ಶಾಸಕ ಮಂಕಾಳ ವೈದ್ಯರಿಂದ ಕಿವುಡರ ಸಂಘದ ಉದ್ಘಾಟನೆ

0
22
loading...

ಕನ್ನಡಮ್ಮ ಸುದ್ದಿ-ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಸುಮಾರು 150 ಕಿವುಡ ಸದಸ್ಯರ ಸಹಯೋಗದಲ್ಲಿ ಹಲವಾರು ಉದ್ದೇಶದೊಂದಿಗೆ ಸ್ಥಾಪನೆಯಾಗಿದ ಕಿವುಡರ ಸಂಘವನ್ನು ಶಿರಾಲಿಯ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಶಾಸಕ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೋಗೇರ ಮಾತನಾಡಿ ನಿಮ್ಮೆಲ್ಲರ ಕೋರಿಕೆಯಂತೆ ಜಿಲ್ಲೆಯಲ್ಲಿ ಸಂಘದ ಕಟ್ಟಡಕ್ಕೆ ಸಿಗಬೇಕಾದ ಅನುದಾನವನ್ನು ಬಿಡುಗಡೆ ಮಾಡುತ್ತೇನೆ. ಹಾಗೂ ಸರ್ಕಾರದಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸಮಾಜದಲ್ಲಿ ಕೆಲವರು ತಮ್ಮ ಕೈಯಲ್ಲಿ ಕೆಲಸ ಮಾಡಲು ಸಾಧ್ಯವಾದರು ಸಹ ಆಲಸ್ಯದಿಂದ ಜೀವನ ಸಾಗಿಸುತ್ತಾರೆ ಆದರೆ ನಿಮ್ಮಲ್ಲಿನ ಅಂಗವೈಕಲ್ಯವನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಂಡು ಸಮಾಜದಲ್ಲಿ ನೀವು ಒಬ್ಬರು ಎನ್ನುವುದನ್ನು ತೋರಿಸಿಕೊಡುತ್ತಿರುವುದು ಸಂತಸ ವಿಚಾರವಾಗಿದೆ ಎಂದರು.ಭಟ್ಕಳ ಪ್ರಭಾರ ಸಹಾಯಕ ಆಯುಕ್ತ ರಮೇಶ ಕಳಸದ್ ಮಾತನಾಡಿ ಕಾನೂನಾತ್ಮಕ, ಶಾಸನಬದ್ದವಾಗಿ ಈಡೇರಲು ಈ ವೇದಿಕೆ ಅನೂಕೂಲವಾಗಬೇಕು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕಿವುಡರಿಗಾಗಿಯೇ ವಿಶೇಷ ಶಾಲೆಗಳನ್ನು ತೆರೆಯುವುದು. ಈ ಮೂಲಕವಾಗಿ ಶಿಕ್ಷಣ ಸಿಗುವಂತಾಗಬೇಕು. ಹೀಗೆ ಕಿವುಡರು ಸಹ ಸಮಾಜದಲ್ಲಿ ಎಲ್ಲಾ ರೀತಿಯಲ್ಲು ಬದುಕುವ ಅವಕಾಶವನ್ನು ಮಾಡಿಕೊಡ ಬೇಕಾಗಿರುವುದು ಸರ್ಕಾರದ ಕಾರ್ಯವಾಗಿದೆ. ಕಿವುಡರು ಸಲ್ಲಿಸಿರುವ ಹಲವಾರು ಬೇಡಿಕೆಗಳನುಸಾರವಾಗಿ ಒಂದೊಂದೇ ಕಾರ್ಯರೂಪಕ್ಕೆ ತರುವ ಕೆಲಸವಾಗಬೇಕಾಗಿದೆ ಎಂದರು.ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಅಲ್ಬರ್ಟ ಡಿಕೋಸ್ತಾ, ಗುತ್ತಿಗೆದಾರ ಬಾಬು ಮೋಗೇರ, ರಾಜ್ಯ ಕಿವುಡರ ಸಂಘದ ಅಧ್ಯಕ್ಷರು, ವಿವಿಧ ಜಿಲ್ಲಾ ಸಂಘಟನೆಯ ಪದಾದಿಕಾರಿಗಳು, ದೇವಾಲಯದ ಧರ್ಮದರ್ಶಿಗಳು, ಬೆಂಗಳೂರಿನ ಕಿವುಡರ ಸಂಘದ ಸದಸ್ಯರು, ಜಿಲ್ಲೆಯ ವಿವಿಧ ತಾಲೂಕಿನ ಕಿವುಡ ಸದಸ್ಯರು, ಸಂಘದ ತಾಲೂಕಾ ನಿರ್ದೇಶಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 23 ಜಿಲ್ಲೆಯಿಂದ 300ಕ್ಕೂ ಅಧಿಕ ಕಿವುಡರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here