ಹೇಮರಡ್ಡಿ ಮಲ್ಲಮ್ಮ ಚೈತನ್ಯ ರಥ ಯಾತ್ರೆ

0
31
loading...

ನರಗುಂದ: ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಪಾನ ಪೌಂಡೇಶನ್ ಶ್ರೀಶೈಲ ಮಠ ಮತ್ತು ಕರ್ನಾಟಕ ರೆಡ್ಡಿ ಸಮಾಜ ಹಾಗೂ ತಾಲೂಕಾ ರಡ್ಡಿ ಸಮಾಜದ ವತಿಯಿಂದ ಹೇಮರಡ್ಡಿ ಮಲ್ಲಮ್ಮ ಚೈತನ್ಯ ರಥ ಯಾತ್ರೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇದರ ಉದ್ದೇಶ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜೀವನ ಮತ್ತು ಸಾಧನೆ ಕುರಿತಾಗಿ ವಿಚಾರ ಸಂಕೀರ್ಣ ಅಂಗವಾಗಿ ಜನಜಾಗೃತಿ ಮೂಡಿಸುವುದಾಗಿದೆ ಎಂದು ಶಾಸಕ ಬಿ.ಆರ್. ಯಾವಗಲ್ ಇಂದಿಲ್ಲಿ ತಿಳಿಸಿದರು.
ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಚೈತನ್ಯ ರಥ ಯಾತ್ರೆ ನರಗುಂದಕ್ಕೆ ಬುಧುವಾರ ಆಗಮಿಸಿದ ಸಂದರ್ಭದಲ್ಲಿ ಶಾಸಕ ಬಿ.ಆರ್. ಯಾವಗಲ್ ಪೂಜೆಗೈದು ಯಾತ್ರೆಯನ್ನು ಸ್ವಾಗತಿಸಿಕೊಂಡು ನಂತರ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಶೈಲ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಪ್ರೇರಣೆಯಿಂದ ಸಾದ್ವಿ ಶಿರೋಮಣಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜೀವನ ಸಂದೇಶಗಳನ್ನು ಹಾಗೂ ಐತಿಹಾಸಿಕ ಘಟಣೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಾರ್ಗದರ್ಶನದಲ್ಲಿ ಜಸ್ಟೀಸ್ ಶಿವರಾಜ ಪಾಟೀಲ ಅವರ ಗೌರವಾಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪನವರ ಮಾರ್ಗದರ್ಶನದಲ್ಲಿ ಹೇಮರಡ್ಡಿ ಮಲ್ಲಮ್ಮನವರ ಜೀವನ ಸಾಧನೆ ಎಂಬ ರಾಷ್ಟ್ರೀಯ ವಿಚಾರ ಸಂಕೀರಣವನ್ನು ಡಿ. 11 ರಂದು ಕೂಡಲಸಂಗಮದಲ್ಲಿ ನಡೆಸಲಾಗುವುದೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚಗ್ರಹ ಗುಡ್ಡದ ಸಿದ್ದಲಿಂಗ ಶಿವಾಚಾರ್ಯರು, ಶಿವಕುಮಾರ ಸ್ವಾಮಿಗಳು, ವಿರಕ್ತಮಠದ ಚನ್ನಬಸವ ಸ್ವಾಮಿಗಳು, ಪತ್ರಿವನಮಠದ ಗುರುಸಿದ್ದವೀರ ಶಿವಾಚಾರ್ಯರು, ಮುಗಳಕೋಡ ದಾಸೋಹ ಶಾಖಾ ಮಠದ ಬಸವರಾಜ ದೇವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಭೈರನಹಟ್ಟಿ ಶಾಂತಲಿಂಗ ಸ್ವಾಮಿಗಳು, ರಡ್ಡಿ ಕ್ಷೇಮಾಭಿವೃದ್ದಿ ತಾಲೂಕ ಘಟಕದ ಅಧ್ಯಕ್ಷ ರಮೇಶಗೌಡ ಕರಕನಗೌಡ್ರ, ವಾಸು ವೆಂಕರಡ್ಡಿಯವರ, ಕಾಂಗ್ರೆಸ್ ತಾಲೂಕಾ ಪ್ರ. ಕಾರ್ಯದರ್ಶಿ ರಾಜು ಕಲಾಲ, ಪುರಸಭೆ ಸದಸ್ಯ ದೇವರಡ್ಡಿ ವೆಂಕರಡ್ಡಿಯವರ, ಚನ್ನಬಸಪ್ಪ ಕಂಠಿ, ವೆಂಕಣ್ಣ ಹೂಲಿ, ಕೆ.ಬಿ. ಅರಕೇರಿ, ಎಸ್.ಎಂ. ಭೂಸರಡ್ಡಿ, ಕೆ.ಎನ್. ಮೂಗನೂರ, ರಡ್ಡಿ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ಶಶಿಧರ ದ್ಯಾವನಗೌಡ್ರ, ನಿರ್ಧೆಶಕ ಡಿ.ಎಚ್. ಅಜ್ಜಿ, ಕೆ.ಆರ್. ಮಲ್ಲನಗೌಡ್ರ, ಬಸವರಾಜ ರಾಯರೆಡ್ಡಿ, ಎಸ್.ಬಿ. ಪಾಟೀಲ, ಚನ್ನವೀರಗೌಡ್ರ, ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ತಾಪಂ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಚಂದ್ರಶೇಖರ ಪಾಟೀಲ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಪೂರ್ವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಚೈತನ್ಯ ರಥ ಯಾತ್ರೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೊರಡಿಸಲಾಗಿತ್ತು. ಡೊಳ್ಳಿನ ಮಜಲು ಹಾಗೂ ಜಾಂಜ್ ಮೇಳಗಳ ನಿನಾದ ನೋಡುಗರ ಮನಸೆಳೆಯಿತು. ಮಹಿಳೆಯರು ಕುಂಬ ಮೇಳದಲ್ಲಿ ಪಾಲ್ಗೊಂಡಿದ್ದರು.
ಎಸ್.ವೈ. ಪಾಟೀಲ ನಿರೂಪಿಸಿದರು. ಜಿ.ಎನ್. ದೊಡ್ಡಲಿಂಗಪ್ಪನವರ ಸ್ವಾಗತಿಸಿದರು. ಡಿ.ಎಚ್. ಅಜ್ಜಿ ವಂದಿಸಿದರು.

loading...

LEAVE A REPLY

Please enter your comment!
Please enter your name here