ಕಿನ್ನರ ಅಕ್ಕಿ ಉಗ್ರಾಣ ಸ್ಥಳಾಂತರಿಸಬೇಕು ಎಂದು ಪ್ರತಿಭಟನೆ

0
26
loading...

ಕನ್ನಡ್ಮಮ ಸುದ್ದಿ-ಕಾರವಾರ : ತಾಲೂಕಿನ ಕಿನ್ನರ ಗ್ರಾಪಂ ವ್ಯಾಪ್ತಿಯಲ್ಲಿರುವ ಅಕ್ಕಿ ಉಗ್ರಾಣವನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಹೆದ್ದಾರಿಯನ್ನು ತಡೆದು ಪ್ರತಿಭಟನೆಯನ್ನು ನಡೆಸಿದರು.
ಕಿನ್ನರ ರಸ್ತೆಯು ಏಕಪಥದ ರಸ್ತೆಯಾಗಿದ್ದು ಹೆಚ್ಚಿನ ತಿರುವುಗಳಿಂದ ಕೂಡಿದೆ. ಈ ರಸ್ತೆಯಲ್ಲಿ ಅತ್ಯಧಿಕ ಭಾರ ಹೊತ್ತ ಲಾರಿಗಳು ಅತ್ಯಂತ ವೇಗವಾಗಿ ಸಂಚರಿಸುವುದರಿಂದ ಇತರ ವಾಹನ ಸವಾರರು ಹಾಗೂ ಪಾದಾಚಾರಿಗಳು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಆದ್ದರಿಂದ ಈ ಭಾಗದಲ್ಲಿ ಉಗ್ರಾಣ ಬೇಡವೆ ಬೇಡ ಎಂದು ಕಿನ್ನರ ಗ್ರಾಮಸ್ಥರ ಪಟ್ಟು ಹಿಡಿದರು.
ಶಾಸಕ ಸತೀಶ ಸೈಲ್ ಸ್ಥಳದಲ್ಲಿದ್ದ ಉಗ್ರಾಣದ ವ್ಯವಸ್ಥೆಯನ್ನು ನೋಡಿಕೊಳ್ಳುವವರ ಜೊತೆ ಮಾತನಾಡಿ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಕಾರವಾರ ಕಿನ್ನರ ದ್ವಿಪಥ ರಸ್ತೆಯು ಮಂಜೂರಾಗಿದ್ದು ಅದು ಪೂರ್ಣವಾಗುವ ತನಕ ನಗರಕ್ಕೆ ಹತ್ತಿರವಾದ ಪ್ರದೇಶಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದರು. ಆಗ ನಮಗೆ ಅನುಮತಿ ಅಷ್ಟು ಬೇಗ ಸಿಗುವುದಿಲ್ಲ ಕಾನೂನಾತ್ಮಕವಾಗಿಯೇ ನಾವು ಸರಕು ಸಾಗಿಸುತ್ತೇದ್ದೇವೆ ಎಂದು ಉಗ್ರಾಣದ ವ್ಯವಸ್ಥೆ ನೋಡಿಕೊಳ್ಳುವವರು ಶಾಸಕರ ಗಮನಕ್ಕೆ ತಂದರು.
ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಶಾಸಕರು ಲಾರಿಯಲ್ಲಿ ಹೆಚ್ಚಿನ ಭಾರ ತರಲಾಗುತ್ತಿದೆ. ನಿಮ್ಮ ಎಲ್ಲ ಲಾರಿಗಳನ್ನು ಕಾರವಾರಕ್ಕೆ ಸಾಗಿಸಿ ವೇಬ್ರಿಡ್ಜ್ ನಲ್ಲಿ ತೂಕ ಮಾಡೋಣ ಎಂದರು. ಅದಕ್ಕೆ ಉಗ್ರಾಣದವರು ತಮ್ಮದೇ ವೇಬ್ರಿಡ್ಜ್ ಇದ್ದು ಇಲ್ಲೇ ಭಾರದ ಪರೀಕ್ಷೆ ಮಾಡಬೇಡಿ ಪರೀಕ್ಷೆ ಮಾಡೇಣ ಎಂದಾಗ, ಶಾಸಕರು ನಿಮ್ಮ ವೇಬ್ರಿಡ್ಜ್ ನಮಗೆ ಬೇಕಾಗಿಲ್ಲ. ಆದರೂ ಬೇಕಿದ್ದರೆ ಒಮ್ಮೆ ಪರೀಕ್ಷಿಸಿ ಮತ್ತೆ ಕಾರವಾರಕ್ಕೆ ಒಯ್ದು ಮತ್ತೇ ಪರೀಕ್ಷೆ ಮಆಡಿ ಎಷ್ಟು ವ್ಯತ್ಯಾಸ ಬರುತ್ತದೆ ನೋಡೋಣ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಚೈತ್ರಾ ಕೋಠಾರಕರ್, ಕೃಷ್ಣ ಮೆಹತಾ, ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕೋಠಾಕರ್ ಹಾಗೂ ನೂರಾರು ಗ್ರಾಮಸ್ಥರು ಇದ್ದರು.

loading...

LEAVE A REPLY

Please enter your comment!
Please enter your name here