ಸಂಸ್ಕøತ ಎಲ್ಲ ಭಾಷೆಗಳ ಮಾತೃ ಭಾಷೆ: ಸೋಂದಾ ಸ್ವರ್ಣವಲ್ಲೀ ಶ್ರೀಗಳು

0
50
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ : ಸಂಸ್ಕøತ ಎಲ್ಲ ಭಾಷೆಗಳ ಮಾತೃ ಭಾಷೆ.ಅನೇಕ ರಾಷ್ಟ್ರಗಳಲ್ಲಿ ಸಂಸ್ಕøತಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ದೇವ ಭಾಷೆಯಾದ ಸಂಸ್ಕøತವನ್ನು ಪ್ರಾಥಮಿಕ ಶಾಲೆಯಿಂದ, ವಿಶ್ವವಿದ್ಯಾಲಯದವರೆಗೂ ಕಡ್ಡಾಯಗೊಳಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧಿಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನುಡಿದರು.
ಅವರು ಸಂಸ್ಕ್ರತ ಭಾರತೀ ಮತ್ತು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಸಹಯೋಗದಲ್ಲಿ ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ಸಂಸ್ಕ್ರತ ಪಾಠಶಾಲೆಯಲ್ಲಿ ಜಿಲ್ಲಾ ಮಟ್ಟದ “ಸಂಸ್ಕ್ರತ ಸಂಗಮ” ಸಂಸ್ಕ್ರತ ಸಂಭಾಷಣಾ ಶಿಬಿರದ ಅಂಗವಾಗಿ ಹಮ್ಮಿಕೊಳ್ಳಲಾದ ಹತ್ತು ದಿನಗಳ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಂಸ್ಕ್ರತ ಭಾಷೆ ಸಮೃದ್ಧವಾಗಿದ್ದು, ಬಹು ವಿಶಾಲತೆಯನ್ನು ಹೊಂದಿದೆ. ವ್ಯಾಸ, ಭಾಸ, ಕಾಳಿದಾಸ, ಬಾಣ, ವಾಲ್ಮೀಕಿ ಸೇರಿದಂತೆ ಶ್ರೆಷ್ಟ ಕವಿಗಳು ಸಂಸ್ಕøತದಲ್ಲಿ ರಚಿಸಿದ ಗ್ರಂಥಗಳು ನಿತ್ಯ ನೂತನವಾಗಿದೆ. ವಿಶ್ವದಲ್ಲಿ ಅನಿವಾರ್ಯವಾಗಿರುವ ಆಯರ್ವೇದ ಮತ್ತು ಯೋಗಗಳೂ ಸಂಸ್ಕøತ ಭಾಷೆಯಲ್ಲಿಯೇ ಇವೆ. ಇಂತಹ ಮಹಾನ್ ಭಾಷೆ, ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದುದಲ್ಲ. ಆದ್ದರಿಂದಲೇ ಈ ಭಾಷೆ ಸಾರ್ವತ್ರಿಕಗೊಳ್ಳಬೇಕು. ಕೇವಲ ಹತ್ತು ದಿನದಲ್ಲಿ ವ್ಯವಹಾರಿಕವಾಗಿ ಮಾತನಾಡುವುದನ್ನು ಕಲಿಯಬಹುದು. ಜಿಲ್ಲೆಯಾದ್ಯಂತ 108 ಇಂತಹ ಶಿಬಿರಗಳು ನಡೆದಿವೆ. ಇದು ದೇಶವ್ಯಾಪಿ ವಿಸ್ತಾರಗೊಳ್ಳುವ ಅಗತ್ಯವಿದೆ. ಎಲ್ಲಾ ಸಂಸ್ಕøತ ಪಾಠಶಾಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಸ್ಕøತದಲ್ಲೇ ಮಾತನಾಡಬೇಕು. ತಪ್ಪು-ತಡಗಳಾಗುತ್ತದೆಂದು ಆತಂಕವಿಲ್ಲದೇ ರೂಢಿಸಿಕೊಳ್ಳಬೇಕು. ಎಂದರು.
ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದ ಅಧ್ಯಾಪಕ ವಿ.ಗಂಗಾಧರ ಬೋಡೆ ಮಾತನಾಡಿ, ಶ್ರೀಗಳ ಅನುಗ್ರಹದಿಂದ ನಾನು ಕಲಿತ ಪಾಠಶಾಲೆಯಲ್ಲಿಯೇ ಇಂದು ಶ್ರೀಗಳ ಸಮ್ಮುಖದಲ್ಲಿ ಮಾತನಾಡಲು ಸಿಕ್ಕ ಅವಕಾಶ ಸಂತಸ ತಂದಿದೆ. ಸಂಸ್ಕ್ರತ ಮಾತನಾಡಲು ಯಾವ ಆತಂಕ ಪಡದೇ ಮಾತನಾಡಬೇಕು ಎಂದರು.
ಶಿಕ್ಷಕ ಸತ್ಯನಾರಾಯಣ ಭಟ್ಟ ರಾಗಿಹೊಸಳ್ಳಿ ವ್ಯವಸ್ಥಿತವಾಗಿ ಶಿಬಿರ ಸಂಯೋಜಿಸಿದ್ದರು. ಶಿಬಿರಾರ್ಥಿ ನಾಗರಾಜ ಭಟ್ಟ ಮಾವಿನಗದ್ದೆ ಅನುಭವ ಹಂಚಿಕೊಂಡರು. ಶಿಬಿರದ ತಾಲೂಕಾ ಸಂಚಾಲಕ ವಿ.ವೆಂಕಟ್ರಮಣ ಭಟ್ಟ ಚಂದಗುಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ವಂದಿಸಿದರು. ಸಂಸ್ಕ್ರತ ಪಾಠಶಾಲಾ ಮುಖ್ಯಾಧ್ಯಾಪಕ ವಿ.ಎಸ್.ಬಟ್ಟ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here