ವೈದ್ಯರ ನಿರ್ಲಕ್ಷದಿಂದ ವ್ಯಕ್ತಿ ಸಾವು: ಪ್ರತಿಭಟನೆ

0
24
loading...

ಕನ್ನಡಮ್ಮ ಸುದ್ದಿ-ಶಿರಸಿ : ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವ ವೈದ್ಯರ ನಿರ್ಲಕ್ಷ್ಯತನದಿಂದ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟಿಸಿದ ಘಟನೆ ಗುರುವಾರ ಶಿರಸಿಯಲ್ಲಿ ನಡೆದಿದೆ.
ತಾಲೂಕಿನ ಗೋಣೂರು-ಬೊಮ್ನಳ್ಳಿ ಮಂಜುನಾಥ ಜೋಗಿ (26) ಮೃತ ದುರ್ದೈವಿ. ಅಪಘಾತವಾಗಿ ಕಾಲಿಗೆ ಪೆಟ್ಟಾಗಿದ್ದ ಜೋಗಿ 21ರಂದು ಇಲ್ಲಿನ ಶ್ರೀಪಾದ ಹೆಗಡೆ ಕಡವೆ (ಟಿ.ಎಸ್.ಎಸ್.) ಆಸ್ಪತ್ರೆಗೆ ದಾಖಲಿಸಲಾಗಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಒಂದು ದಿನ ಬಿಟ್ಟು ನ.23ರಂದು ಆಪರೇಶನ್ ಮಾಡಲಾಗತ್ತು. ಅಂದು ಮಧ್ಯಾಹ್ನ 4 ಗಂಟೆಯವರೆಗೆ ಆರಾಮಾಗಿದ್ದ ಜೋಗಿ ಪರಿಸ್ಥಿತಿ ಸಂಜೆ 6 ಗಂಟೆ ವೇಳೆಗೆ ಸೀರಿಯಸ್ ಆಗಿತ್ತು. ತಕ್ಷಣ ವೈದ್ಯರಿಗೆ ತಿಳಿಸಿದರು ಏನೂ ಪ್ರಯೋಜನವಾಗಲಿಲ್ಲ. ಚಿಕ್ಕ ಗಾಯವನ್ನು ಗುಣಮುಖಗೊಳಿಸುವಲ್ಲಿ ತಪ್ಪೆಸಗಿ ವ್ಯಕ್ತಿಯೋರ್ವರ ಸಾವಿಗೆ ಟಿಎಸ್ ಎಸ್ ಆಸ್ಪತ್ರೆ ವೈದ್ಯರು ಹಾಗೂ ನರ್ಸ್‍ಗಳು ಕಾರಣರಾಗಿದ್ದಾರೆ. ಹಾಗಾಗಿ ಸೂಕ್ತ ಪರಿಹಾರ ಕೊಡಬೇಕು ಎಂದು ಮೃತ ಜೋಗಿ ಕುಟುಂಬಸ್ಥರು ಹಾಗೂ ಸಂಬಂಧಿಗಳು ಈ ವೇಳೆ ಒತ್ತಾಯಿಸಿದರು.
ನೋವು ನಿವಾರಕ ಔಷಧ ಕೊಟ್ಟಿದೇನೆ ಎಂದು ನರ್ಸ್‍ಗಳು ಹೇಳಿದರು. ಅದಾದ ನಂತರ ಆದರೆ ಎಚ್ಚರವಾಗದೆ ಸಾವನ್ನಪ್ಪದ್ದಾನೆ. ಸೀರಿಯಸ್ ಇದೆ ಎಂದು ಹೇಳಿದರೂ ಆಪರೇಶನ್ ಆದ ನಂತರ ವೈದ್ಯರು ಒಮ್ಮೆಯೂ ಬಂದು ಪರೀಕ್ಷಿಸಿಲ್ಲ ಎಂದು ಆರೋಪಿಸಿದರು.
2 ಚಿಕ್ಕ ಮಕ್ಕಳು, ಅನಕ್ಷರಸ್ಥ ಹೆಂಡತಿ, ಪಾರ್ಶವಾಯುಪೀಡಿತ ತಂದೆ, ವಯಸ್ಸಾದ ತಾಯಿಯನ್ನು ಇವನೊಬ್ಬನೇ ಸಾಕುವ ಪರಿಸ್ಥಿತಿ ಇತ್ತು. ಆದರೆ ಈಗ ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಘಟನೆ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಸಂಬಂಧಿ ಶ್ರೀಕಾಂತ ಜೋಗಿ ಹೇಳಿದರು.
ಆಸ್ಪತ್ರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಆಗಮಿಸಿ ಆಡಳಿತ ಮಂಡಳಿ ಹಾಗೂ ಸಂತ್ರಸ್ತ ಕುಟುಂಬದ ಜೊತೆ ಮಾತುಕತೆ ನಡೆಸಿದರು.

loading...

LEAVE A REPLY

Please enter your comment!
Please enter your name here