ದಾಂಡೇಲಿಯಲ್ಲಿ ಗಮನ ಸೆಳೆದ ಛಠ ಪೂಜೆ

0
39
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಆಚರಿಸಲ್ಪಡುವ ಛಠ ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಎಂದಿನಂತೆ ಈ ವರ್ಷವು ದಾಂಡೇಲಿಯಲ್ಲಿ ಸಂಭ್ರಮ ಸಡಗರದಿಂದ ಇತ್ತೀಚೆಗೆ ಆಚರಿಸಲಾಯಿತು.
ನಗರದ ಕಾಗದ ಕಾರ್ಖಾನೆಗೆ ಉದ್ಯೋಗವನ್ನರಸಿ ಬಂದು ಇಲ್ಲೆ ನೆಲೆನಿಂತಿರುವ ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದ ಸಮುದಾಯದವರು ಈ ಧಾರ್ಮಿಕ ಕಾರ್ಯಕ್ರಮವನ್ನು ಶೃದ್ಧ ಭಕ್ತಿಯಿಂದ ನಡೆಸಿದರು. ಎರಡು ದಿನಗಳ ಕಾಲ ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದ ಮಹಿಳೆಯರು ನಿರ್ಜಲ ಉಪವಾಸವಿದ್ದು ಈ ಪೂಜಾ ಕಾರ್ಯಕ್ರಮ ನಡೆಸುತ್ತಾರೆ. ಈ ಆಚರಣೆಯ ಸಂದರ್ಭದಲ್ಲಿ ಸೂರ್ಯಾಸ್ಥದ ಸಮಯದಲ್ಲಿ ಸೂರ್ಯದೇವನಿಗೆ ಅಗ್ರ್ಯ ಎರೆಯಲಾಗುತ್ತದೆ. ಮತ್ತೆ ಮುಂಜಾನೆ ಸೂರ್ಯೊದಯದಲ್ಲಿ ಅಗ್ರ್ಯ ಎರೆದು ಪೂಜೆ ಸಲ್ಲಿಸಲಾಗುತ್ತದೆ. ಈ ಧಾರ್ಮಿಕ ಕಾರ್ಯವು ಕಾಳಿ ನದಿಯ ದಂಡೆಯಲ್ಲಿ ನಡೆಯಿತು.
ಸಮುದಾಯದ ಶ್ರೇಯೋಭಿವೃದ್ಧಿಗಾಗಿ ನಡೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಅನೇಕ ಮಹಿಳೆಯರು ಸೇರಿದಂತೆ ಎಲ್ಲರೂ ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಹರಕೆ ಹೊತ್ತುಕೊಂಡು, ಹರಕೆ ಈಡೇರಿದ ನಂತರದಲ್ಲಿ ಹರಕೆ ಒಪ್ಪಿಸುವುದು ಈ ಪೂಜಾ ಕಾರ್ಯಕ್ರಮದ ವಾಡಿಕೆ.
ಈ ಪೂಜಾ ಕಾರ್ಯಕ್ರಮದ ಯಶಸ್ವಿ ಸಂಘಟನೆಗಾಗಿ ಪೂಜಾ ಸಮಿತಿಯನ್ನು ರಚಿಸಲಾಗಿದ್ದು, ಛಠ ಪೂಜಾ ಸಮಿತಿಯ ಅಧ್ಯಕ್ಷರಾಗಿ ನಗರದ ಉತ್ಸಾಹಿ ಯುವ ಮುಖಂಡ ರವೀಂದ್ರ ಶಾಹ ಕಾರ್ಯನಿರ್ವಹಿಸಿದರೇ, ಸಮಿತಿಯ ಪ್ರಮುಖರುಗಳಾಗಿ ಶೈಲೇಂದ್ರ ಸಿಂಗ್, ವೆಂಕಟೇಶ ಪಾಂಡೆ, ಕಾಳಿಂದ್ರ ಗುಪ್ತಾ, ಹರ್ಕಿಮ್ ಸಿಂಗ್ ಮೊದಲಾದವರು ಛಠ ಪೂಜಾ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

loading...

LEAVE A REPLY

Please enter your comment!
Please enter your name here