ಮಾಜಿ ಪ್ರಧಾನಿ ನೆಹರು ಜಯಂತಿ ಆಚರಣೆ

0
40
loading...

ಕನ್ನಡಮ್ಮ ಸುದ್ದಿ-ಗೋಕಾಕ: ಇಂದಿನ ಯುಗದಲ್ಲಿ ಸಹಕಾರಿ ಸಂಘ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕಗಳ ಜೋತೆ ಪೈಪೊಟಿ ಮಾಡುವ ಸಂಧರ್ಭ ಬಂದೊದಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವೇಶ್ವರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮಾಳೇದ ಹೇಳಿದರು.

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವೇಶ್ವರ ವಿವಿಧ ಉದ್ದೇಶಗಳ ಸಹಕಾರಿ ಸಂಘದಲ್ಲಿ ನಡೆದ ಸಹಕಾರಿ ಸಪ್ತಾಹ ಹಾಗೂ ಮಾಜಿ ಪ್ರಧಾನಿ ಜವಹಾರಲಾಲ್‌ ನೆಹರು ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ವಲಯದ ಜನಸಾಮಾನ್ಯರಿಗೆ ಸಹಕಾರಿ ಸಂಘ ಸಂಸ್ಥೆಗಳು ಸಂಜೀವಿನಿಯಾಗಿವೆ ಎಂದರು.

ಸ್ಥಳೀಯ ವೇದ ಮೂರ್ತಿ ಸಂಗಯ್ಯಾ ಹಿರೇಮಠ ಕಾರ್ಯಕ್ರಮ ಸಾನಿಧ್ಯ ವಹಿಸಿ, ಮಾಜಿ ಪ್ರಧಾನಿ ಜವಹಾರಲಾಲ್‌ ನೆಹರು ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಈರಣ್ಣ ಸಿದ್ನಾಳ, ಶಿವನಪ್ಪ ಕಂಬಿ. ಅಶೋಕ ದೇಯನ್ನವರ, ಈಶ್ವರ ಬಡಿಗೇರ, ಕಲ್ಲಪ್ಪ ಹುಬ್ಬಳಿ,್ಳ ಅಪ್ಪಯ್ಯಾ ಸಿದ್ನಾಳ, ಶಿವಾನಂದ ಮೇಳೆನ್ನವರ, ವೀರಭದ್ರ ದಂಡಿನ, ಗುಳಪ್ಪ ಪಣದಿ, ಬಸವರಾಜ ದಂಡಿನ, ಸಂಘದ ಆಡಳಿತ ಮಂಡಳಿ ಸದಸ್ಯರು, ಗ್ರಾಹಕರು ಇತರರು ಇದ್ದರು.

loading...

LEAVE A REPLY

Please enter your comment!
Please enter your name here