ಬಂಗಾರದ ಆಭರಣಗಳನ್ನು ಕಸಿದುಕೊಂಡು ಪರಾರಿ

0
19
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ : ಅಪರಿಚಿತ ಆರೋಪಿಗಳಿಬ್ಬರು ಕಾಡಿನ ದಾರಿಯಲ್ಲಿ ಸಾಗುತ್ತಿದ್ದ ಮಹಿಳೆಯೊಬ್ಬರ ಬಂಗಾರದ ಸರಗಳನ್ನು ಕಸಿದು ಅಪಹರಿಸಿದ ಘಟನೆ ಗುರುವಾರ ಮದ್ಯಾಹ್ನ ತಾಲೂಕಿನ ಮಂಚೀಕೇರಿಯ ಕುಂಬ್ರಿ ಗುಡ್ಡೆಯ ಬಳಿ ಸಂಭವಿಸಿದೆ . ತಾಲೂಕಿನ ಮಂಚಿಕೇರಿಯ ಶಂಕರಗದ್ದೆಯ ಭಾಗೀರಥಿ ಲಕ್ಷ್ಮೀನಾರಾಯಣ ಹೆಗಡೆ ಎನ್ನುವವರು ತನ್ನ ಗಂಡ ಲಕ್ಷ್ಮೀನಾರಾಯಣ ಹೆಗಡೆಯವರ ಜೊತೆ ಟಿ ವಿ ಎಸ್ ಬೈಕ ಮೇಲೆ ಕುಂಬ್ರಿ ಗುಡ್ಡೆಯ ಬಳಿ ಸಾಗುತ್ತಿದ್ದಾಗ ಇಬ್ಬರು ಅಪರಿಚಿತರು ಬೈಕ ಮೇಲೆ ಬಂದು ಭಾಗೀರಥಿ ಹೆಗಡೆಯವರು ಸಾಗುತ್ತಿದ್ದ ಬೈಕನ್ನು ನಿಲ್ಲಿಸಿ ನಿನ್ನ ಆಭರಣಗಳನ್ನು ತೆಗೆದುಕೊಡು ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಬೆದರಿಸಿ, ತಕ್ಷಣ ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ ಸುಮಾರು ಅಂದಾಜು 1.20 ಲಕ್ಷ ರೂ ಬೆಲೆಯ 32 ಗ್ರಾಂ ತೂಕದ ಬಂಗಾರದ ಚಪಲಾಹಾರ ಮತ್ತು 10 ಗ್ರಾಂ ತೂಕದ ಮಾಂಗಲ್ಯದ ಸರವನ್ನು ಅಪಹರಿಸಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ ಪೋಲಿಸ ಉಪ ನಿರೀಕ್ಷಕ ಎ ವಾಯ ಕಾಂಬಳೆ ಪ್ರಕರಣ ದಾಖಲಿಸಿಕೊಂಡಿದ್ದು ಸ್ಥಳಕ್ಕೆ ಪೋಲಿಸ ನಿರೀಕ್ಷಕ ವಿಜಯ ಬಿರಾದಾರ ಭೇಟಿ ನೀಡಿದ್ದಾರೆ.

loading...

LEAVE A REPLY

Please enter your comment!
Please enter your name here