ಭಾವೈಕ್ಯತೆ ಮೆರೆದ ಸಂತ ಶ್ರೇಷ್ಠ ಕನಕದಾಸರ ಜಯಂತಿ

0
30
loading...

ಕನ್ನಡಮ್ಮ ಸುದ್ದಿ-ಯಕ್ಕುಂಡಿ: ಸವದತ್ತಿ ತಾಲೂಕಿನ ದೂಪದಾಳ ಗ್ರಾಮದಲ್ಲಿ ಸಂತ ಶ್ರೇಷ್ಠ ಕನಕದಾಸರ 529 ನೇ ಜಯಂತಿಯನ್ನು ಬೀರದೇವರ ದೇವಸ್ಥಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಗ್ರಾಮ ಪಂಚಾಯತ ಸದಸ್ಯರಾದ ವಿಜಯಕಾಂತ ದೇಸಾಯಿಯವರು ಮಾತನಾಡಿ, ದಾಸ ಸಾಹಿತ್ಯದಲ್ಲಿಯೆ ಶ್ರೇಷ್ಠತೆಯನ್ನು ಪಡೆದಿರುವ ಕನಕದಾಸರ ಆಚಾರ ನಡೆ ನುಡಿಗಳು ಇಂದಿಗೂ ಪ್ರಸ್ತುತವಾಗಿದ್ದು, ಸಾಮಾಜಿಕವಾಗಿ ಮಾನವತೆಯನ್ನು ಎತ್ತಿ ತೋರಿಸದ ಮಹಾನ್‌ ಮಾನವತಾವಾದಿಗಳಾಗಿದ್ದರು ಎಂದು ಹೇಳಿದರು.
ದಾಸ ಸಾಹಿತ್ಯ ಮತ್ತು ಶರಣ ಸಾಹಿತ್ಯದಿಂದ ನಾಡಿನ ಸಾಹಿತ್ಯ ಭಂಡಾರ ಶ್ರೀಮಂತವಾಗಿದೆ ಮತ್ತು ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿ ಜನ ಜಾಗ್ರತಿ ಮೂಡಿಸಿದ ಮಹಾನ್‌ ವ್ಯಕ್ತಿಗಳಾಗಿದ್ದರು ಎಂದು ಇಸ್ಮಾಯಿಲ್‌ ಮುಜಾವರ ಅವರು ತಿಳಿಸದರು.
ಈ ಸಂದರ್ಭದಲ್ಲಿ ಹಿರಿಯರಾದ ನಾಗಪ್ಪ ಹಿಟ್ಟಣಗಿ, ಫಕೀರಪ್ಪ ಹಿಟ್ಟಣಗಿ, ಬಸಪ್ಪ ಸಂಗೊಳ್ಳಿ, ಶಿವಾನಂದ ದೂಡವಾಡ, ಧರೆಪ್ಪ ಶಿಂದೋಗಿ, ಸೋಮನಿಂಗಪ್ಪ ಕೋಟಬಾಗಿ, ಬಸವರಾಜ ಹಿಟ್ಟಣಗಿ, ನಾಗರಾಜ ಮೇಟಿ, ಯಂಕನಗೌಡ ಪಾಟೀಲ, ಪುಂಡಲೀಕ ಕುರಿ, ನಾಗಪ್ಪ ಕುರಿ, ಮಡಿವಾಳಿ ಕುರಿ, ಇಮಾಮಹುಸೇನ ದಿನ್ನಿಮನಿ, ಪ್ರಕಾಶ ರೂಢನ್ನವರ, ಧರೆಪ್ಪ ಹಿಟ್ಟಣಗಿ, ಮತ್ತು ಹಾಲುಮತದ ಎಲ್ಲ ಸಮಾಜ ಭಾಂದವರು ಮತ್ತು ಗ್ರಾಮಸ್ಥರು, ಯುವಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here