ಸಮಾಜದ ಅಂಕುಡೊಂಕು ಹೋಗಲಾಡಿಸಿದ ದಾಸ ಸಾಹಿತ್ಯ : ಕಣವಿ

0
36
loading...

ಸವದತ್ತಿ : ನಾಡು ಕಂಡ ಅಪರೂಪದ ಸಂತ, ಭಕ್ತಿಯ ಮಹಾಪೂರದ ಸಂಗೀತದಿಂದ ಕೃಷ್ಣನನ್ನು ತನ್ನೆಡೆಗೆ ತಿರುಗಿಸಿ ಕನಕ ಕಿಂಡಿ ನಿರ್ಮಿಸಿದ ಹಿರಿಮೆಯ ಮಹಾನ ಸಂತ ಕನಕದಾಸ. ಸರ್ಕಾರ ಸಂತ ಮಹಾತ್ಮರ ಸನ್ಮಾರ್ಗಗಳು ಜನರಿಗೆ ದಾರಿದೀಪವಾಗಲೆಂದು ಜಯಂತಿ ಉತ್ಸವಗಳನ್ನು ಮಾಡುತ್ತಿವೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.

ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸವದತ್ತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕವಿ ಶ್ರೀ ಭಕ್ತ ಕನಕದಾಸರ 529 ನೇ ಜಯಂತಿ ಆಚರಣೆಯ ಕಾರ್ಯಕ್ರಮದ ಉದ್ಘಾಟನಾ ಹಾಗೂ ಅಧ್ಯಕ್ಷೀಯ ನುಡಿ ನುಡಿಯುತ್ತಾ ತಿಳಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾನ್ಯ ಬಾಲಚಂದ್ರ ಜಾರಕಿಹೊಳಿಯವರು ಸಮಾಜ ಕಲ್ಯಾಣ ಸಚಿವರಿದ್ದ ಸಮಯದಲ್ಲಿ ಕಾಗಿನೆಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿದ ಹಿರಿಮೆ ನಮ್ಮ ಸರ್ಕಾರದ್ದು, ಸ್ಥಳೀಯವಾಗಿ ನಾನು ಸಮಾಜದ ಎಲ್ಲ ಕಾರ್ಯಗಳಲ್ಲಿಯೂ ಮುಖಂಡರೊಂದಿಗೆ ಸಹಕರಿಸಿದ್ದೆನೆ ಅಲ್ಲದೇ ಮುಂದೆಯೂ ಸಹಕರಿಸುವದಾಗಿ ತಿಳಿಸಿದರು. ಸಂಗೊಳ್ಳಿ ರಾಯಣ್ಣ ಕಟ್ಟೆ ಕೆಡವಿದ ವಿಷಯ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಪುರಸಭೆಯ ಹಿಂದಿನ ಅಧಿಕಾರಿಯ ಅವಿವೇಕಿತನದ ಕಾರ್ಯದಿಂದ ನಡೆದ ಘಟನೆಯು ಕುರುಬ ಸಮಾಜಕಷ್ಟೇ ಅಲ್ಲದೆ ಮನುಕುಲಕ್ಕೆ ಒಂದು ಆಘಾತಕಾರಿಯಾಗಿದ್ದು, ರಾಯಣ್ಣ ವೃತ್ತದಿಂದ ಹಿಡಿದು ಪುತ್ಥಳಿ ಸ್ಥಾಪನೆ ಹಾಗೂ ಸಮಾಜದ ಮುಖಂಡರ ಅಪೇಕ್ಷೇಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟನೆಯವರೆಗೆ ಸಮಾಜದೊಂದಿಗೆ ಸಹಕರಿಸುವದಾಗಿ ತಿಳಿಸಿದರು. ಕುರುಬ ಸಮಾಜದ ತಾಲೂಕ ಅಧ್ಯಕ್ಷ ಜಿ.ಜಿ. ಕಣವಿ ಅತಿಥಿ ಪರ ಮಾತನಾಡಿ ಬಸವಣ್ಣ ಮತ್ತು ಕನಕದಾಸರು ವಚನ ಹಾಗೂ ದಾಸ ಸಾಹಿತ್ಯದಿಂದ ಸಮಾಜದ ಅಂಕುಡೊಂಕು ತಿದ್ದಿದ ಮಹಾತ್ಮರು. ಕನಕ ಜಯಂತಿ ವಿಜೃಂಭನೆಯಿಂದ ಜರುಗಲು ಸಹಕರಿಸಿದ ಸಮಾಜದ ಎಲ್ಲ ಭಾಂದವರಿಗೆ, ಮುಖಂಡರಿಗೆ ಮತ್ತು ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಪುರಸಭೆಯವರ ಅಚಾತುರ್ಯದಿಂದ ಸಂಗೊಳ್ಳಿ ರಾಯಣ್ಣ ಕಟ್ಟೆ ಒಡೆದು ಹೋಗಿದ್ದು, ವೃತ್ತ ನಿರ್ಮಾಣ, ಕಂಪೌಂಡ, ಉದ್ಯಾನವನ ಮತ್ತು ವಿದ್ಯುತ್‌ ದೀಪವನ್ನು ಪುರಸಭೆಯವರು ನಿರ್ಮಿಸಬೇಕು ಹಾಗೂ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಕಾರ್ಯಕ್ಕೆ 25 ಲಕ್ಷ ರೂ. ನೀಡಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಯನ್ನು ಘನ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾಡುವರು ಕಾರಣ ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಿರಿ ಎಂದು ವಿನಂತಿಸಿದರು. ಶಾಸಕರಿಗೆ ಅನುದಾನ ನೀಡಿಕೆಗಾಗಿ ಮನವಿಯನ್ನು ವೇದಿಕೆಯ ಮುಖಾಂತರ ನೀಡಲಾಯಿತು.

