37 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಪೂಜೆ

0
17
loading...

ಕಾಗವಾಡ: ಕಳೆದ ಅನೇಕ ವರ್ಷಗಳಿಂದ ರಸ್ತೆ ಅಭಿವೃದ್ಧಿ ಮಾಡುವ ಸಾರ್ವಜನಿಕ ಬೆಡಿಕೆ ಆಗಿರುವ ಕಾಗವಾಡ-ಬಸವನಗರ ಮಧ್ಯದ 1.20 ಕಿ.ಮೀ 37 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಪೂಜೆ ಕಾಗವಾಡ ಶಾಸಕ ರಾಜು ಕಾಗೆ ನೆರವೆರಿಸಿದರು.
ರವಿವಾರ ಸಂಜೆ ರಸ್ತೆ ಕಾಮಗಾರಿಗೆ ಪೂಜೆ ನೀಡಿ ಶಾಸಕ ರಾಜು ಕಾಗೆ ಚಾಲನೆ ನೀಡಿ ಮಾತನಾಡುವಾಗ ಹಿಂದುಳಿದ ವರ್ಗದ (ಎಸ್.ಇ.ಪಿ) ಯೊಜನೆ ಅಡಿಯಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ದು ಗುಣಮಟ್ಟದ ರಸ್ತೆ ನಿರ್ಮಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು.
ಕಾಗವಾಡ ಜಿ.ಪಂ. ಸದಸ್ಯ ಅಜೀತ ಚೌಗುಲೆ ಇವರು ರಸ್ತೆ ಕಾಮಗಾರಿ ಮಂಜೂರುಗೊಳಿಸಿದ್ದರಿಂದ ಶಾಸಕರನ್ನು ಅಭಿನಂದಿಸಿದರು.ಈ ವೇಳೆ ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯೆಕ್ಷ ಜೊತಗೌಡ ಪಾಟೀಲ, ಗ್ರಾಂ.ಪಂ. ಶ್ರೀದೇವಿ ಚೌಗಲೆ, ಸದಸ್ಯರಾದ ರಮೇಶ ಚೌಗಲೆ, ಪ್ರಕಾಶ ಪಾಟೀಲ, ಸತ್ಯಗೌಡ ಪಾಟೀಲ, ಪ್ರಕಾಶ ದೊಂಡಾರೆ ವಿದ್ಯಾದರ ದೊಂಡಾರೆ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳಾದ ಸುನೀಲ ಬಳೋಲ, ಆರ್.ಪಿ ಅವತಾಡೆ,ಡನ್.ಎಮ್ ಮಗದುಮ್ಮ, ಗುತ್ತಿಗೆದಾರ ಎಸ್,ಎಮ್.ಮೊರೆ ಮತ್ತು ಗ್ರಾಮಸ್ಥÀ್ತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here