ಹಾನಗಲ್ಲ ತಾಲೂಕು ಬರಪೀಡಿತ ಪ್ರದೇಶ

0
23
loading...

ಹಾನಗಲ್ಲ: ಈ ಭಾರಿ ಮಳೆ ಕಳೇದ ವರ್ಷಕ್ಕಿಂತ ಕನಿಷ್ಠ ಮಳೆಯಾದ ಪರಿಣಾಮ ಹಾನಗಲ್ಲ ತಾಲೂಕಿನ ರೈತರ ಬೆಳೆ ಸಂಪೂರ್ಣ ಹಾನಿಯಾಗಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಹಾನಗಲ್ಲ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ ಎಂದು ಶಾಸಕ ಮನೋಹರ ತಹಶೀಲ್ದಾರ ಹೇಳಿದರು.
ಗುರುವಾರ ಇಲ್ಲಿನ ಸಾಮಥ್ರ್ಯ ಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಅಭಿನಂದಿಸಿ ಮಾತನಾಡಿದ ಅವರು. ರೈತರಿಗೆ ಬರ ಪರಿಹಾರ ಹಣವು ಹೆಚ್ಚಿನ ರೀತಿಯಲ್ಲಿ ತತ್‍ಕ್ಷಣವೆ ದೊರೆಯುವಂತಾಗಲು ರಾಜ್ಯ ಸರಕಾರದ ಮೇಲೆ ಒತ್ತಡ ತರಲಾಗುವುದು. ಈಗಾಗಲೆ ಬೆಳೆವಿಮಾ 123 ಕೋಟಿ ರೂ ಬೆಳೆವಿಮೆ ಬಿಡುಗಡೆಯಾಗಿದ್ದು, ರೈತರ ಖಾತೆಗಳಿಗೆ ಜಮೆಯಾಗುತ್ತಲಿದೆ ಎಂದರು.
ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ ಈಗಾಗಲೆ 50 ಲಕ್ಷ ರೂ. ಮಂಜೂರಾಗಿದ್ದು ಶಾಸಕರ ಟಾಸ್ಕ ಪೋರ್ಸ ಸಮಿತಿಯಲ್ಲಿ ನಿರ್ಣಯವಾದಂತೆ ಜಿಲ್ಲಾಧಿಕಾರಿಗಳು ಹಣ ಬಿಡುಗಡೆ ಮಾಡುತ್ತಾರೆ.
ಕೊಳವೆ ಬಾವಿ ಕೊರೆಸಲು, ಈಗಾಗಲೆ ಇರುವ ಕೊಳವೆ ಬಾವಿಗಳನ್ನು ಪುನರುಜ್ಜೀವನಕ್ಕಾಗಿ ಹಣ ಬಳಸಲಾಗುವುದು ಎಂದರು.
ತಾಲೂಕಿಗೆ ಈಗಾಗಲೆ 25 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ತೀವೃ ಕುಡಿಯುವ ನೀರಿನ ಕೊರತೆ ಇರುವ, ಪ್ಲೋರೈಡ್, ಆರ್ಸಾನಿಕ ಅಂಶ ವಿರುವ ಪ್ರದೇಶಗಳಲ್ಲಿಕಂಡುಬರುವ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ 1000 ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಈ ಘಟಕಗಳನ್ನು ಸ್ಥಾಪಿಸಲು ಆದ್ಯತೆ ನೀಡಲಾಗುವುದು ಎಂದರು.
ಆಡೂರು, ಮಲಗುಂದ ಮತ್ತು ಶೇಷಗಿರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಸ್ತಾವನೆಗೆ ಆಡಳಿತಾತ್ಮಕ ಮಂಜೂರಾತಿ ದೊರಕಿದ್ದು, ತಾಂತ್ರಿಕ ಮತ್ತು ಹಣಕಾಸು ಇಲಾಖೆಯ ಮಂಜೂರಾತಿಯು ದೊರೆತಲ್ಲಿ ಈ ಯೋಜನೆಗಳು ಸಹ ಜಾರಿಗೆ ಬರಲಿವೆ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ತಹಶೀಲ್ದಾರ್ ಶಕುಂತಲಾ ಚೌಗಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಸಿ.ಎಸ್.ಬಡಿಗೇರ, ಪುರಸಭಾ ಸದಸ್ಯ ಅಶೋಕ ಆರೇಗೊಪ್ಪ, ಕೆಡಿಪಿ ಸದಸ್ಯ ಎಂ.ಆರ್.ಗುತ್ತಲ, ಮುಖಂಡರಾದ ದಾನಪ್ಪ ಗಂಟೇರ, ಘನಶ್ಯಾಮ ದೇಶಪಾಂಡೆ, ಯಲ್ಲಪ್ಪ ಕಿತ್ತೂರ.

loading...

LEAVE A REPLY

Please enter your comment!
Please enter your name here