ಕನ್ನಡ ಕಟ್ಟುವ ಭವ್ಯ ಸಮಾರಂಭದ ಉತ್ಸವ

0
11
loading...

ಕನ್ನಡಮ್ಮ ಸುದ್ದಿ-ಪಾಲಭಾವಿ
ಸಮೀಪದ ಪರಮಾನಂದ ವಾಡಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಸಂಸ್ಥೆ ಆವರಣದಲ್ಲಿ ಸುಟ್ಟಟ್ಟಿ ಕ್ರಾಸ್‌ ದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕನ್ನಡ ರಾಜೋತ್ಸವವನ್ನು ವಿಶಿಷ್ಠ ಹಾಗೂ ಅರ್ಥಪೂರ್ಣವಾಗಿ ಆಚರಿಸುವದರಿಂದ ಕೃಷ್ಠೆಯ ಕನ್ನಡ ಮಹೋತ್ಸವ-2016 ಕಾರ್ಯಕ್ರಮವನ್ನು ಮಂಗಳವಾರ ನ.1 ರಂದು ಮದ್ಯಾಹ್ನ 3 ಗಂಟೆಗೆ ಜರುಗಲಿ ಎಂದು ಸನದಿ ಹೇಳಿದರು.
ಅವರು ಸಮೀಪದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕನ್ನಡಕ್ಕಾಗಿ, ತೋಡಗಿಸಿಕ್ಕೊಂಡವರನ್ನು, ವಿಶೇಷವಾಗಿ ಕನ್ನಡ ಸಾಹಿತ್ಯವನ್ನು ಬೆಳೆಸಿದವರನ್ನು, ಕನ್ನಡ ನೆಲ, ಜಲ, ಭಾಷೆಯನ್ನು ಬೆಂಬಲಿಸುವವರನ್ನು ಸನ್ಮಾನಿಸಲಾಗುವದೆಂದು ಸಂತೋಷ ಸನದಿ ಹೇಳಿದರು.
ಬಸವ ಬೆಳವಿ ಚರಮೂರ್ತಿ ಚರಂತೇಶ್ವರ ಮಠ ಶ್ರೀ ಶರಣ ಬಸವ ದೇವರು ಸಾನಿಧ್ಯವಹಿಸುವರು, ಮಂಡ್ಯ ಜಿಲ್ಲೆಯ ಮಹಾಕವಿ ಡಾ.ಪ್ರಧೀಪಕುಮಾರ ಹೆಬ್ರಿ, ಅಥಿತಿ ಉಪನ್ಯಾಸ ನೀಡುವರು, ಮಾಜಿ ಸಂಸದ, ಶೀಕ್ಷಣ ಪ್ರಾಸಾರಕ ಮಂಡಳ ಅಧ್ಯಕ್ಷ ಅಮರಸಿಂಹ ಪಾಟೀಲ ಕನ್ನಡದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ರಾಯಬಾಗ ಶಾಸಕ ಡಿ.ಎಮ್‌.ಐಹೊಳೆ ಮುಖ್ಯ ಅಥಿತಿಗಳಾಗಿ ಆಗಮಿಸುವರು.
ಭಾಜಪ ಪಕ್ಷದ ಕುಡಚಿ ಮಂಡಲ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಸನದಿ ಸಭೆಯ ಅಧ್ಯಕ್ಷತೆವಹಿಸುವರು. ಕಸಪಾ ತಾಲೂಕ ಅಧ್ಯಕ್ಷ ಡಾ.ಎಲ್‌.ಎಸ್‌.ಜಂಬಗಿ, ತಾಲೂಕ ಸಿರಿಗನ್ನಡ ಮಹಿಳಾ ವೇದಿಕೆ ಅಧ್ಯಕ್ಷೆ ಡಾ.ರತ್ನಾ ಬಾಳಪ್ಪಣ್ಣವರ, ತಾಲೂಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಅಶೋಕ ಅಂಗಡಿ, ರಂಗ ಕಲಾವಿದ ಬಾಪುಸಾಹೇಬ ತಾಶೇವಾಲೆ, ಪ್ರಗತಿಪರ ರೈತ ರಾಕಶೇಖರ ಖಣದಾಳೆ, ಸಮಾಜ ಸೇವಕ ರಾಜೇಂದ್ರ ಐಹೊಳೆ ಇವರನ್ನು ಸನ್ಮಾನಿಸಲಾಗುವದು.
ಬಿಇಓ ರಾಜೇಂದ್ರ ತೇರದಾಳ, ಶರಣ ವಿಚಾರ ವೇದಿಕೆ ಅಧ್ಯಕ್ಷ ಐ.ಆರ್‌.ಮಠಪತಿ, ಸಾಹಿತಿ ವ್ಹಿ.ಎಸ್‌.ಮಾಳಿ, ಚೌಗಲೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಲ್‌.ಬಿ.ಚೌಗಲೆ, ಸಾಹಿತಿ ಶಿವಾನಂದ ಬೆಳಕುಡ, ಜಿ.ಪಂ.ಮಾಜಿ ಸದಸ್ಯ ಶ್ರೀಶೈಲ ಪಾಲಭಾವಿ, ಪರಮಾನಂದವಾಡಿ ಗ್ರಾ.ಪಂ.ಅಧ್ಯಕ್ಷ ಮೌಲಾಲಿ ಮುಲ್ಲಾ, ನಿಲಜಿ ಗ್ರಾ.ಪಂ.ಅಧ್ಯಕ್ಷೆ ರೂಪಾ ಮಗದುಮ್‌ ಇತರರು ಆಗಮಿಸುವರು.
ಸಂಜೆ 6ಗಂಟೆಗೆ ಉಗಾರ ಬುದ್ರುಕ ಪಟ್ಟಣದ ಗಾಣಗಂಧರ್ವ ಶ್ರೀ ಅಭಯ ಹವಲೆ ಸರತ್ಯದ ಸಪ್ತ ಸ್ವರ ಮಂಜುಳ ಗಾನ ಕಲಾವಿದರಿಂದ ಸಂಗೀತ ಕಾರ್ಯಕ್ರ ಜರಗುಬದೆಂದು ತಿಳಿಸಿದರು. ಈ ಸಂದರ್ಭದಲ್ಲಿ:-ರಾಜು ಐತವಾಡೆ, ಮಾರುತಿ ಕಲ್ಯಾಣಕರ, ಪ್ರಕಾಶ ಬಸ್ತವಾಡೆ, ಮೇರಾಸಾಬ ಡಾಂಗೆ, ವಿಠ್ಠಲ ಪೂಜೇರಿ, ಧನರಾಜ ಚಾಳಕೆ ಮತ್ತಿತರು ಇದ್ದರು.

loading...

LEAVE A REPLY

Please enter your comment!
Please enter your name here