ಶಾಸಕರಿಗೆ ಬಹಿರಂಗ ಸಭೆಗೆ ಆಹ್ವಾನಿಸಿದ ಮಾಜಿ ಶಾಸಕ ಸುರೇಶ ಮಾರಿಹಾಳ

0
16
loading...

ಕನ್ನಡಮ್ಮ ಸುದ್ದಿ-ಚನ್ನಮ್ಮ ಕಿತ್ತೂರು

ಡಿ.ಬಿ ಇನಾಮದಾರ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರು ಏನು ಸಾಧನೆ ಮಾಡಿದ್ದಾರೆ. ಕೇವಲ 9 ವರ್ಷದ ಅಧಿಕಾರದಲ್ಲಿ ಕಿತ್ತೂರಿಗಾಗಿ ನಾನು ಎಷ್ಟು ಶ್ರಮಿಸಿದ್ದೆನೆ ಎನ್ನುವುದು ಜನರಿಗೆ ಗೊತ್ತಿದೆ, ಈ ಕುರಿತು ಜನರ ಮುಂದೆಯೆ ತಮ್ಮ ಸಾಧನೆಗಳನ್ನು ಪ್ರಸ್ತಾಪಿಸುವಂತೆ ಅವರಿಗೆ ಆಹ್ವಾನಿಸುತ್ತಿದ್ದೆನೆಂದು ಮಾಜಿಶಾಸಕ ಸುರೇಶ ಮಾರಿಹಾಳ ಹೇಳಿದರು.

ಸ್ಥಳಿಯ ಬೀಡಿ ಕ್ರಾಸನಲ್ಲಿರುವ ಪ್ರವಾಸಿ ಮಂದಿರದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕು ಮಾಡುವಲ್ಲಿ ಹಾಗೂ ಅಭಿವೃಧ್ಧಿ ಪ್ರಾಧೀಕಾರದ ರಚನೆಯ ಕೆಲಸಗಳನ್ನು ನಾನು ಶಾಸಕನಿದ್ದಾಗ ಮಾಡಿದ್ದೆನೆ, ಆದರೇ ಈಗಿನ ಶಾಸಕರು ಕಿತ್ತೂರಿಗೆ ಒಂದು ಕಾಲೇಜನ್ನು ಸಹ ತರಲು ಆಸಕ್ತಿ ತೋರಿಸಿಲ್ಲ, ಈ ಕುರಿತು ಬೇಕಾದರೆ ನೇರವಾಗಿ ಶಾಸಕರನ್ನು ನಾನು ಬಹಿರಂಗ ಸಭೆಗೆ ಆಹ್ವಾನಿಸುತ್ತೆನೆಂದರು.

ಶಾಸಕ ಡಿ.ಬಿ.ಇನಾಮದಾರ ಈ ವರ್ಷ ಜರುಗಿದ ಕಿತ್ತೂರು ಉತ್ಸವದ ಸಮಾರೊಪ ಸಮಾರಂಭದ ಭಾಷಣದಲ್ಲಿ ಕೆಲವರು ಉತ್ಸವವನ್ನು ಕೆಡಿಸುವ ಪ್ರಯತ್ನ ಮಾಡಿದ್ದಾರೆಂದು ಹೇಳಿಕೆ ನೀಡಿದ್ದು ಸರಿಯಲ್ಲ, ಚನ್ನಮ್ಮಾಜಿಯು ನಾಡಿನ ಜನತೆಯ ಆರಾಧ್ಯ ದೈವವಾಗಿದ್ದು ಆ ತಾಯಿಯ ಉತ್ಸವವನ್ನು ಯಾರು ಕೆಡಿಸಲು ಪ್ರಯತ್ನಿಸಿಲ್ಲ, ರಾಜಮನೆತನದವರು ಕಲ್ಮಠದ ಶ್ರೀಗಳ ಮಾರ್ಗದರ್ಶನದಂತೆ ತಮ್ಮೆಲ್ಲ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರು, ಇ ಒಂದು ರಾಜಪರಂಪರೆಯನ್ನು ಮರೆತು ಜಿಲ್ಲಾಡಳಿತ ಹಾಗೂ ಶಾಸಕರು ಉತ್ಸವದ ವೇಳೆಯಲ್ಲಿ ಕಲ್ಮಠ ಹಾಗೂ ನಿಚ್ಚಣಕಿ ಶ್ರೀಗಳಿಗೆ ಸಾನಿಧ್ಯವನ್ನು ನೀಡದೆ ಇರುವದಕ್ಕೆ ನಮ್ಮಿಂದ ಹಾಗೂ ಸಾರ್ವಜನಿಕರಿಂದ ಆಕ್ರೋಷ ವ್ಯಕ್ತವಾಗಿತ್ತೆ ಹೊರೆತು ಉತ್ಸವವನ್ನು ಕೆಡಿಸುವ ಹುನ್ನಾರ ಯಾರಿಂದಲೂ ಆಗಿಲ್ಲ ಎಂದು ಸ್ಪಷ್ಟ ಪಡಿಸಿದರು.

