ಕರ್ನಾಟಕ ವೈಭವ, ಬಡ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ, ಸಂಗೀತ ಸಂಜೆ ಕಾರ್ಯಕ್ರಮ

0
26
loading...

ಕನ್ನಡಮ್ಮ ಸುದ್ದಿ-ಶಿಗ್ಗಾವಿ : ಇಂದಿನ ಆಧುನಿಕ ಯುಗದಲ್ಲಿ ಬೇರೆ ಭಾಷೆಗಳ ಹಾವಳಿಯಿಂದ ಕನ್ನಡ ಭಾಷೆ ಸಂಕಷ್ಟದಲ್ಲಿದೆ, ಪ್ರತಿಯೊಬ್ಬ ಕನ್ನಡಿಗ ಕನ್ನಡದ ಕಿಚ್ಚು ಹಚ್ಚುವಂತ ಕೆಲಸ ಮಾಡಬೇಕಿದೆ ಮತ್ತು ಆಧುನಿಕ ಬರಹಗಾರರು, ಚಿಂತಕರು ಮತ್ತು ಬುದ್ದಿಜೀವಿಗಳು ಕನ್ನಡ ಭಾಷೆಯ ಮೇಲೆ ಬೆಳಕು ಚಲ್ಲುವಂತ ಕೆಲಸ ಮಾಡಬೇಕಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಪಟ್ಟಣದ ಸಂತೆ ಮೈದಾನದಲ್ಲಿ ಜಯ ಕರ್ನಾಟಕ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡ 61 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ವೈಭವ ಮತ್ತು ಬಡ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಹಾಗೂ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಜಲ, ನೆಲ ಮತ್ತು ಬಾಷೆಯ ಬಗ್ಗೆ ಚಿಂತನೆ ಮತ್ತು ಹೋರಾಟಗಳು ನಡೆಯಬೇಕಿದೆ, ಈ ಹೋರಾಟಗಳು ಸಂಘಟನೆಗಳಿಂದ ಮಾತ್ರ ಸಾದ್ಯ, ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸವಿದೆ 2011 ರಲ್ಲಿ ರಾಷ್ರೀಯ ಭಾಷೆಯಾಗಿ ಘೋಷಣೆ ಮಾಡಿದರೇ ಅದು ಇನ್ನು ಜಾರಿಯಾಗಿಲ್ಲ, ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ, ಕನ್ನಡ ನಮ್ಮ ಉಸಿರು ಮತ್ತು ಹಸಿರು ನಾವು ಕನ್ನಡ ಉಳಿಸುವದರೊಂದಿಗೆ ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಮತ್ತು ಜಯ ಕರ್ನಾಟಕ ಸಂಘಟನೆಯವರು ಪ್ರತಿಯೊಂದು ಗ್ರಾಮಗಳಲ್ಲಿ ಗಿಡಗಳನ್ನು ನೆಡಬೇಕು ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಾಯ ಸಹಕಾರ ಮಾಡುವ ಕೆಲಸ ಮಾಡುತ್ತೆನೆ, ಕನ್ನಡ ನಾಡನ್ನು ಜಯ ಗೊಳಿಸಲು ಜಯ ಕರ್ನಾಟಕ ಸಂಘಟನೆಯಿಂದ ಸಾದ್ಯ ಎಂದು ಹೇಳಿದರು.
ಜಯ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಸದಾನಂದ ಶೆಟ್ಟಿ ಮಾತನಾಡಿ 2008 ರಲ್ಲಿ 14 ಜನರಿಂದ ಸ್ಥಾಪನೆಯಾದ ಸಂಘಟನೆ ಇಂದು ರಾಜ್ಯದಲ್ಲಿ 30 ಲಕ್ಷ ಸದಸ್ಯರನ್ನು ಹೊಂದಿದೆ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ಅವರಿಗೆ ಸಾಕಷ್ಟು ಹಣ ಬಲ ಜನ ಬಲ ಇದೆ ಆದರೆ ಅವರು ಈ ಸಂಘಟನೆಯಿಂದ ಬಡವರಿಗೆ ಮುಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಮತ್ತು ಶಿಕ್ಷಣ ಒದಗಿಸುತ್ತಿದ್ದಾರೆ ಸಂಘಟನೆ ಅನ್ಯಾಯದ ವಿರುದ್ದ ಹೊರಾಟ ಮಾಡುತ್ತಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಲು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಭರತ ಕಳಸೂರ ಮಾತನಾಡಿ ಕರ್ನಾಟಕದ ಏಕಿಕರಣಕ್ಕೆ ಶ್ರಮಿಸಿದ ಮಹನಿಯರನ್ನು ನೆನೆಯುವಂತ ದಿನ, ಕನ್ನಡ ಭಾಷೆಯನ್ನು ಉಳಿಸಿ ಬೆಳಿಸಿಕೊಂಡು ಹೋಗುವದು ಯುವಕರ ಜವಾಬ್ದಾರಿಯಾಗಿದೆ, ಶಿಗ್ಗಾವಿ ತಾಲೂಕಾ ಘಟಕ ಹೃದವಂತಿಕೆಯಿಂದ ಅರ್ಥಪೂರ್ಣ ಕಾರ್ಯಕ್ರಮವನ್ನು ಮಾಡುತ್ತಿದೆ ರಾಜ್ಯಕ್ಕೆ ಶಿಗ್ಗಾವಿ ತಾಲೂಕಿನ ರಾಜಕಾರಣಿಗಳು ಮಾದರಿಯಾಗಿದ್ದಾರೆ ಅವರ ಕನಸ್ಸುಗಳಿಂದ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು ಸಾಕಷ್ಟು ಜನರ ಪ್ರಾಣಹಾನಿಯಾಗುತ್ತಿದೆ ಆದರಿಂದ ಅವಶ್ಯಕತೆ ಇದ್ದಲ್ಲಿ ಅಂಡರ್ ಪಾಸ್ ಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ ಜಯ ಕರ್ನಾಟಕ ಸಂಘಟನೆ ತಾಲೂಕಿನಲ್ಲಿ ಸಮಾಜಮುಖಿಯಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದು ಮಹತ್ವದ ಪಾತ್ರ ನಿರ್ವಹಿಸುತ್ತಿದೆ, ಕರ್ನಾಟಕದ ಏಕಿಕರಣಕ್ಕೆ ಶ್ರಮಿಸಿದ ಮಹನಿಯರನ್ನು ನೆನೆದ ಅವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವಿಷಯವಾಗಿ ಎಲ್ಲ ರೀತಿಯ ಚಳುವಳಿಯಲ್ಲಿ ಭಾಗಿಯಾಗಿದ್ದೆನೆ ಮತ್ತು ನಾನು ಹೋರಾಟ ಮಾಡಿ ಒಂದೇ ಅಂಡರ್ ಪಾಸ್ ಇದ್ದದ್ದನ್ನು ಎರಡಕ್ಕೆ ಏರಿಸಲು ಚಳುವಳಿ ಮುಖಾಂತರ ಶ್ರಮಿಸಿದ್ದೆನೆ, ಗಂಗಿಬಾವಿ ಕ್ರಾಸ್ ಮತ್ತು ಪ್ರವಾಸಿ ಮಂದಿರದ ಬಳಿ ಅಂಡರ್ ಪಾಸ್ ನಿರ್ಮಿಸಲು ಸಾಕಷ್ಟು ಭಾರಿ ಮುಖ್ಯಮಂತ್ರಿಗಳಿಂದ ಹಿಡಿದು ಕೇಂದ್ರದ ಈಗಿನ ಪ್ರಧಾನ ಮಂತ್ರಿಯರಿಗೂ ಮನವಿ ಮಾಡಿದ್ದೆನೆ, ಪಟ್ಟಣದಲ್ಲಿ ನಿರ್ಮಿಸಿದ ಸರ್ವಿಸ್ ರಸ್ತೆಗಳು ಕ್ರಮಬದ್ದವಾಗಿ ನಿರ್ಮಿಸಿಲ್ಲ ಎಂದು ಆರೋಪಿಸಿದರು.
ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು, ತಾಲೂಕಾ ಕ.ಸಾ.ಪ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ ಉಪನ್ಯಾಸ ನೀಡಿದರು, ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀಕಾಂತ ದುಂಡಿಗೌಡ್ರ ಮಾತನಾಡಿದರು. ಜಯ ಕರ್ನಾಟಕ ತಾಲೂಕಾ ಅಧ್ಯಕ್ಷ ದುರಗಪ್ಪ ವಡ್ಡರ ಅದ್ಯಕ್ಷತೆ ವಹಿಸಿದ್ದರು.
ಪ್ರಥಮ ದರ್ಜೆ ಗುತ್ತಿಗೆದಾರ ಅರ್ಜುನ ಹಂಚಿನಮನಿ, ಪುರಸಭೆ ಮಾಜಿ ಅಧ್ಯಕ್ಷ ರಾಮೂ ಪೂಜಾರ, ಮುಖಂಡ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯ ಶಂಕ್ರಮ್ಮ ಅಂದಲಗಿ, ಸಂಘಟನೆಯ ಮುಖಂಡರಾದ ರವಿ ಕಬಾಡೆ, ಚಂದ್ರು ದೊಡ್ಡಮನಿ, ಸಂತೋಷ ಬಪ್ಪನಕಟ್ಟಿ, ಗದಿಗೇಪ್ಪ ಶಿಂಗಾಪೂರ ನಿಂಗಪ್ಪ ಮೊಟಳ್ಳಿ, ಈರಪ್ಪ ಹಳ್ಯಪ್ಪನವರ, ಹನಮಂತಪ್ಪ ಬಂಡಿವಡ್ಡರ, ಅಣ್ಣಪ್ಪ ಬಡ್ಡಿ, ಬಸುವರಾಜ ವಡ್ಡರ, ನಾಗರಾಜ ವಡ್ಡರ, ಪ್ರಕಾಶ ವಡ್ಡರ, ಶಮಕರ ವಡ್ಡರ, ಮಹಿಳಾ ಪದಾಧಿಕಾರಿಗಳಾದ ದ್ಯಾಮಕ್ಕ ವಡ್ಡರ, ಸುಜಾತಾ ವಡ್ಡರ ಸೇರಿದಂತೆ ಸಂಘಟನೆಯ ಸರ್ವ ಸದಸ್ಯರು ಆಟೋ ಚಾಲಕರ ಅಧ್ಯಕ್ಷರು ಹಾಗೂ ಚಾಲಕರು, ರೈತರು, ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು, ಪುರಸಭೆ ಸದಸ್ಯ ಫಕ್ಕೀರೇಶ ಶಿಗ್ಗಾಂವ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪಟ್ಟಣದ ಹೋರವಲಯದ ಗಂಗಿಭಾವಿ ವೃತ್ತದÀಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಶಾಸಕ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು, ಮೆರವಣಿಗೆಯಲ್ಲಿ ಮಹಿಳಾ ಡೋಳ್ಳು ಕುಣಿತ, ಲಂಬಾಣಿ ನೃತ್ಯ ಗಮನ ಸೇಳೆದರೆ ಆಟೋ ಮತ್ತು ಎತ್ತಿನ ಚಕ್ಕಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರಗು ನೀಡಿದವು.

