ಪಟ್ಟಣ ಪಂಚಾಯತಿಯಲ್ಲಿ ಟಿಪ್ಪು ಜಯಂತಿ ಆಚರಣೆ: ಬಿಜೆಪಿಯಿಂದ ಪ್ರತಿಭಟನೆ

0
23
loading...

ಕನ್ನಡಮ್ಮ ಸುದ್ದಿ-ಹೊನ್ನಾವರ : ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆಯಿತು.
ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಪ್ರೊ.ಎಂ.ಆರ್.ನಾಯಕ ಮಾತನಾಡಿ, `ಬ್ರಿಟೀಷರ ದಾಸ್ಯದಲ್ಲಿ ಬದುಕುವುದಕ್ಕಿಂತ ಹುಲಿಯಂತೆ ಹೋರಾಡಿ ಸಾಯುವುದೇ ವಾಸಿ ಎಂದು ಬದುಕಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದವನೇ ವೀರ ಟಿಪ್ಪು ಸುಲ್ತಾನ್. ಈತನ ಸ್ವಾಭಿಮಾನದ ಸಂಕೇತವಾಗಿ ಇತಿಹಾಸದಲ್ಲಿ ದಾಖಲಾಗಿದ್ದಾನೆ. ಟಿಪ್ಪುವಿನ ವೀರತೆಯ ಜೀವನ, ಸ್ವಾಭಿಮಾನದ ಬದುಕÉುಲ್ಲರಿಗೂ ಮಾದರಿಯಾಗಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ವಿ.ಆರ್.ಗೌಡ ಮಾತನಾಡಿ, `ನಮ್ಮ ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಮಹತ್ವವಾದ ಕೊಡುಗೆಯನ್ನು ನೀಡಿದ ಮಹಾಶಯರ ಜೀವನ, ಆದರ್ಶಗಳನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅವರ ಜಯಂತ್ಯುತ್ಸವವನ್ನು ಸರ್ಕಾರ ಆಚರಿಸುತ್ತಿದೆ. ಟಿಪ್ಪುವಿನ ಸಾಧನೆಯನ್ನು ತಿಳಿದುಕೊಳ್ಳುವುದು ಈ ದಿನದ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ್ ಮಾತನಾಡಿದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ ಕುರಿಯವರ್, ಪ.ಪಂ.ಸದಸ್ಯರಾದ ಸುರೇಶ ಮೇಸ್ತ, ಇರ್ಫಾನ್ ಶೇಖ್, ಪ.ಪಂ.ಮುಖ್ಯಾಧಿಕಾರಿ ಅರುಣ ನಾಯ್ಕ, ಹುಸೇನ್ ಖಾದ್ರಿ, ಇಸ್ಮಾಯಿಲ್ ತಲಖಣಿ ಇತರರು ಉಪಸ್ಥಿತರಿದ್ದರು. ಸುಧೀಶ ನಾಯ್ಕ ನಿರ್ವಹಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
————————
ಪ್ರತಿಭಟನೆ:-
ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ಮುಂಖಂಡ ಎಂ.ಜಿ.ನಾಯ್ಕ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಆವಾರದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉಗ್ರಸ್ವರೂಪ ಪಡೆಯುವುದನ್ನು ಕಂಡು ಹೊನ್ನಾವರ ಸಿಪಿಐ ಕುಮಾರಸ್ವಾಮಿ, ಪಿಎಸ್‍ಐ ಆನಂದಮೂರ್ತಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಪ್ರತಿಭಟನಾಕಾರರನ್ನು ತಡೆದು ವಾಹನದಲ್ಲಿ ತುಂಬಿ ನಂತರ ಬಿಡುಗಡೆಗೊಳಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ನಾಯ್ಕ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ರಾಯಲಕೇರಿ, ಉಮೇಶ ನಾಯ್ಕ, ಲೋಕೇಶ ಮೇಸ್ತ ಇತರರು ಇದ್ದರು.

loading...

LEAVE A REPLY

Please enter your comment!
Please enter your name here