ನಂತರ ಜಿಲ್ಲಾಡಳಿತದ ಪ್ರತಿನಿಧಿಯಾಗಿ ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಕಲ್ಮಠಕ್ಕೆ ಆಗಮಿಸಿ ನಮ್ಮೆಲ್ಲರ ಮುಂದೆ ಇಬ್ಬರು ಶ್ರೀಗಳಿಗೆ ಕಾರ್ಯಕ್ರಮದ ಸಾನಿಧ್ಯ ನೀಡುವದರ ಜೊತೆಗೆ ಜಿಲ್ಲಾಡಳಿತದ ಸಕಲ ಗೌರವದೊಂದಿಗೆ ಅವರನ್ನು ಕರೆದೊಯ್ಯುತ್ತೆವೆಂದು ಸಭಿಕರ ಮುಂದೆ ಹೇಳಿದಾಗ ಆ ಮಾತಿಗೆ ನಾವೆಲ್ಲರೂ ಸಮ್ಮತಿ ಸೂಚಿಸಿ ಕಾರ್ಯಕ್ರಮಕ್ಕೆ ಹೋಗುವಂತೆ ಶ್ರೀಗಳಿಗೆ ಮನವಿಮಾಡಿಕೊಂಡೆವು ಎಂದರು. ಕಿತ್ತೂರು ಉತ್ಸವವನ್ನು ಕಿತ್ತೂರಿನಲ್ಲಿ ನಡೆಸದೆ ಈ ಉತ್ಸವವನ್ನು ಬೆಳಗಾವಿಯಲ್ಲಿ ಮಾಡುವ ಹುನ್ನಾರ ಇ ಹಿಂದೇ ನಡೆದಿತ್ತು, ಈ ಹುನ್ನಾರವನ್ನು ವಿರೋಧಿಸಿ ನಾವೆಲ್ಲರೂ ಕಿತ್ತೂರಿನಲ್ಲಿ ಧರಣಿ ಕುಳಿತಿದ್ದೆವು, ಕೊನೆಗೂ ಈ ಉತ್ಸವವನ್ನು ಕಿತ್ತೂರಿನಲ್ಲಿಯೆ ನಡೆಸಲಾಗುವುದು ಎಂದ ನಂತರ ನಮ್ಮ ಧರಣಿಯನ್ನು ಕೈ ಬಿಟ್ಟಿದ್ದೆವು, ಹಿಂದೆ ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಆಗಿನ ಮುಖ್ಯಮಂತ್ರಿ ಎಸ್‌.ಎಮ್‌.ಕೃಷ್ಣಾ ಆಗಮಿಸಿದ್ದರು ಆಗ ಕೇವಲ ಬಾಯಿ ಮಾತಿನಲ್ಲಿಯೂ ಸಹ ಕಿತ್ತೂರು ತಾಲೂಕು ಮಾಡತ್ತೆವೆಂದು ಘೋಷಿಸದೇ ತರೆಳಿದರು ಆಗ ಡಿ.ಬಿ. ಇನಾಮದಾರ ಸಚಿವರಿದ್ದರೂ ಸಹ ಇತ್ತ ತಲೆ ಹಾಕಲಿಲ್ಲ. ಮತ್ತು ಕಿತ್ತೂರು ತಾಲೂಕಿಗೆ ಹೋರಾಟ ಪ್ರಾರಂಬಿಸಲಾಯಿತು, ಈ ಕುರಿತು ನಡೆದ ಹೊರಾಟ ಬೆಂಗಳೂರಿಗೆ ತಲುಪಿತು, ಆಗ ಕಿತ್ತೂರಿಗೆ ವಿಶೇಷ ತಹಶೀಲ್ದಾರ ಹುದ್ದೆ ನೀಡಲಾಯಿತು ಎಂದರು.

