ವೃತ್ತಿಪರ ತರಬೇತಿಯಿಂದ ಸಾಮಾಜಿಕ ಕಳಕಳಿ ಮುಡುತ್ತದೆ

0
24
loading...

ಗೋಕಾಕ :ಇನ್ನರ್‌ವ್ಹೀಲ್‌ ಸಂಸ್ಥೆ ಶೈಕ್ಷಣಿಕ, ಸಾಮಾಜಿಕ ಹಾಗೂ ವೃತ್ತಿಪರ ತರಬೇತಿಯಂತಹ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುವುದರೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಇನ್ನರ್‌ವ್ಹೀಲ್‌ ಸಂಸ್ಥೆಯ ಜಿಲ್ಲಾ ಚೇರಮನ್‌ ಜಯಶ್ರೀ ಪೈಲ್ವಾನ್‌ ಹೇಳಿದರು.

ನಗರದ ಇನ್ನರ್‌ವ್ಹೀಲ್‌ ಸಂಸ್ಥೆಗೆ ಭೇಟಿ ನೀಡಿ ಅವರ ಕಾರ್ಯಕ್ರಮಗಳನ್ನು ಪರಿಶೀಲಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಈ ಸಂಸ್ಥೆಯಿಂದ ಹ್ಯಾಪಿ ಸ್ಕೂಲ್‌ ಯೋಜನೆಯಡಿಯಲ್ಲಿ ಸಮೀಪದ ಶಿಂಗಳಾಪೂರ ಸರ್ಕಾರಿ ಶಾಲೆಗೆ ಪಿಠೋಪಕರಣಗಳನ್ನು ನೀಡಿ ಅಲ್ಲಿನ ಹೆಣ್ಣು ಮಕ್ಕಳಿಗಗಿ ನಿರ್ಮಿಸುತ್ತಿರುವ ಶೌಚಾಲಯದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಇನ್ನೂ ಹೆಚ್ಚಿನ ಸಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡಲೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ನಗರದ ಸರ್ಕಾರಿ ಮಾದರಿ ಶಾಲೆ ನಂ. 2 ರ ವಿದ್ಯಾರ್ಥಿಗಳಿಂದ ಯೋಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕಿ ಬಸಕ್ಕ ಸಂಸುದ್ದಿ ಮತ್ತು ಯಡ್ರಾಂವಿ ಇವರನ್ನು ಸತ್ಕರಿಸಲಾಯಿತು. ಅಧ್ಯಕ್ಷತೆಯನ್ನು ಇಲ್ಲಿಯ ಇನ್ನರ್‌ವ್ಹೀಲ್‌ ಸಂಸ್ಥೆಯ ಅಧ್ಯಕ್ಷೆ ಮಹೇಶ್ವರಿ ತಾಂವಶಿ ವಹಿಸಿದ್ದರು. ವೇದಿಕೆ ಮೇಲೆ ಕಾರ್ಯದರ್ಶಿ ಸೀತಾ ಬೆಳಗಾವಿ, ಜ್ಯೋತಿ ವರದಾಯಿ, ರೂಪಾ ಮುನವಳ್ಳಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸನುಸೂಯಾ ಧೂಳಾಯಿ, ರಾಜೇಶ್ವರಿ ಕಲ್ಲೋಳ್ಳಿ, ಶಿಲ್ಪಾ ಚುನಮರಿ, ಅನುಸೂಯಾ ಗಚ್ಚಿ, ಸುಧಾ ಹತಪಾಕಿ, ಸರಿತಾ ಜಾಧವ, ಸುಮನ್‌ ಕಲ್ಯಾಣಶೆಟ್ಟಿ ಇದ್ದರು. ವಿದ್ಯಾ ಗುಲ್ಲ ಸ್ವಾಗತಿಸಿದರು. ವಿದ್ಯಾ ಮಗದುಮ್ಮ ನಿರೂಪಿಸಿದರು. ಗಿರಿಜಾ ಮುನ್ನೋಳಿಮಠ ವಂದಿಸಿದರು.

loading...

LEAVE A REPLY

Please enter your comment!
Please enter your name here