ಸಿಎಂಗೆ ಇನ್ನಾದರೂ ಬುದ್ಧಿ ಬರಲಿ: ಬಿಎಸ್‍ವೈ

0
25
loading...

ರಾಜಶೇಖರಯ್ಯಾ ಹಿರೇಮಠ
ಬೆಳಗಾವಿ:3 ಕಾವೇರಿ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಡೆಗೆ ಬೊಟ್ಟು ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇನ್ನಾದರು ಸದ್ಬುದ್ಧಿ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದರು.
ಅವರು ಸೋಮವಾರ ನಗರದ ಧರ್ಮನಾಥ ಭವನದಲ್ಲಿ ಭಾರತೀಯ ಜನಾತಾ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹದಾಯಿ ಹಾಗೂ ಕಾವೇರಿ ವಿಷಯವಾಗಿ ಕೇವಲ ಕೇಂದ್ರ ಸರಕಾರವನ್ನು ಮುಖ್ಯಮಂತ್ರಿಗಳು ದೂರುತ್ತಿದ್ದರು. ಈಗ ಕೇಂದ್ರ ಸರಕಾರ ಕಾವೇರಿ ನಿರ್ವಹಣಾ ಮಂಡಳಿ ಮಾಡುವುದಿಲ್ಲ ಎಂದು ಕೋರ್ಟಿನಲ್ಲಿ ವಿನಂತಿಸಿಕೊಂಡಿದ್ದರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಮಂಡಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂಧನೆ ಸಲ್ಲಿಸಿದ್ದಾರೆ. ಇದರಿಂದ ಬಿಜೆಪಿ ನಿಲುವು ಎನ್ನೆನುವುದು ಎಲ್ಲರಿಗೂ ಗೋತ್ತಾಗಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹೆಚ್ಚಿಗೆ ಮಾತನಾಡುವುದಿಲ್ಲ. ಕೆಲಸ ಜಾಸ್ತಿ ಮಾಡುತ್ತಾರೆ. ದೇಶದ ಎಲ್ಲ ರಾಜ್ಯಗಳಿಗೆ ಸಮಾನ ಪಾಲು ಹಾಗೂ ಹಕ್ಕುಗಳನ್ನು ನೀಡುತ್ತಿದ್ದಾರೆ. ಮೋದಿ ಅವರ ಆಡಳಿತ ಅವದಿಯಲ್ಲಿ ದೇಶದ ರಾಜ್ಯಗಳಲ್ಲಿಬಿಜೆಪಿ ಪರ ವಾತಾವರಣ ನಿರ್ಮಾಣವಾಗಲಿದೆ ಎಂದು ಅವರು ಭವಿಷ್ಯ ನುಡಿದರು. ಕಾವೇರಿ ವಿಷಯವಾಗಿ ಕಾಂಗ್ರೆಸ್ ಸರಕಾರ ವಿಧಾನ ಮಂಡಳದಲ್ಲಿ ನಿರ್ಣಯ ಮಾಡಿದ ನಿಲುವಿನ ಮೇಲೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಸುಪ್ರೀಂ ಕೋರ್ಟ ಮುಂದೆ ರಾಜ್ಯದ ಪರವಾಗಿ ವಕಾಲತು ನಡೆಸುತ್ತಿದ್ದ ಫಾಲಿ ನಾರಿಮನ್ ನಮ್ಮ ರಾಜ್ಯಕ್ಕೆ ತಿರುಗಿಬಿದ್ದರು. ಈ ಹಿಂದೆ ಬಿಜೆಪಿ ಪಕ್ಷ ಹಲವು ಹೋರಾಟ ನಡೆಸಿ ನಾರಿಮನ ಬದಲಾವಣೆ ಮಾಡಬೇಕೆಂದು ವಿನಂತಿಸಿಕೊಂಡರೂ ಕ್ರಮ ಕೈಗೊಂಡಿರಲಿಲ್ಲ. ಈ ನಿಟ್ಟಿನಲ್ಲಿ ಕಾವೇರಿ ವಿಷಯವಾಗಿ ಸರ್ವಪಕ್ಷಗಳ ಸಭೆಯಿಂದ ಬಿಜೆಪಿ ದೂರ ಉಳಿಯಬೇಕಾಗಿತ್ತು ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಬಿಜೆಪಿ ಸಂಸದರು ಸೇರಿಕೊಂಡು ಕಾವೇರಿ ನಿರ್ವಹಣಾ ಸಮಿತಿ ರಚನೆ ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದೇವು ಅದರಂತೆ ಪ್ರಧಾನಿ ನ್ಯಾಯಾಲಯದಲ್ಲಿ ವಿನಂತಿಸಿಕೊಂಡಿದ್ದಾರೆ. ಪ್ರತಿಯೊಂದು ಸಣ್ಣ ವಿಷಯಕ್ಕೂ ಕೇಂದ್ರ ಸರಕಾರದ ಮೇಲೆ ಬೊಟ್ಟು ಮಾಡಿ ತೋರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಧಾನಿ ಸರಿಯಾದ ಉತ್ತರ ನೀಡಿದ್ದಾರೆ. ಈ ಹಿಂದೆ ಕಾವೇರಿ ವಿವಾದ ರಾಜ್ಯ ಸರಕಾರದ ಬೇಜವಾಬ್ದಾರಿಯೇ ಕಾರಣವಾಗಿದೆ. ಬಿಜೆಪಿಯ ಸಲಹೆಯನ್ನು ಮುಖ್ಯಮಂತ್ರಿ ಪರಿಗಣಿಸಲಿಲ್ಲ.
