ಸುಸಜ್ಜಿತ ಶೆಡ್ ನಿರ್ಮಿಸಲು 2.20 ಎಕರೆ ಪ್ರದೇಶ ಮಂಜೂರಿಗೆ ಒತ್ತಾಯ

0
37
loading...

ಕನ್ನಡ್ಮಮ ಸುದ್ದಿ-ಕಾರವಾರ : ನಗರದ ಟ್ಯಾಗೋರ ಕಡಲ ತೀರದಲ್ಲಿ ಮೀನುಗಾರಿಕಾ ಸಲಕರಣೆಗಳನ್ನು ರಕ್ಷಿಸಿಕೊಳ್ಳಲು ಸುಸಜ್ಜಿತ ಶೆಡ್ ನಿರ್ಮಿಸಿಕೊಳ್ಳಲು 2.20 ಎಕರೆ ಪ್ರದೇಶ ಮಂಜೂರಿ ಮಾಡುವಂತೆ ಒತ್ತಾಯಿಸಿ ಹರಿಕಂತ್ರ-ಖಾರ್ವಿ ಮೀನುಗಾರರ ಸಹಕಾರಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಡಲತೀರದ ಮೇಲೆ ಜೀವನೋಪಾಯಕ್ಕಾಗಿ ಮೀನುಗಾರಿಕೆ ವೃತ್ತಿಯನ್ನೇ ಮಾತ್ರ ಅವಲಂಬಿಸಿದ್ದಾರೆ. ಇದು ಹೊರತು ಪಡಿಸಿ ಇವರಿಗೆ ಬೇರೆ ಯಾವುದೇ ಕಾರ್ಯ ತಿಳಿದಿಲ್ಲ.
ಇದಲ್ಲದೇ ಸಮುದ್ರ ದಂಡೆ ಹತ್ತಿರ ಮೀನು ತೊಳೆದು ಒಣಗಿಸಿ ಅದನ್ನು ಸಂರಕ್ಷಿಸಿಡಲು ಕೂಡ ಶೆಡ್‍ನ ಅವಶ್ಯಕತೆ ಇರುತ್ತದೆ. ಆಯಾ ಋತುಗಳಿಗೆ ತಕ್ಕಂತೆ, ಬಲೆ, ದೋಣಿ, ಸಲಕರಣೆಗಳನ್ನು ಸಂರಕ್ಷಿಸಿಡಲು ಸಮುದ್ರ ದಂಡೆಯೇ ಪ್ರಮುಖ ಆಶ್ರಯ ತಾಣವಾಗಿದೆ. 2011 ರಲ್ಲಿ ಶೆಡ್‍ಗಳನ್ನು ತೆರುವುಗೊಳಿಸಿರುವುದರಿಂದ ಇಲ್ಲಿನ ಸಾಂಪ್ರದಾಯಿಕ ಮೀನುಗಾರರು ಸೂಕ್ತ ನೆಲೆ ಇಲ್ಲದೇ ಅತಂತ್ರರಾಗಿದ್ದಾರೆ. ಹೀಗಾಗಿ ಶೆಡ್‍ಗಳ ನಿರ್ಮಾಣಕ್ಕಾಗಿ ಸೂಕ್ತ ಜಾಗದ ಅವಶ್ಯಕತೆ ಇದೆ ಎಂದು ಕೋರಿದ್ದಾರೆ.
ಹಿಂದಿನ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಹಾಗೂ ಈಗಿನ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೂಡ ಪತ್ರ ಮುಖೇನ ಮತ್ತು ಕಾರವಾರಕ್ಕೆ ಬಂದಾಗ ಮೌಖಿಕವಾಗಿ ಜಿಲ್ಲಾಕಾರಿಗಳಿಗೆ ತಿಳಿಸಿದ್ದಾರೆ. ಅಂದಿನ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ್ ಘೋಷ್ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮೀನುಗಾರರಿಗೆ ನಿಗದಿಗೊಳಿಸಿದ ಜಾಗದಲ್ಲಿ ಬಲೆ, ದೋಣಿ, ಸಲಕರಣೆಗಳನ್ನು ಇಡಲು ಸುಸಜ್ಜಿತವಾದ ಶೆಡ್‍ಗಳನ್ನು ನಿರ್ಮಿಸಲು ಜಾಗವನ್ನು ಹರಿಕಂತ್ರ-ಖಾರ್ವಿ ಮೀನುಗಾರರ ಸಹಕಾರಿ ಸಂಘಕ್ಕೆ ಮಂಜೂರಿ ಮಾಡಲು ಸೂಚನೆ ನೀಡಲಾಗಿತ್ತು. ಆದರೆ ಎರಡು ವರ್ಷಗಳು ಕಳೆಯುತ್ತಿದ್ದರೂ ಈ ಬಗ್ಗೆ ಇಂದಿನ ಜಿಲ್ಲಾಕಾರಿಗಳು ಇನ್ನು ತನಕ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಈಗಲಾದರೂ ಸಾಂಪ್ರದಾಯಿಕ ದಡ ಮೀನುಗಾರಿಕೆ ಉದ್ಯೋಗಕ್ಕೆ ಪೂರಕವಾಗುವ ರೀತಿಯಲ್ಲಿ ಹಾಗೂ ಪ್ರವಾಸೋದ್ಯಮಕ್ಕೂ ಅನುಕೂಲವಾಗುವ ರೀತಿಯಲ್ಲಿ ಶೆಡ್‍ಗಳನ್ನು ನಿರ್ಮಾಣ ಮಾಡಲು ತಕ್ಷಣ ಜಮೀನು ಮಂಜೂರಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ಸಂಘದ ಅಧ್ಯಕ್ಷ ಕೆ. ಟಿ. ತಾಂಡೇಲ್, ವಿಠ್ಠಲ್ ಖೇಮು ಹರಿಕಂತ್ರ, ಚಂದ್ರಕಾಂತ್ ಹರಿಕಂತ್ರ, ಅಶೋಕ್ ಹರಿಕಂತ್ರ, ರತ್ನಾಕರ ತಾಂಡೇಲ್, ದಾಮೋದರ್ ಕುಡ್ತಳಕರ, ರೋಹಿದಾಸ್ ಬಾನಾವಳಿ ಹಾಗೂ ಇನ್ನಿತರರು ಇದ್ದರು. ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here