ಬೆಡ್ತಿ ನದಿ ಮತ್ತು ವರದಾ ನದಿ ಜೋಡಣೆಯಿಂದ ಹಾವೇರಿ ಜಿಲ್ಲೆಯಾದ್ಯಂತ ಹಸಿರು ಕ್ರಾಂತಿ ಮಾಡುವದು ನನ್ನ ಕನಸ್ಸಾಗಿದೆ, ಇದರಿಂದ ಹಾವೇರಿ ಜಿಲ್ಲೆ ಮಂಡ್ಯ ಮತ್ತು ಮೈಸುರು ಜಿಲ್ಲೆಗಳಂತಾಗೂತ್ತದೆ, ಕಾವೇರಿ ಹೊರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ನಮ್ಮ ಭಾಗದ ಜನತೆ ಉತ್ತರ ಕರ್ನಾಟಕದ ಮುಖ್ಯವಾದ ಮಹದಾಯಿ ನದಿ ಹೋರಾಟಕ್ಕೆ ಬೆಂಬಲ ನೀಡಿಲ್ಲವೆಂಬುದು ಬೇಸರ ತಂದಿದೆ, ಬೆಳಗಾವಿಯಲ್ಲಿ 21 ರಂದು ನಡೆಯುವ ಚಳಿಗಾಲದ ಅದಿವೇಶನದಲ್ಲಿ ಬೆಡ್ತಿ ನದಿ ಮತ್ತು ವರದಾ ನದಿ ಜೋಡಣೆಯನ್ನು ಮಾಡುವಂತೆ ಈ ಭಾಗದ ಶಾಸಕರು ಚರ್ಚಿಸಬೇಕು ಎಂದು ಮನವಿ ಮಾಡುತ್ತೆನೆ.
ಮಾಜಿ ಸಂಸದ
ಮಂಜುನಾಥ ಕುನ್ನೂರ

loading...

LEAVE A REPLY

Please enter your comment!
Please enter your name here