾರಿಗಳ ಆಡಳಿತದಲ್ಲಿ ಪಾರದರ್ಶಕತೆಯಿಂದ ಕೆಲಸ ನಡೆಯುತ್ತಿದ್ದು, ಸಾರ್ವಜನಿಕರ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತಿವೆ ಎಂದರು. ಜಿ.ಪಂ ಸದಸ್ಯ ರವಿಗೌಡ ಪಾಟೀಲ, ಜಯಮ್ಮ ಕೃಷ್ಣ ಹಿರೇಹಳ್ಳಿ, ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗಿಮಠ, ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ, ದುರೀಣ ಕೃಷ್ಣ ಹಿರೇಹಳ್ಳಿ, ರಾಮಣ್ಣ ಪಾಲೇಕರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಸಾಳುಂಕೆ, ವಿ.ಎಸ್.ನಾಯ್ಕ, ಲಕ್ಷ್ಮಿ ಜನಗೇರಿ ಮುಂತಾದವರು ಉಪಸ್ಥಿತರಿದ್ದರು. ಉಪತಹಸೀಲ್ದಾರ ವಿ.ಜಿ ನಾಯ್ಕ ಸ್ವಾಗತಿಸಿದರು.

loading...

LEAVE A REPLY

Please enter your comment!
Please enter your name here