ರಸ್ತೆಗೆ ಅಡ್ಡವಾಗಿ ಕಟ್ಟಿದ ಸಿಡಿಯಿಂದ ತೀವ್ರ ಸಮಸ್ಯೆ: ನಗರಸಭೆಯ ನಿರ್ಲಕ್ಷ್ಯ

0
23
loading...

ಕನ್ನಡಮ್ಮ ಸುದ್ದಿ-ಶಿರಸಿ : ನಗರದ ಟಿ.ಎಸ್.ಎಸ್. ರಸ್ತೆಯ ಗದ್ದೆಬೈಲಿನ ಬಳಿ ಅನವಶ್ಯಕವಾಗಿ ರಸ್ತೆಗೆ ಅಡ್ಡವಾಗಿ ಕಟ್ಟಿದ ಸಿಡಿಯಿಂದ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಸ್ಥಳಿಕರು ಸಾಕಷ್ಟು ಬಾರಿ ತಿಳಿಸಿದರೂ ನಗರಸಭೆ ಸದಸ್ಯರು ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
ನಗರದ 11ನೇ ವಾರ್ಡ್‍ನ ಗದ್ದೆಬೈಲ್ ಬಳಿ ರಸ್ತೆಗೆ ಅಡ್ಡಲಾಗಿ ಸಿಡಿಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಇದರಿಂದಾಗಿ ಸರಾಗವಾಗಿ ಹರಿದು ಹೋಗುತ್ತಿದ್ದ ನೀರು ನಿಲ್ಲುತ್ತಿದೆ. ಈ ಭಾಗದಲ್ಲಿ 60ರಷ್ಟು ಮನೆಗಳಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಈ ಬಗ್ಗೆ ವಾರ್ಡ್ ಸದಸ್ಯರಲ್ಲಿ ಹೇಳಿದರೆ ಸರಿಯಾದ ಸ್ಪಂದನೆಯಿಲ್ಲ. ಅವಶ್ಯಕತೆ ಇಲ್ಲದಿದ್ದರೂ ತಮ್ಮ ಸ್ವಾರ್ಥಕ್ಕಾಗಿ ಈ ಕೆಲಸ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ನಗರಸಭೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಇತ್ತೀಚೆಗೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಮಂಗಳವಾರ ನಗರಸಭಾ ಅಧ್ಯಕ್ಷ ಪ್ರದೀಪ ಶೆಟ್ಟಿ ಇವರ ಕಚೇರಿಗೆ ತೆರಳಿ ಅನಧಿಕೃತವಾಗಿ ನಿರ್ಮಿಸಲು ಹೊರಟಿರುವ ಸಿಡಿಯಿಂದಾಗುವ ಸಮಸ್ಯೆಗಳ ಕುರಿತು ಗಮನ ಸೆಳೆದರಲ್ಲದೇ ಕೂಡಲೇ ಇದನ್ನು ಬಂದ್ ಮಾಡಿಸುವಂತೆ ಆಗ್ರಹಿಸಿದರು. ಸ್ಥಳೀಯರ ಸಮಸ್ಯೆ ಆಲಿಸಿದ ಪ್ರದೀಪ ಶೆಟ್ಟಿ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ಶೇಖರ ಪೂಜಾರಿ, ಸ್ಥಳೀಯರಾದ ಸಚಿನ್ ಶೇಟ್ಟಿ, ಧಾಕಪ್ಪ ಮಡಿವಾಳ, ಆಗ್ನೇಲ್ ಫರ್ನಾಂಡೀಸ್, ಮೋಹನ ಮಡಿವಾಳ, ಭಾಸ್ಕರ ಮಡಿವಾಳ, ತಾರಾ ಮಡಿವಾಳ, ಆನಂದ ಸಾಲೇರ್, ಶಿಲ್ಪಾ ಶಾನಭಾಗ, ಧನಂಜಯ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here