ಶಿಘ್ರದಲ್ಲಿ ಉ.ಕ ಜಿಲ್ಲೆಗೆ ನೂತನ ಬಿ.ಎಸ್.ಎನ್.ಎಲ್ ಮಿನಿ ಮೊಬೈಲ್ ಟವರ್

0
26
loading...

ಕನ್ನಡಮ್ಮ ಸುದ್ದಿ-ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ ಬಿಎಸ್‍ಎನ್‍ಎಲ್ ಮಿನಿ ಮೊಬೈಲ್ ಟವರ್‍ಗಳನ್ನು ನಿರ್ಮಾಣ ಮಾಡಲಿದ್ದು, ಗ್ರಾಮಾಂತರ ಪ್ರದೇಶಗಳಿಗೆ ಡೇಟಾ ಹಾಗೂ ಧ್ವನಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಭಾನುವಾರ ಕದಂಬ ಮಾರ್ಕೇಟಿಂಗ್ ಸಂಸ್ಥೆ ಕಟ್ಟಡ ಹಾಗೂ ಸಂಸದರ ನೂತನ Pಕಚೇರಿ ಉದ್ಘಾಟಿಸಿದ ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸ್ಥಿರ ದೂರವಾಣಿಗಳನ್ನು ನಿರ್ವಹಣೆ ಮಾಡುವುದು ದುಬಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಮೊಬೈಲ್ ಸಿಗ್ನಲ್‍ಗಳ ಅವಶ್ಯಕತೆ ಇದೆ. ಕಾರಣ ಉತ್ತರಕನ್ನಡ ಜಿಲ್ಲೆಯಲ್ಲಿ 46 ಟಾವರ್ ಹಾಗೂ 100 ಮಿನಿ ಟಾವರ್ ಸದ್ಯದಲ್ಲಿಯೇ ನಿರ್ಮಿಸಲಾಗುತ್ತದೆ. ಅ.19ರಂದು ಬೆಂಗಳೂರಿನಲ್ಲಿ ಭಾರತೀಯ ದೂರಸಂಚಾರ ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮೊಬೈಲ್ ನೆಟವರ್ಕ ಅವಶ್ಯಕವಿರುವ ಹಳ್ಳಿಗಳ ಬಗ್ಗೆ ಅಧಿಕಾರಿಗಳಿಂದ ಪ್ರಸ್ತಾವನೆ ತೆಗೆದುಕೊಂಡು ಟಾವರ್ ನಿರ್ಮಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವಿಲೆಜ್ ನೆಟ್‍ವರ್ಕಿಂಗ್ ಆಪರೇಟಿವ್ ನಿಯುಕ್ತಿ ಮಾಡಿ ಅವರಿಗೆ ಉಚಿತವಾದ ತರಬೇತಿ ನೀಡಿ ಹಳ್ಳಿಗಳಿಗೆ ಡಾಟಾ ಹಾಗೂ ಮೊಬೈಲ್ ನೆಟ್‍ವರ್ಕಿಂಗ್ ಸೇವೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ಕದಂಬ ಸಂಸ್ಥೆಯು ರೈತರ ಮನೆಬಾಗಿಲಿಗೆ ಹೋಗಿ ತೆಂಗು, ಕೋಕೋ ಬೆಳೆಗಳನ್ನು ಖರೀದಿಸುತ್ತಿದೆ. ಈಗ ಒಂದು ತಿಂಗಳ ಹಿಂದೆ ಅಡಕೆಯನ್ನು ಸಹ ಖರೀದಿಸುತ್ತಿದೆ. ಕದಂಬದಿಂದ ರೈತರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಒದಗಿಸುವ ಚಿಂತನೆ ಇದ್ದು, ಗ್ರಾಮೀಣ ಪ್ರದೇಶದ ಯುವಕರು ಹಾಗೂ ಯುವತಿಯರಿಗೆ ಉದ್ಯೋಗ ನೀಡಲು ಕೆನರಾ ಸೊಸೈಟಿಯನ್ನು ಕದಂಬ ಸಂಸ್ಥೆಯಿಂದ ಆರಂಭಿಸಲಾಗುತ್ತದೆ ಎಂದ ಅವರು, ಕೇಂದ್ರ ಸರಕಾರ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಜಾರಿಗೆ ತಂದ ಮಣ್ಣು ಪರೀಕ್ಷಾ ಪತ್ರವನ್ನು ಜನರು ವ್ಯಾಪಕವಾಗಿ ಒಪ್ಪಿಕೊಂಡಿದ್ದಾರೆ. ರೈತರು ಯಾಂತ್ರಿಕರಣವನ್ನು ಒಪ್ಪಿಕೊಂಡು ತಮ್ಮ ಆದಾಯವನ್ನು ಜಾಸ್ತಿಮಾಡಿಕೊಳ್ಳುವ ಅವಶ್ಯವಾಗಿದ್ದು ಯಾಂತ್ರಿಕರಣ ಬಳಸುವಂತೆ ರೈತರ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದರು.
ಕದಂಬ ಸಂಸ್ಥೆಯಿಂದ ಹಳ್ಳಿ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಕಳೆದ 10 ವರ್ಷಗಳಿಂದ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಮಂಗಳೂರಿನ ದೇರಳಕಟ್ಟಾ ಆಸ್ಪತ್ರೆಯವರು ಶಿರಸಿಯಲ್ಲಿ ಕದಂಬ ಸಂಸ್ಥೆಯ ಸಹಯೋಗದೊಂದಿಗೆ ಸಾರ್ವಜನಿಕ ಸಂಬಂಧ ಯೋಜನೆಯನ್ನು ಸದ್ಯದಲ್ಲಿಯೇ ರೂಪಿಸಲಾಗುತ್ತದೆ ಎಂದರು. ರೈತರು ಯಂತ್ರಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿದರೂ ಸಹ ಅವರಿಗೆ ಸಬ್ಸಿಡಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದರು.
ಈ ಸಂದಂರ್ಭದಲ್ಲಿ ಕದಂಬ ಸಂಸ್ಥೆಯ ನಿದೇಶಕರುಗಳಾದ ಕೃಷ್ಣ ಎಸಳೆ, ಉಮಾಪತಿ ಭಟ್ಟ, ಶ್ರೀಕಾಂತ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here