ಮಕ್ಕಳು ಸುರಲೋಕದಲ್ಲಿ ಅರಳುವ ಹೂಗಳು: ಪಿಎಸ್‌ಐ ಶ್ರೀಶೈಲ

0
18
loading...

ಹಾರೂಗೇರಿ: ಏಳೆಯ ಮಕ್ಕಳ ತಲೆ ಖಾಲಿ ಮಡಿಕೆ ಇದ್ದ ಹಾಗೆ ಅದರಲ್ಲಿ ನಾವು ಯಾವ ರೀತಿಯ ಜ್ಞಾನವನ್ನು ಬಿತ್ತುತ್ತೆವೋ ಅದರಂತೆ ಫಲ ಬರುತ್ತದೆ, ಶಾಲೆಯೆಂಬುದು ಪ್ರತಿಯೊಂದು ಮಗುವಿನ ಭವಿಷ್ಯ ರೂಪಿಸುವ ಜ್ಞಾನ ದೇಗುಲವಿದ್ಧಂತೆ, ಮಕ್ಕಳು ಸುರಲೋಕದಲ್ಲಿ ಅರುಳುವ ಸುಂದರವಾದ ಹೂವುಗಳಿದ್ಧಂತೆ ಎಂದು ಪಿಎಸ್‌ಐ ಶ್ರೀಶೈಲ ಬ್ಯಾಕೋಡ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳು ಇಲ್ಲದ ಮನೆ ಮನೆನೇ ಅಲ್ಲ, ಪೂಜಾರಿ ಇಲ್ಲದ ಗುಡಿ ದೇವಾಲಯವೇ ಅಲ್ಲ ಶಿಕ್ಷಕರು ಇಲ್ಲದ ಶಾಲೆ ಜ್ಞಾನ ದೇಗುಲವೇ ಅಲ್ಲ ಎಂಬ ನಾಣ್ಮುಡಿಯಂತೆ ಜಗತ್ತಿನಲ್ಲಿಯೇ ಪ್ರತಿಯೊಬ್ಬರಿಗೂ ಶಿಕ್ಞಣಮೃತವೆಂಬುದು ಸಂಜೀವಿನಿ ಇದ್ಧಂತೆ, ಪ್ರತಿಯೊಬ್ಬರು ಜ್ಞಾನ ದೇಗುಲದಲ್ಲಿನ ಅಕ್ಷರಾಮೃತವನ್ನು ಹೀರಿದರೆ ಭವ್ಯ ಭಾರತ ಬೆಳಗುವ ಒಳ್ಳೆಯ ಸತ್ಫ್ರಜೆಗಳಾಗಬಹುದು, ಈ ಸಂಧರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಜಿ.ವಿ.ಹಣ್ಣಿಕೇರಿ ಸದಸ್ಯರಾದ ಗಿರೀಶ ದರೂರ, ಮಹಾವೀರ ಬೋರನ್ನವರ, ನಿರ್ಮಲಾ ಕುರಿ, ಎಸ್‌. ಯು ನಧಾಪ. ಆರ್‌. ಎಸ್‌. ಹಾಲಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಎಸ್‌ಐ ಬಿ.ಎಸ್‌. ಬಿಸಲನಾಯಕ ಸ್ವಾಗತಿಸಿದರು. ಎಸ್‌.ಆರ್‌. ಮಠಪತಿ ನಿರೂಪಿಸಿದರು ಡಿ. ಎಮ್‌. ಮಠಪತಿ ವಂದಿಸಿದರು.

loading...

LEAVE A REPLY

Please enter your comment!
Please enter your name here