ಕನಕದಾಸರ ಭಾವ ಚಿತ್ರಕ್ಕೆ ಶಾಸಕ ಮಾಮನಿ, ವಿಶ್ವಾಸ ವೈದ್ಯ, ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ, ಉಪಾಧ್ಯಕ್ಷ ಬಸವರಾಜ ಜಗ್ಗಲಿ, ಕುರುಬ ಸಮಾಜದ ತಾಲೂಕಾಧ್ಯಕ್ಷ ಜಿ.ಜಿ. ಕಣವಿ, ಮುಖಂಡರು ಹಾಗೂ ಅಧಿಕಾರಿಗಳು ಪೂಜೆ ನೇರವೆರಿಸಿದರು.

ಕುಂಭಮೇಳವು ಮೆರಗು ನೀಡಿದರೆ, ಡೊಳ್ಳು ಕುಣಿತಗಳು ನಿಂತವರನ್ನು ನಿಂತಲ್ಲಿಯೇ ಹೆಜ್ಜೆ ಹಾಕುವಂತೆ ಮಾಡಿತು. ಬಸಿಡೋನಿ ಶಿವಾನಂದ ಮಠದ ಪ.ಪೂ. ಶ್ರೀ ಗಂಗಾಧರ ಮಹಾಸ್ವಾಮಿಗಳು ಆಶೀರ್ವಚನ ಮಾಡಿದರು. ತಹಶೀಲ್ದಾರ ಮೆಳವಂಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೊಡವಾಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ ಮೋಟೆ ಉಪನ್ಯಾಸ ನೀಡಿದರು.

ಈ ವೇಳೆ ಪುರಸಭೆಯ ಅಧ್ಯಕ್ಷ ರಾಜಶೇಖರ ಕಾರದಗಿ, ಉಪಾಧ್ಯಕ್ಷ ಬಸವರಾಜ ಜಗ್ಗಲಿ, ತಾಲೂಕ ಪಂಚಾಯತ ಅಧ್ಯಕ್ಷ ವಿನಯಕುಮಾರ ದೇಸಾಯಿ, ಉಪಾಧ್ಯಕ್ಷ ಸೋನವ್ವಾ ದೊಡಮನಿ, ಪಿ.ಎಲ್‌.ಡಿ. ಬ್ಯಾಂಕ ನಿರ್ದೇಶಕ ಜಗದೀಶ ಶಿಂತ್ರಿ, ಜಿಲ್ಲಾ ಪಂಚಾಯತ ಸದಸ್ಯರಾದ ಎಮ್‌.ಎಸ್‌. ಹಿರೇಕುಂಬಿ, ಫಕ್ಕೀರಪ್ಪ ಹದ್ದನ್ನವರ, ಮಂಜುಳಾ ಬೈರಣ್ಣವರ, ಶಿವಗಂಗಾ ಗೊರವನಕೊಳ್ಳ, ಗುರುನಾಥ ಗಂಗಲ, ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಡಿ. ಟೋಪೋಜಿ, ತಹಶೀಲ್ದಾರ ಬಸವರಾಜ ಮೆಳವಂಕಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎಸ್‌. ಕಲ್ಮನಿ, ಪುರಸಬೆ ಮುಖ್ಯಾಧಿಕಾರಿ ಕೆ.ಆಯ್‌. ನಾಗನೂರ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ವ್ಹಿ.ಆರ್‌. ನಾಗನೂರ, ಕುರುಬ ಸಮಾಜದ ಹಾಗೂ ವಿವಿಧ ಸಮಾಜಗಳ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here