ನಾನು ಮೂದಲ ಭಾರಿ ಶಾಸಕನಾದಾಗ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಿದ್ದರು ಆಗ ನಾನು ಕಿತ್ತೂರು ತಾಲೂಕಿÀಗೋಸ್ಕರ ಅವರನ್ನು ಸಹ ಒತ್ತಾಯಿದ್ದೆನೆ, ಆಗ ಕಿತ್ತೂರಿಗೆ ಎಲ್ಲ ಆಫೀಸುಗಳನ್ನು ತರಲು ಪ್ರಯತ್ನಿಸಿದ್ದೆನೆ, ನಂತರ ರಾಜ್ಯದಲ್ಲಿ ಬಿ.ಜಿ.ಪಿ. ಸರ್ಕಾರ ಅಧಿಕಾರಕ್ಕೆ ಬಂದಿತು ಆಗ ಯಡಿಯುರಪ್ಪನವರು ಮುಖ್ಯಮಂತ್ರಿಗಳಿದ್ದಾಗ ಸಹ ಒತ್ತಾಯಿಸಿದ್ದೆನೆ, ಆದರೇ ಈ ಕುರಿತು ಜಗದೀಶ ಶೆಟ್ಟರ ಅವರಿಗೆ ಪೂರ್ಣ ಮಾಹಿತಿ ಇತ್ತು ಆಗ ಅವರು ಮುಖ್ಯಮಂತ್ರಿಗಳಿದ್ದಾಗ ಬೈಲಹೊಂಗಲದ ಒಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿದ್ದರು ಆಗ ಈ ಕುರಿತು ಅವರಲ್ಲಿ ವಿನಂತಿಸಿಗೊಂಡೆನು ಆಗ ಅವರು 44 ಹಳ್ಳಿಗಳು ಹಾಗೂ 18 ಗ್ರಾಮ ಪಂಚಾಯತಿಗಳನ್ನು ಒಳಗೊಂಡಂತೆ ಉತ್ಸವದಲ್ಲಿ ಕಿತ್ತೂರು ತಾಲೂಕೆಂದು ಸರ್ಕಾರದಿಂದ ಗೆಜೆಟ್‌ ಕಾಫಿ ತರುವದರ ಮೂಲಕ ಅಧಿಕೃತವಾಗಿ ಘೊಷೀಸಿದರು, ನಂತರ ಸದಾನಂದಗೌಡ ಮುಖ್ಯಮಂತ್ರಿಗಳಿರುವಾಗ ಕಿತ್ತೂರು ಅಭಿವೃಧ್ದಿ ಪ್ರಾಧಿಕಾರ ರಚಸಲಾಯಿತು, ಈ ಹಿಂದೆ ಕಿತ್ತೂರು ಉತ್ಸವಕ್ಕೆ ಒಂದು ನಿರ್ಧಿಷ್ಟ ದಿನಾಂಕ ನಿಗದಿ ಪಡಿಸದೇ ಯಾವಾಗಲಾದರೂ ಆಚರಿಸಲಾಗುತಿತ್ತು, ಆದರೇ ಭಾಜಪ ಸರ್ಕಾರ ಆಡಲಿತದಲ್ಲಿರುವಾಗ ಉತ್ಸವಕ್ಕೆ ಒಂದು ದಿನಾಂಕ ನಿಗದಿಪಡಿಸಿ ಉತ್ಸವವನ್ನು ಆ ದಿನಾಂಕಕ್ಕೆ ಆಚರಿಸಲು ಆರಂಭಿಲಾಯಿತು, ಮೊದಲು ಎರಡು ದಿನ ಆಚರಿಸುತ್ತಿರುವ ಕಿತ್ತೂರು ಉತ್ಸವವನ್ನು ಆಗಿನ ಜಿಲ್ಲಾಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರ ಸಹಾಯದಿಂದ 3 ದಿನ ಆಚರಿಸಲಾಯಿತು, ಕಿತ್ತೂರು ತಾಲೂಕಿನ ಸಂಪೂರ್ಣ ಜವಾಬ್ದಾರಿಯನ್ನು ನನಗೆ ನೀಡಲಾಗಿತ್ತು ಅದನ್ನು ನಾನು ಯಶಸ್ವಿಯಾಗಿ ನಿಭಾಯಿಸಿದ್ದೆನೆ ಎಂದರು ಪಟ್ಟಣದಲ್ಲಿ ಈಗಾಗಲೇ ಶಾಸಕರ ಕಛೇರಿಯನ್ನು ತೆರೆಯಲಾಗಿದೆ ಆ ಕಛೇರಿ ಯಾವಾಗಲು ಸಹ ಬೀಗ ಜಡಿದು ಪರಿಸ್ಥಿತಿಯಲ್ಲಿರುತ್ತದೆ, ಶಾಸಕರು ಆ ಕಛೇರಿಗೆ ಎಷ್ಟು ಭಾರಿ ಭೇಟಿ ನೀಡಿದ್ದಾರೆ, ಹಾಗೂ ಎಷ್ಟು ಸಮಸ್ಯಗಳನ್ನು ಅಲ್ಲಿ ಪರಿಹರಿಸಲಾಗಿದೆ ಎಂದು ಪ್ರಶ್ನೀಸಿದರು.

