ಬರಪೀಡಿತ ಪ್ರದೇಶಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹ

0
16
loading...

ಕನ್ನಡಮ್ಮ ಸುದ್ದಿ-ಧಾರವಾಡ : ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದರೂ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಕೇವಲ ಮಾಧ್ಯಮಗಳಲ್ಲಿ ಮಾತ್ರ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿರುವ ರಾಜ್ಯ ಸರಕಾರ ರೈತರನ್ನು ಕಡೆಗಣಿಸಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೊರ್ಚಾ ನೇತೃತ್ವದಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.
ಪ್ರತಿಯೊಂದು ಹಳ್ಳಿಗಳಲ್ಲಿಯೂ ದನ-ಕರುಗಳಿಗಳಿಗೆ ಆಹಾರ ಕೊರತೆ ಉಂಟಾಗಿರುವದರಿಂದ ಗೋಶಾಲೆಯನ್ನು ಕೂಡಲೇ ತೆರೆಯಬೇಕು. ಇಲ್ಲದೇ ಹೋದಲ್ಲಿ ದನಕರುಗಳನ್ನು ಬೀದಿಗೆ ಬಿಡುವ ಅಥವಾ ಕಟುಕರಿಗೆ ಮಾರುವ ಪರಿಸ್ಥಿತಿ ಎದುರಾಗಿದ್ದು, ಕೂಡಲೇ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿತು.
ಬರಗಾಲದ ಭವಣೆಯಿಂದ ತತ್ತರಿಸಿರುವ ರೈತ ಸಮುದಾಯ ನಿತ್ರಾಣವಾಗಿದೆ. ಹಿಂಗಾರು ಬಿತ್ತನೆ ಗಣನೀಯವಾಗಿ ಇಳಿಮುಖವಾಗಿದ್ದು, ಬಿತ್ತನೆ ಮಾಡಿದ ರೈತರು ಕೂಡಾ ಮಳೆಯಾಗದೇ ದಿಕ್ಕುತೋಚದಂತಾಗಿರುವ ಈ ಸಂದರ್ಭದಲ್ಲಿ, ಕೆಲವೇ ಕೆಲವು ನೀರಾವರಿ ಆಶ್ರಿತ (ಬೋರವೆಲ್) ರೈತರು ಸರಿಯಾಗಿ ವಿದ್ಯುತ್ ಪೂರೈಕೆಯಾಗದೇ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಆ ಕಾರಣಕ್ಕಾಗಿ ಕೂಡಲೇ 12 ತಾಸು ತ್ರೀಫೇಸ್ ವಿದ್ಯುತ್ತನ್ನು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿತು.
ಕೇಂದ್ರ ಸರ್ಕಾರದಿಂದ 1540 ಕೋಟಿ ರೂಗಳು ಬಿಡುಗಡೆಯಾಗಿದ್ದು ಮೀನಾಮೇಷÀ ಎಣಿಸದೆ ಕೂಡಲೇ ಆ ಹಣವನ್ನು ಬರಪೀಡಿತ ರೈತರಿಗೆ ವಿತರಣೆ ಮಾಡಬೇಕು. ಕೂಡಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ದನ-ಕರುಗಳೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ. ಈ ಸಂದರ್ಭದಲ್ಲಿ ರೈತ ಮೊರ್ಚಾ ಜಿಲ್ಲಾ ಅಧ್ಯಕ್ಷ ಅರವಿಂದ ಏಗನಗೌಡರ, ಈಶ್ವರಗೌಡ ಪಾಟೀಲ, ನಿಂಗನಗೌಡ ಪಾಟೀಲ, ಮಹದೇವಪ್ಪ ಯಡವಣ್ಣವರ, ಈಶ್ವರಪ್ಪ ಮಾಳಣ್ಣವರ, ಬಸವರಾಜ ಬಾಳಗಿ, ಮಂಜುನಾಥ ಬೋಸಲೆ, ಕೃಷ್ಣಾ ಹವಾಲ್ದಾರ, ಶರಣು ಅಂಗಡಿ, ಶ್ರೀನಿವಾಸ ಕೋಟ್ಯಾನ, ಶಾಂತಕ್ಕಾ ಪಾಟೀಲ, ಜಯಶ್ರೀ ಮೋಟೆ, ಅಮೀತ ಪಾಟೀಲ, ರಾಕೇಶ ನಾಝರೇ, ಅರ್ಜುನ ಕದಂ, ಬಸಯ್ಯ ಹಿರೇಮಠ, ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here