ವೃತ್ತಿ ಕೌಶಲ್ಯಗಳು ಇಂದಿನ ಅವಶ್ಯಕ: ಪವಾರ

0
51
loading...

ಬೆಳಗಾವಿ: ವಿದ್ಯ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ವಿವಿಧ ಕೌಶಲ್ಯಗಳು ಅತೀ ಅವಶ್ಯಕ ಎಂದು ಪ್ರಾಂಶುಪಾಲರು ಡಾ. ಎ.ಬಿ. ಪವಾರ ಹೇಳಿದರು.
ಸ್ಥಳಿಯ ಮರಾಠ ಮಂಡಳ ಮಹಾವಿಶ್ವವಿದ್ಯಾಲಯದಲ್ಲಿ ವಿದ್ಯಾಪೋಷಕ ಧಾರವಾಡ ಮತ್ತು ಮರಾಠ ಮಂಡಳ ಕಾಲೇಜ, ಬಿ.ಕೆ.ಕಾಲೇಜ ಮತ್ತು ಭರತೇಶ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ವ್ರತ್ತಿ ಕೌಶಲ್ಯ ಶಿಬಿರವನ್ನು ಬಿಎ,ಬಿಕಾಂ,ಬಿಎಸ್‌ಸಿ ಅಂತಿಮ ವರ್ಷದ ಪದವಿ ವಿಧ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು ಶಿಬಿರದ ಅದ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ವಿವಿಧ ತರಬೇತಿಗಳು ಮುಖ್ಯವಾಗಿದೆ. ಆಧುನಿಕ ಯುಗಕ್ಕೆ ತಕ್ಕ ಹಾಗೆ ತರಬೇತಿಗಳು ನೀಡುವುದರಿಂದ ಅವರ ಭವಿಷ್ಯ ನಿರ್ಮಿಸಿಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಲಾಗಿ ಆಗಮಿಸಿದ ಡಾ.ಗೋವಿಂದ ವೆಲ್ಲಿಂಗ ಮಾತನಾಡುತ್ತಾ, ಎಲ್ಲ ರೀತಿಯ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಹೊಂದಿದ ವಿಧ್ಯಾರ್ಥಿಗಳು ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾದ್ಯವೆಂದು ಅಭಿಪ್ರಾಯ ಪಟ್ಟರು ಬಿ.ಕೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಎನ್‌. ಮಿಸಾಳೆ ತರಬೇತಿ ಶಿಬಿರ ಉಧ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸಂವಹನ ಕಲೆಯನ್ನು ರೂಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಉಮೇಶ ಚಿಂಚಣಿ ಹಾಗೂ ಶ್ರೀ ರವೀಂದ್ರ ಇವರು ವಿದ್ಯಾರ್ಥಿಗಳಿಗೆ ಕೌಶಲ್ಯಗಳ ವಿವಿಧ ಆಯಾಮದ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ, ವಿದ್ಯಾಪೋಷಕ ಪ್ರತಿನಿಧಿ ಸಂತಾಗಿ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉದ್ಯೋಗ ಮಾರ್ಗದರ್ಶಿ ಘಟಕದ ಸಂಯೋಜಕರಾದ ಪ್ರೋ. ಎಸ್‌.ಜಿ. ಸೊನ್ನದ ಪರಿಚಯಿಸಿ ಸ್ವಾಗತಿಸಿದರು.
ಕುಮಾರಿ ಪೂರ್ಣಿಮಾ ಕಾಕತಿ ವಂದಿಸಿದರು. ಕುಮಾರಿ ಶೃತಿ ಲಮಾಣಿ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here