ಸಾಹಿತ್ಯ ಸಮಾಜದಲ್ಲಿನ ಅಂಕು ಡೊಂಕು ತಿದ್ದಿವೆ

0
24
loading...

ಕನ್ನಡಮ್ಮ ಸುದ್ದಿ-ಧಾರವಾಡ : ದೇಶ ಪ್ರಗತಿಯಾಗಬೇಕಾದರೆ ಜಾತಿ ಕುಲಗಳನ್ನು ಬದಿಗಿಟ್ಟು ಇಂತಹ ದಾರ್ಶನಿಕರ, ತತ್ವಜ್ಞಾನಿಗಳ ಆದರ್ಶಗಳನ್ನು ಪಾಲಿಸಬೇಕು ಎಂದು ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ತಾತಕೋತ್ತರ ಅಧ್ಯಯನ ಸಂಸ್ಥೆಯ ಪ್ರಾಚಾರ್ಯ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ತಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಕನಕದಾಸ ಜಯಂತಿ ಸಮಾರಂಭದಲ್ಲಿ ಮಾತನಾಡಿ, ವಚನ ಸಾಹಿತ್ಯ, ದಾಸ ಸಾಹಿತ್ಯ ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದಿ ತೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕನಕರ 500 ವರ್ಷಗಳ ಹಿಂದಿನ ಹೇಳಿಕೆ ಇಂದಿನ ದಿನಮಾನಗಳಿಗೆ ಎಷ್ಟು ಸೂಕ್ತವಾಗಿದೆ ಎಂಬುದನ್ನು ನಾವು ಗಮನಿಸಬಹುದು. ಕನಕರನ್ನು ನಾವು ಸಾಹಿತಿ, ಸಮಾಜ ಸುಧಾರಕರು, ತತ್ವಜ್ಞಾನಿ, ಶ್ರೇಷ್ಠ ಭಕ್ತನ್ನಾನಾಗಿ ಕಾಣಬಹುದು. ದಾರ್ಶನಿಕರ ಜೀವನಾಮೃತವನ್ನು ಇಂದಿನ ಪೀಳಿಗೆ ಪರಿಚಯ ಮಾಡಿಕೊಡುವ ಜವ್ದಾಬಾರಿ ಎಲ್ಲ ಶಿಕ್ಷಕರ ಮೇಲಿದೆÉ ಎಂದರು.
್ಥಸೂರಜ ಜೈನ, ಮಹಾವೀರ ಉಪಾಧ್ಯೆ, ಜಿನೇಂದ್ರ ಕುಂದಗೊಳ, ಶ್ರೀಮತಿ ವಿಭಾ ಮುಗಳಿ, ಶ್ರೀಮತಿ ರಾಧಾ ಗೌಡರ, ಡಾ. ಸಿ.ಡಿ. ಲಕ್ಕಣ್ಣನವರ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here