ಸ್ತ್ರೀಕುಲದ ಕಣ್ಮಣಿ ಅಕ್ಕಮಹಾದೇವಿ : ನೀಲಗಂಗಾ

0
26
loading...

ಬೆಳಗಾವಿ : ಕನ್ನಡ ಸಾಹಿತ್ಯ ವನದಲ್ಲಿ ಕವಿ ಕೋಗಿಲೆಯಾಗಿ ಹಾಡಿ, ಪಾರಮಾರ್ಥ ಸರಸಿಯಲ್ಲಿ ತೇಲಿ, ದಾರ್ಶನಿಕ ಕಾನನದಲ್ಲಿ ಭಕ್ತಿಯ ನವಿಲಾಗಿ ನರ್ತಿಸಿದ ವೀರ ವಿರಾಗಿಣಿ ಶ್ರೀ ಗುರು ಅಕ್ಕಮಹಾದೇವಿಯವರು. ಅವರ ಒಂದೊಂದು ವಚನವೂ ಕೇವಲ ತತ್ವಜ್ಞಾನ ಒಂದನ್ನೇ ಅಲ್ಲದೆ, ಸಂಸಾರಿಕ ಜೀವನದಲ್ಲೂ ಯಶಸ್ವಿಯಾಗುವ ಸೂತ್ರಗಳನ್ನು ಒಳಗೊಂಡಿವೆ ಎಂದು ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣದ ಸಂಚಾಲಕಿ ನೀಲಗಂಗಾ ಪಾಟೀಲ ಹೇಳಿದರು.
ಅವರು ದಸರಾ ಹಬ್ಬವನ್ನು ಕಲ್ಯಾಣ ಕ್ರಾಂತಿ ಸಂಸ್ಮರಣೆಯಾಗಿ ವಿಶ್ವಗುರು ಬಸವ ಮಂಟಪದಲ್ಲಿ ಏರ್ಪಡಿಸಿದ ಐದÀನೇ ದಿನದ ಗುರು ಅಕ್ಕಮಹಾದೇವಿ ತಾಯಿಯವರ ಪೂಜೆ ಮತ್ತು ಚರಿತ್ರೆ ಪಠಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸ್ತ್ರೀ ಅಬಲೆ, ಪುರುಷನ ಸೇವೆಯಲ್ಲೆ ತೊಡಗಬೇಕು, ವಿವಾಹ ಬಂಧನದ ಹೊರತು ಸ್ತ್ರೀಗೆ ಬೇರೆ ಬದುಕಿಲ್ಲ ಎಂಬ ಪಾರತಂತ್ರ್ಯ ಪ್ರವಾಹದ ವಿರುದ್ಧ ಸೆಣಸಿ ಸಫಲರಾದ ಅಕ್ಕನವರು, ಹುಟ್ಟಿದ್ದು ಉಡುತಡಿಯಲ್ಲಾದರೂ ತಾವೊಬ್ಬರೇ ಇಂದಿನ ಬಸವಕಲ್ಯಾಣಕ್ಕೆ ಬಂದು, ಶರಣರ ಸಮೂಹದಲ್ಲಿ ಬಾಳಿ ಶ್ರೀಶೈಲದ ಕದಳಿ ವನದಲ್ಲಿ ಬಯಲಾದ ಶ್ರೇಷ್ಠ ಯೋಗಿಣಿ ಎಂದರು.

ಬೆಳಗಾವಿ ಜಿಲ್ಲಾ ಲಿಂಗಾಯತ ಧರ್ಮ ಮಹಾ ಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆ ಮತ್ತು ವಿಶ್ವಗುರು ಬಸವ ಜ್ಯೋತಿ ಯಾತ್ರಾ ಸಮಿತಿಗಳ ಸಂಯುಕ್ತಾಶ್ರಯದ ಕಾರ್ಯಕ್ರ ಮದ ಸನ್ನಿಧಾನವನ್ನು ವಿಶ್ವಗುರು ಬಸವ ಮಂಟಪದ ಸಂಚಾಲಕಿ ಸರೋಜಿನಿ ಅಲ್ಲಯ್ಯನವರಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಅಂಗಡಿ ವಹಿಸಿದ್ದರು. ಶೀಲಾ ಗುಡಸ್‌ ಸ್ವಾಗತಿಸಿದರು. ಕೆ. ಬಸವರಾಜ, ಪ್ರೇಮಾ ಗುಡಸ್‌, ತೃಪ್ತಿ ಕಾಜಗಾರ್‌, ಶೀಲಾ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here