ಕ್ರೀಡಾ ಚಟುವಟಿಕೆಯಿಂದ ಉತ್ತಮ ಆರೋಗ್ಯ ಸಿಗಲಿದೆ

0
28
loading...

ಕನ್ನಡಮ್ಮ ಸುದ್ದಿ-ಧಾರವಾಡ : ಮನುಷ್ಯನು ತನ್ನ ಆರೋಗ್ಯದ ಕಡೆಗೆ ಹೆಚ್ಚು ಒತ್ತು ಕೊಡಬೇಕಿದೆ. ಏಕೆಂದರೆ ಸದೃಢ ಆರೋಗ್ಯ ಹೊಂದಲು ಮನುಷ್ಯನಿಗೆ ಕ್ರೀಡೆಗಳು ಬಹಳಷ್ಟು ಸಹಕಾರಿಯಾಗಿವೆ ಎಂದು ನ್ಯಾಯವಾದಿ ಎಂ.ಎಂ. ಹಿರೇಮಠ ಅಭಿಪ್ರಾಯಪಟ್ಟರು.
ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಆಯೋಜಿಸಿದ “ರಾಜ್ಯೋತ್ಸವ ಕಪ್-2016” ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿ, ಸಂಘ-ಸಂಸ್ಥೆಗಳು ತಮ್ಮ ಕಾರ್ಯಕ್ಷಮತೆಯನ್ನೇ ಮರೆತಿರುವ ಈ ಕಾಲದಲ್ಲಿ ನಿರಂತರವಾಗಿ ಇಂತಹ ಉತ್ತಮವಾದ ಚಟುವಟಿಕೆಗಳನ್ನು ಫ್ರೆಂಡ್ಸ್ ಕ್ಲಬ್ ಮಾಡುತ್ತಿರುವದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಇಂದಿನ ಒತ್ತಡದ ದಿನಮಾನಗಳಲ್ಲಿ ಇಂತಹ ಆಟಗಳಲ್ಲಿ ಭಾಗವಹಿಸುತ್ತಿರುವದು ಅತ್ಯಂತ ಸಂತೋಷದ ವಿಷಯ ಎಂದರು.
ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಪಂದ್ಯಾವಳಿ ಉದ್ದೇಶಿಸಿ ಮಾತನಾಡಿದರು. ವೀರೇಶ ಬ್ಯಾಹಟ್ಟಿ, ವಜ್ರಕುಮಾರ ಹೆಬಸೂರು, ಆರ್.ಎಸ್.ಬಿ. ಸುಚಿಂತೋ, ವೀರೇಶ ಗೋಡಿಕಟ್ಟಿ, ಅಜೀತಕುಮಾರ ಬೋಗಾರ, ಪ್ರಶಾಂತ ಕ್ಷೀರಸಾಗರ, ಸತೀಶ ಸರ್ಜಾಪೂರ, ಸಯ್ಯದ ಬನ್ನಿಮಟ್ಟಿ, ದಶರಥ ರಜಪೂತ, ವೀರನಗೌಡ ಚನಬಸನಗೌಡರ, ಬಾಬು ಗೌಡರ, ಗಜಾನನ ಮುಶನ್ನವರ, ರವಿ ಶಿವಯ್ಯನಮಠ, ಮನೋಹರ ಗಂಗಣ್ಣವರ, ಸಿದ್ದು ಐರಣಿ, ಬಸವರಾಜ ಹುರಕಡ್ಲಿ, ಶಿವಾನಂದ ಕವಳಿ, ಗೋಪಾಲ, ಪುನಿತ, ಭಗವಾನ, ವೀರಯ್ಯ ಉಪಸ್ಥಿತರಿದ್ದರು. ಸಲೀಮ ಮಿಶ್ರೀಕೋಟಿ ಮಿರೂಪಿಸಿದರು. ಮುತ್ತು ಮಡಿವಾಳರ ವಂದಿಸಿದರು.

loading...

LEAVE A REPLY

Please enter your comment!
Please enter your name here