ಸಹಕಾರ ಸಂಸ್ಥೆಗಳಿಂದ ಹಳೆ ನೋಟ ಸ್ವೀಕಾರ ಬಂದ್‌: ರಮೇಶ ಕತ್ತಿ

0
27
loading...

ಸಹಕಾರ ಸಂಸ್ಥೆಗಳಿಂದ ಹಳೆ ನೋಟ ಸ್ವೀಕಾರ ಬಂದ್‌: ರಮೇಶ ಕತ್ತಿ

ಸಂಕೇಶ್ವರ 14: ಸಹಕಾರ ತಳಹದಿಯಲ್ಲಿರುವ ಡಿಸಿಸಿ ಬ್ಯಾಂಕ ಸೇರಿದಂತೆ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕ ಹೊರತುಪಡಿಸಿ ಎಲ್ಲ ಬ್ಯಾಂಕುಗಳಲ್ಲಿ 500, 1000 ಮೊತ್ತದ ಹಳೆ ನೋಟು ಸ್ವೀಕರಿಸುವದನ್ನು ನಿಷೇಧಿಸಿ ಆರ್‌ಬಿಐ ಆದೇಶ ಹೊರಡಿಸಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದ್ದಾರೆ.

ಅವರು ಈ ಕುರಿತು ಮಾತನಾಡುತ್ತ, ದೇಶದ ಅರ್ಥವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಮೋದಿ ಅವರು ಉತ್ತಮ ಕ್ರಮ ಕೈಕೊಂಡಿದ್ದಾರೆ. ಆದರೆ ರೈತ ಸದಸ್ಯರನ್ನೇ ಹೆಚ್ಚಾಗಿ ಹೊಂದಿರುವ ಡಿಸಿಸಿ ಬ್ಯಾಂಕುಗಳಲ್ಲಿ ಸೋಮವಾರದಿಂದ ಹಣ ಜಮಾ-ಖರ್ಚು ಮಾಡದಂತೆ ಆರ್‌ಬಿಐ ಆದೇಶ ಹೊರಡಿಸಿದ್ದರಿಂದ ಮಂಗಳವಾರದಿಂದ ಹಳೆ ನೋಟುಗಳ ಸ್ವೀಕರಿಸುವದನ್ನು ನಿಲ್ಲಿಸಲಾಗಿದೆ. ಈಗಾಗಲೇ ಸ್ವೀಕರಿಸುವ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕಗಳು ಸ್ವೀಕರಿಸುತ್ತಿಲ್ಲ. ಆದ್ದರಿಂದ ರೈತರು ಹಾಗೂ ಜನಸಾಮಾನ್ಯರು ತಮ್ಮಲ್ಲಿರುವ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೇ ಬದಲಾಯಿಸಿಕೊಳ್ಳಬೇಕು ಎಂದರು.

ಆರ್‌ಬಿಐ ಈ ನೀತಿಯಿಂದ ಜನಸಾಮಾನ್ಯರಿಗೆ ಹಾಗೂ ರಾಷ್ಟ್ರೀಕೃತ ಬ್ಯಾಂಕ ಖಾತೆ ಹೊಂದಿರದವರಿಗೆ ತೊಂದರೆಯಾಗಲಿದ್ದು, ಬಹುತೇಕ ರೈತರು ಜಿಲ್ಲಾ ಕೇಂದ್ರ ಬ್ಯಾಂಕುಗಳಲ್ಲಿಯೇ ಖಾತೆ ಹೊಂದಿರುವದರಿಂದ ಜಿಲ್ಲಾ ಕೇಂದ್ರ ಬ್ಯಾಂಕುಗಳಲ್ಲಿ ನೋಟು ಚಲಾವಣೆಗೆ ಅನುಮತಿ ನೀಡುವಂತೆ ರಿಝರ್ವ ಬ್ಯಾಂಕಗೆ ಪತ್ರ ಬರೆಯಲಾಗುವುದು ಎಂರು.

14-ಎಸ್‌ಎಎನ್‌ಕೆ-03

ಪೋಟೊ ಪೈಲ್‌ ಹೆಸರು: ರಮೇಶ ಕತ್ತಿ

loading...

LEAVE A REPLY

Please enter your comment!
Please enter your name here