ಸರ್ಕಾರಿ ಕಾರ್ಯಕ್ರಮಕ್ಕೆ ಚುನಾಯಿತ ಪ್ರತಿನಿಧಿಗಳನ್ನು ಕರೆಯದೆ ಅವಮಾನ

0
22
loading...

ಕನ್ನಡಮ್ಮ ಸುದ್ದಿ- ಮುಂಡರಗಿ : ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ವಿವಿಧ ಸರ್ಕಾರಿ ಕಾರ್ಯಕ್ರಮಗಳಿಗೆ ಆಯಾ ಇಲಾಖೆ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳನ್ನು ಕರೆಯದೆ ಅವಮಾನ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹೇಮಗಿರೀಶ ಹಾವಿನಾಳ ಮಾತನಾಡಿ, ಅಕ್ಟೋಬರ್ 1 ರಂದು ತಾಲೂಕಿನ ಬಿದರಹಳ್ಳಿ, ಹಮ್ಮಿಗಿ, ಗುಮ್ಮಗೋಳ, ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಸಿಂಗಟಾಲೂರ ಏತ ನೀರವಾರಿ ಇಲಾಖೆಯಿಂದ ಹಾಗೂ ಶಾಸಕರ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಕಾಮಗಾರಿ ಮತ್ತು ಇತರೆ ಕಾರ್ಯಕ್ರಮಗಳಿಗೆ ಆಯಾ ಭಾಗದ ತಾ.ಪಂ, ಗ್ರಾ.ಪಂ, ಯ ಬಿಜೆಪಿಯ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಜನಪ್ರತಿನಿಧಿಯಾದವರಿಗೆ ಸರ್ಕಾರಿ ಕಾರ್ಯಕ್ರಮಕ್ಕೆ ಭಾಗವಹಿಸಲು ಆಹ್ವಾನಿಸದಿರುವುದು ಖಂಡನೀಯ ಎಂದರು.
ಹಮ್ಮಿಗಿ ಗ್ರಾ.ಪಂ.ಸದಸ್ಯ ಬಿ.ಬಿ.ಕರಿಗಾರ ಮಾತನಾಡಿ, ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳು ಏನೇ ನಡೆಯಲಿ ಅಧಿಕಾರಿಗಳು ನಮ್ಮನ್ನು ಆಹ್ವಾನಿಸುವುದಿಲ್ಲ. ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಎಂದು ಈ ಹಿಂದೆ ಹಲವಾರು ಬಾರಿ ಅವರಿಗೆ ತಿಳಿಸಿದ್ದೇವೆ. ಆದರೂ, ಕರೆಯುವುದಿಲ್ಲ. ಬಿಜೆಪಿ ಸದಸ್ಯರನ್ನು ಅವರು ಕೇವಲವಾಗಿ ನೋಡುತ್ತಾರೆ. ಅಧಿಕಾರಿಗಳು ಸರ್ಕಾರಿ ಕಾರ್ಯ ನಿರ್ವಹಿಸುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಹಸೀಲ್ದಾರ ಕೆ.ಬಿ.ಕೋರಿಶೆಟ್ಟರ ಮನವಿ ಸ್ವೀಕರಿಸಿದರು.
ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಬಸವರಾಜ ಬಿಳಿಮಗ್ಗದ, ಬಿ.ಎಸ್.ಸಸಿಮಠ, ಶಿವು ನಾಡಗೌಡ್ರ, ಕೊಟ್ರೇಶ ಎಲಿಗಾರ, ವೀರನಗೌಡ ಪಾಟೀಲ, ಚನ್ನಪ್ಪ ಹಿರೇಗೌಡ್ರ, ಶಾಂತಿನಾಥ ಬಸ್ತಿ, ಕೊಟ್ರೇಶ ಬಳ್ಳಾರಿ, ಕರಿಯಪ್ಪ ಹಡಗಲಿ, ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here