ಸಮಾನದ ಹೆಜ್ಜೆ ಹಾಕುವುದರಿಂದ ಸಂಸಾರ

0
19
loading...

ಕನ್ನಡಮ್ಮ ಸುದ್ದಿ
ಬೆಳಗಾವಿ 03: ಪತಿ ಪತ್ನಿ ಇಬ್ಬರೂ ಸಮಾನರು ಯಾರೂ ಮೇಲಲ್ಲ, ಯಾರೂ ಕೀಳಲ್ಲ ಇಬ್ಬರೂ ಸಮಾನದ ಹೆಜ್ಜೆ ಹಾಕುವುದರಿಂದ ಸಂಸಾರ ಸಸಾರವಾಗುವುದು ಎಂದು ಖ್ಯಾತ ಅಂಕಣ ಬರಹಗಾರ ಎನ್ ರಾಮನಾಥ ಅಭಿಪ್ರಾಯ ಪಟ್ಟರು.
ಅವರು ಸೋಮವಾರ ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ನಾಡಹಬ್ಬ ಉತ್ಸವ ಸಮಿತಿಯರು ಹಮ್ಮಿಕೊಂಡಿರುವ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಹಾಸ್ಯಕೂಟದವರು ಏರ್ಪಡಿಸಿದ “ಮಡದಿ ಮಾತು ಕೇಳಬೇಕೆ?” ಹರಟೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಆಮಂತ್ರಣ ಪತ್ರಿಕೆ ತೆಗೆದುಕೊಳ್ಲಿ ಅದರಲ್ಲಿ ಶ್ರೀ,ಶ್ರೀಮತಿ ಅಂತಾ ಇರುತ್ತೆ ಶ್ರೀ ಅಂದರೆ ಸಂಪತ್ತು ಅದನ್ನು ತರುವವನು ಪತಿ. ಮತಿ ಎಂದರೆ ಬುದ್ದಿ ಶ್ರೀಮತಿ ತನ್ನ ಬುದ್ದಿಮತ್ತೆಯಿಂದ ಸರಿಯಾಗಿ ವ್ಯಯ ಮಾಡಿ ಸಂಸಾರ ತೂಗಿಸುವವಳು ಪತ್ನಿ. ಪತ್ನಿಯೂ ಗಳಿಸುತ್ತಿರಬಹುದು ಆದರೆ ಅದು ಸಂಸಾರಕ್ಕೆ ಮತ್ತೊಂದು ಆಧಾರವಷ್ಟೆ
ಪ್ರೊ. ಜಿ. ಕೆ. ಕುಲಕರ್ಣಿ ಮಡದಿ ಮಾತನ್ನು ಕೇಳಲಾರಂಭಿಸಿದರೆ ಸಮಾಜದಲ್ಲಿ ಅವಹೇಳನೆಗೆ ಗುರಿಯಾಗುತ್ತೇವೆ. ಆದ್ದರಿಂದ ಮಡದಿಯ ಮಾತನ್ನು ಕೇಳಲೇ ಬಾರದು ಎಂದರು.
ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಮಡದಿ ಮಾತನ್ನು ಕೇಳಬೇಕೆಂಬುದನ್ನು ಸಮರ್ಥಿಸಿಕೊಂಡರು.
ಅಶೋಕ ಮಳಗಲಿ ಮಡದಿ ಮಾತನ್ನು ಕೇಳುತ್ತಿರುವುದರಿಂದಲೇ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ವೃದ್ದಾಶ್ರಮಗಳು ಹೆಚ್ಚುತ್ತಲಿವೆ. ಸಮಾಜದ ಸ್ವಾಸ್ಥ್ಯ ಕಾಯಬೇಕೆಂದರೆ ಮಡದಿ ಮಾತನ್ನು ಕೇಳಲೇ ಬಾರದೆಂದು ಹೇಳಿದರು.
ವೇಣುಧ್ವನಿಯ ಸರ್ವಮಂಗಳಾ ಅರಳಿಮಟ್ಟಿ ಯಜಮಾನರು, ರಾಯರು ಮುಂತಾದ ಪದಗಳಿಂದ ಗೌರವಗಳು ಸಿಗುವುದೇ ಪತ್ನಿಯರಿಂದ. ಪತ್ನಿಯಿಂದ ಸಿಗುವಷ್ಟು ಗೌರವಗಳು ಬೇರೆ ಯಾರಿಂದಲೂ ಇವರಿಗೆ ಸಿಗಲಾರದು. ಎಷ್ಟಲ್ಲ ವಿಶೇಷ ಪದಗಳಿಂದ ಗೌರವಿಸಿಕೊಳ್ಳುವ ಪತಿ ಮಡದಿ ಮಾತನ್ನು ಕೇಳದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಪ್ರೊ. ವಿಜಯಲಕ್ಷ್ಮಿ ಪುಟ್ಟಿ ಮಡದಿ ಕಣ್ಣೀರೊಂದನ್ನು ಅಸ್ತ್ರವನ್ನಾಗಿಟ್ಟುಕೊಂಡು ಗಂಡಂದಿರನ್ನು ಬೇಕಾದ ಹಾಗೆ ಆಡಿಸುತ್ತ ಸಮಾಜದಲ್ಲಿ ಅವಳೊಂದು ತಲೆನೋವಾಗಿದ್ದಾಳೆ ಮಹಿಳೆಯಾಗಿ ನಾನೂ ಕೂಡ ಮಡದಿ ಮಾತು ಕೇಳುವುದನ್ನು ವಿರೋಧಿಸುತ್ತೇನೆ ಎಂದು ಹೇಳಿದರು.
ಎಂ. ಬಿ. ಹೊಸಳ್ಳಿ, ನಗೆಮಾತುಗಾರ ಜಿ. ಎಸ್. ಸೋನಾರ,ಪ್ರೊ. ಈಶ್ವರ ಬೆಣ್ಣಿ ಮಾತನಾಡಿದರು.
ಕೆ.ಎಸ್.ಆರ್.ಟಿ.ಸಿ. ಉದ್ಯೋಗಿ ಮುಮ್ತಾಜ ಹಾರೊಬಿಡಿ ಸಭಿಕರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ. ಎಚ್. ಬಿ ರಾಜಶೇಖರ ಪ್ರಾಸ್ತಾವಿಕ
ನುಡಿಗಳನ್ನಾಡಿದರು. ಸಿ. ಕೆ. ಜೋರಾಪುರ ಸ್ವಾಗತಿಸಿದರು. ಆರ್. ಪಿ. ಪಾಟೀಲ ವಂದಿಸಿದರು.

loading...

LEAVE A REPLY

Please enter your comment!
Please enter your name here