ಶಾಸಕರಿಗೆ ಇ ಮೂಲಕ ನಾನು ಬಹಿರಂಗ ಸಭೆಗೆ ಆಹ್ವಾನಿಸಿದ್ದೆನೆ, ಶಾಸಕರನ್ನು ಕ್ಷೇತ್ರದ ಜನತೆ ಗಮನಿಸುತ್ತಿದ್ದಾರೆ, ಈ ಭಾರಿಯ ಉತ್ಸವದಲ್ಲಿ ಕಂದಾಯ ಸಚಿವ ಕಾಗೊಡು ತಿಮ್ಮಪ್ಪನವರ ಹೇಳಿಕೆಯನ್ನು ಅಭಿನಂದಿಸುತ್ತೆನೆ ಎಂದರು. ಪ್ರತಿಕಾಗೊಷ್ಠೀಯಲ್ಲಿ ಮಾಜಿ ಜಿಪಂ ಉಪಾಧ್ಯಕ್ಷ ಯಲ್ಲಪ್ಪ ವಕ್ಕುಂದ, ಮಾಜಿ ತಾಪಂ ಅಧ್ಯಕ್ಷ ದಿನೇಶ ವಳಸಂಗ, ಸುನೀಲ ಘಿವಾರಿ, ಸಂದೀಪ ದೇಶಪಾಂಡೆ, ನವೀನ ಪಟ್ಟನಶೆಟ್ಟಿ, ಉಳವಪ್ಪ ಉಳ್ಳಾಗಡ್ಡಿ, ಶ್ಯಾಮಸುಂದರ ಶಿಲೇದಾರ, ಬಸನಗೌಡ ಶಿದ್ರಾಮಣಿ ಹಾಜರಿದ್ದರು.

loading...

LEAVE A REPLY

Please enter your comment!
Please enter your name here