ಸುಪ್ರೀಂ ಕೊರ್ಟನಲ್ಲಿ ಸರಿಯಾಗಿ ವಾದ ಮಂಡಿಸಲು ಸಾಧ್ಯವಾಗದ ಸರಕಾರಕ್ಕೆ ಸದಾನಂದ ಗೌಡ, ರಮೇಶ ಜಿಗಜಿಣಗಿ ಹಾಗೂ ತಾವು ಸೇರಿಕೊಂಡು ಕೇಂದ್ರ ಸಚಿವೆ ಉಮಾ ಭಾರತಿ ಅವರಿಗೆ ಕಾವೇರಿ ಸಂಕಷ್ಟ ತಿಳಿಸಿದೆವು ಅದಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕಾವೇರಿ ನಿರ್ವಹಣಾ ಮಂಡಳಿಯ ರಚನೆ ಬೇಡ ಎಂದು ಸುಪ್ರಿಂ ಕೋರ್ಟ ತಿಳಿಸಿದ್ದಾರೆ ಎಂದರು.
ಮುಂದಿನ ಉತ್ತರ ಪ್ರದೇಶ, ಗೋವಾ, ಗುಜರಾತ, ಚುನಾವಣೆಗಳಲ್ಲಿ ಬಿಜೆಪಿ ಪ್ರಚಂಡ ಬಹುಮತಗಳಿಂದ ಗೆಲ್ಲುವು ಸಾಧಿಸಲಿದೆ. ಆಗ ದೇಶದಲ್ಲಿ ಕಾಂಗ್ರೆಸ್ ಪಕ್ಷ ದೂಳಿಪಟವಾಗಲಿದೆ. ಕೇವಲ 400 ದಿನಗಳಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಚುನಾವಣೆ ಹತ್ತಿರವಾಗುತ್ತಿದೆ.
ಈಗಿನಿಂದಲೇ ಕಾರ್ಯಕರ್ತರು ದುಡಿಯಬೇಕಿದೆ. ಪ್ರತಿಯೊಂದು ಬೂತ್‍ನಲ್ಲಿ ಪಕ್ಷ ಬಲಪಡಿಸಿ ಬೆಳೆಸಬೇಕಲ್ಲದೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಹಾಗೂ ಕೇಂದ್ರ ಸರಕಾರದ ಅಭಿವೃದ್ಧಿ ವಿಷಯವನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕಿದೆ. ಕಾಂಗ್ರೆಸ್ ಆಡಳಿತದ ಬಗ್ಗೆ ಜನರು ಹಾಗೂ ಸರಕಾರಿ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಸಾಕಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರು ಹೇಳಿದರು.ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ನೂರರಲ್ಲಿ ಶೇ. 50 ಸಹ ಸರಕಾರದ ಹಣ ಖರ್ಚಾಗುತ್ತಿಲ್ಲ. ಸರಕಾರ ಮತ್ತು ಅಧಿಕಾರಿಗಳು ಸರಕಾರದ ಬೊಕ್ಕಸ ತಿಂದು ಹಾಕುತ್ತಿದ್ದಾರೆ.
ಬೃಹತ ಮೋತ್ತದ ಸರಕಾರದ ಹಣ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಜಾರಿಯಾಗುತ್ತಿಲ್ಲ ಎಂದು ಯಡಿಯೂರಪ್ಪ ಹೇಳಿದರು.ಈ ಸಂದರ್ಭದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ನಿರ್ಮಲಾ ಸಿತಾರಾಮ್, ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಸಿ.ಎಮ್. ಉದಾಸಿ, ಸಂಸದ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ, ಶೋಭಾ ಕರಂದ್ಲಾಜೆ, ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಜಿಲ್ಲಾ ಗ್ರಾಮೀಣ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ನಗರ ಜಿಲ್ಲಾಧ್ಯಕ್ಷ ಅನಿಲ ಬೆನಕೆ ಸೇರಿದಂತೆ ಮೊದಲಾದವರು ಹಾಜರಿದ್ದರು.
ರಾಯಚೂರ ಜಿಲ್ಲೆಯ ಲಿಂಗಸಗೂರಿಬಲ್ಲಿ ಅಕ್ಟೋಬರ 23 ರಂದು ಬೃಹತ ಒಂದು ಲಕ್ಷ ಎಸ್‍ಸಿ ಎಸ್‍ಸಿ ಜನರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. 27 ರಂದು ಬೆಂಗಳೂರಿನಲ್ಲಿ ಓಬಿಸಿ ಜನಾಂಗದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುತ್ತಿದೆ.
-ಬಿ.ಎಸ್.ಯಡಿಯೂರಪ್ಪ
ಬಿಜೆಪಿ ರಾಜ್ಯಾಧ್ಯಕ್ಷ
ಕಾವೇರಿ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ

loading...

LEAVE A REPLY

Please enter your comment!
Please enter your name here