ಬೆಟಗೇರಿ ಗ್ರಾಮದಲ್ಲಿ ಮಂಗಗಳ ಹಾವಳಿಗೆ ಕಡಿವಾಣ ಯಾವಾಗ?

0
27
loading...

ನಾಗರಾಜ ತಹಸೀಲ್ದಾರ
ಗೋಕಾಕ: ತಾಲೂಕಿನ ಬೆಟಗೇರಿ ಗ್ರಾಮದ ಬಸ್ಸ ನಿಲ್ದಾಣ, ಡಾ|| ಅಂಬೆಡ್ಕರ್ ವೃತ್ತದ ಅಕ್ಕ-ಪಕ್ಕದಲ್ಲಿ, ಗ್ರಾಮದ ಪ್ರಮುಖ ಮನೆಗಳ ಮೇಲ್ಛಾವಣಿಯ ಮೇಲೆ ಮಂಗಗಳ ಹಾವಳಿ ಹೆಚ್ಚಾಗಿದ್ದು ಇಲ್ಲಿಯ ನಾಗರಿಕರಲ್ಲಿ ದಿನದಿಂದ ದಿನಕ್ಕೆ ಆತಂಕ ಎದುರಾಗಿದೆ.
ಬೆಟಗೇರಿ ಗ್ರಾಮ, ಸುತ್ತಲಿನ ಹತ್ತೂರಿನ ಹಳ್ಳಿಗಳ ನಾಗರಿಕರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯ ಕೇಂದ್ರ ಸ್ಥಳವಾಗಿದೆ. ವಿವಿಧ ಜಿಲ್ಲೆ, ವಿವಿಧ ತಾಲೂಕಿನ ನಗರ ಪಟ್ಟಣ ಸೇರಿದಂತೆ ಹಲವು ಪ್ರಮುಖ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳು ಈ ಗ್ರಾಮದಿಂದ ಕವಲೊಡೆದಿವೆ. ಹೀಗಾಗಿ ಇಲ್ಲಿ ವಾಹನ, ಜನದಟ್ಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಗ್ರಾಮಕ್ಕೆ ನಿತ್ಯ ಸಂಚರಿಸುವ ವಾಹನ ಸವಾರರು ಮಂಗಗಳ ಅಡ್ಡಾ ದಿಡ್ಡಿ ಒಡಾಟಕ್ಕೆ ಹೆದರಿ ನಿಧಾನ ಎಚ್ಚರದಿಂದ ವಾಹನ ಸವಾರಿ ಮಾಡಬೇಕಾದ ದುಸ್ಥಿತಿ ಎದುರಾಗಿದೆ.
ಈಗಾಗಲೇ ಮಂಗಗಳ ರಸ್ತೆಯ ಮೇಲೆ ಅಡ್ಡಾ ದಿಡ್ಡಿ ಒಡಾಟಕ್ಕೆ ದ್ವಿಚಕ್ರ ವಾಹನ ಸವಾರರು ಬಲಿಯಾಗಿ ತಮ್ಮ ಬಾಯಲ್ಲಿರುವ ಹಲ್ಲು ಕಳೆದುಕೊಂಡು, ತೆಲೆ ಒಡೆದುಕೊಂಡು, ಮೈಕೈ ಗಾಯಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ಸಾಕಷ್ಟು ತಾಜಾ ಉದಾಹರಣೆಗಳಿವೆ. ಒಂದೆಡೆ ದ್ವಿಚಕ್ರ ವಾಹನ ಮಂಗಗಳಿಂದ ಅಪಘಾತಕ್ಕಿಡಾಗಿ ವಾಹನ ಸವಾರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೆ. ನೋಡುಗರಿಗೆ ಈ ಘಟನೆ ಗ್ರಾಮದಲ್ಲಿ ಮೋಜು, ಮನರಂಜನೆ ನೀಡುವಂತಾಗಿದೆ.
ಬೆಟಗೇರಿ ಗ್ರಾಮದಲ್ಲಿ ಶೇ50% ಹಂಚಿನ, ಸಿಮೆಂಟ್ ಪತ್ರಾಸ್ ಮೇಲ್ಛಾವಣಿ ಹೊಂದಿದ ಮನೆಗಳಿವೆ. ಅಷ್ಟೆಯಲ್ಲದೆ ಈ ಮನೆಗಳ ಮೇಲ್ಛಾವಣಿಯ ಮೇಲೆ ನೂರಾರು ದೂರ ದರ್ಶನ ಸಂಪರ್ಕ ಕಲ್ಪಿಸುವ ಸಾಧನ ಉಪಕರಣಗಳನ್ನು (ಎರಟೆಲ್-ಡಿಶ್-ಸನ್‍ಡೈರೆಕ್ಟೆ) ಅಳವಡಿಸಲಾಗಿದೆ. ಹೀಗಾಗಿ ಮಂಗಗಳು ಮೇಲ್ಛಾಣಿಯ ಮೇಲೆ ಒಂದಕ್ಕೊಂದು ಆ ಕಡೆಯಿಂದ ಈ ಕಡೆ ಜಿಗಿದು ಉಪಕರಣಗಳು ಹಾಳು, ಹಂಚು, ಪತ್ರಾಸು ಒಡೆದು ಅಪಾರ ಹಾನಿ ಮಾಡುತ್ತಿರುವ ಈ ಮಂಗಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು. ಸ್ಥಳೀಯ ಗ್ರಾಮಸ್ಥರು ಆತಂಕ ಎದುರಿಸುವಂತಾಗಿದೆ.
ಸಂಬಂಧಪಟ್ಟ ಇಲಾಖಾ ಮೇಲಾಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯತದವರು ಈ ಮಂಗಗಳ ಉಪಟಳದ ಹಾವಳಿಗೆ ಕಡಿವಾಣ ಹಾಕಲು ಶೀಘ್ರಕ್ರಮ ಕೈಗೊಳ್ಳಬೆಕೆಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here