ಹನುಮಾನ ದೇವಸ್ಥಾನದ ಗೋಪುರ ಹಾಗೂ ಕಳಸಾರೋಹನದ ಉದ್ಘಾಟನೆ

0
29
loading...

ಗೋಕಾಕ 09: ಅರಭಾಂವಿ ಮಠದ ಶ್ರೀ ದುರದುಂಡೇಶ್ವರ ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠದ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮಿಜಿ ಅವರ ಅಪ್ಪಣೆಯ ಮೆರೆಗೆ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಹನುಮಾನ ದೇವಸ್ಥಾನದ ಗೋಪುರ ಹಾಗೂ ಕಳಸಾರೋಹನದ ಉದ್ಘಾಟನಾ ಸಮಾರಂಭದ ಇದೆ ನ.11 ಮತ್ತು 12ರ ವರೆಗೆ ನಡೆಯಲಿದೆ.
ನ.11 ರಂದು ಬೆಳ್ಳಿಗ್ಗೆ 7:15 ಗಂಟೆಗೆ ಗ್ರಾಮದ ಲಕ್ಷ್ಮೀನಗರದ ಲಕ್ಷ್ಮೀ ದೇವಸ್ಥಾನದಿಂದ 711 ಸುಮಂಗಲೇಯರಿಗೆ ಉಡಿ ತುಂಬುವ ಕಾರ್ಯಕ್ರಮ, 8:15 ಗಂಟೆಗೆ ಸುಮಂಗಲೇಯರಿಂದ ಆರತಿ ಕುಂಭಮೇಳದೊಂದಿಗೆ ಕಲ್ಲೋಳಿಯ ಮಹಾಂತೇಶ ಹೂಗಾರ ಹಾಗೂ ಸಂಗಡಿಗರಿಂದ ಸಂಭಾಳ ವಾದ್ಯ, ಕರಡಿ ಮಜಲು, ಸ್ಥಳೀಯ ಭಗೀರಥ ಝಾಂಜ್‍ಪಥಕ, ಸಕಲ ವಾದ್ಯ ಮೇಳಗಳೊಂದಿಗೆ ನೂತನ ಕಳಸದ ಭವ್ಯ ಮೇರವಣಿಗೆ ಮೂಲಕ ಗ್ರಾಮಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ನಂತರ ರಾತ್ರಿ 8:00 ಗಂಟೆಗೆ ಮೊಜಿನ ಮದ್ದು ಕಾರ್ಯಕ್ರಮ ಜರುಗಲಿದೆ.
ನ.12 ರಂದು ಬೆಳ್ಳಿಗೆ 6:00 ಗಂಟೆಗೆ ಶ್ರೀ ಹನುಮಾನ ದೇವರ ಮೂರ್ತಿಯ ಹಾಗೂ ನೂತನ ಕಳಸದ ಮಹಾರುದ್ರಾಭೀಷೆಕ, ಮಹಾಪೂಜೆ ಅರಭಾಂವಿಯ ಶಿವಯ್ಯಾ ಹಿರೇಮಠ ಅವರಿಂದ ನಡೆದು, ಸಕಲ ಪೂಜೆ ಅಮೃತಹಸ್ತದಿಂದ ಕಳಸಾರೂಹಣ ಕಾರ್ಯಕ್ರಮ ನಡೆಯಲಿದೆ. ನಂತರ 10:00 ಗಂಟೆಗೆ ಧರ್ಮ ಸಭೆ ನಡೆಯಲಿದೆ.
ನಿಡಸೊಸಿಯ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಜಿ ದಿವ್ಯಸಾನಿಧ್ಯ, ಗೋಕಾಕದ ಮುರುಘರಾಜೇಂದ್ರ ಮಹಾಸ್ವಾಮಿಜಿ ಅಧ್ಯಕ್ಷತೆ, ಹೊಸದುರ್ಗದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಜಿ ಸಮಾರಂಭ ಉದ್ಘಾಟಕರಾಗಿ, ಘಟಫ್ರಭಾ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಸಾನಿಧ್ಯ, ಮಮದಾಪೂರದ ಮೌನ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಸುಣಧೋಳಿಯ ಶಿವಾನಂದ ಮಹಾಸ್ವಾಮಿಜಿ, ಹುಣಶ್ಯಾಳ ಪಿ.ಜಿಯ ನಿಜಗುಣಿದೇವರು, ಅರಭಾಂವಿ ಶಿವಯ್ಯಾ ಮಹಾಸ್ವಾಮಿಜಿ, ಹೂಲಿಕಟ್ಟಿಯ ಕುಮಾರ ದೇವರು, ಮಹಾಲಿಂಗಪೂರದ ಇಬ್ರಾಹಿಂ ಸುತಾರ ಈ ಸಮಾರಂಭದ ನೇತೃತ್ವ ವಹಿಸಲಿದ್ದಾರೆ.
ಸಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ, ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ವಿಧಾನ ಪರಿಷತ್ತ ಸದಸ್ಯ ವಿವೇಕರಾವ ಪಾಟೀಲ, ಗೋಕಾಕ ಮಯೂರ್ ಸ್ಕೂಲ ಅಧ್ಯಕ್ಷ ಲಖನ್ ಜಾರಕಿಹೊಳಿ ಸತ್ಕಾರಮೂರ್ತಿಗಳಾಗಿ ಆಗಮಿಸಲಿದ್ದಾರೆ.
ಸ್ಥಳೀಯ ಹಾಗೂ ಸುತ್ತಲಿನ ನಗರ ಪಟ್ಟಣ, ಹಳ್ಳಗಳ ರಾಜಕೀಯ ಮುಖಂಡರು ಸಂತ ಶರಣರು ಗಣ್ಯರು ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅದೇ ದಿನ ರಾತ್ರಿ 8:00 ಕಾರ್ತಿಕೋತ್ಸವದ ನಿಮಿತ್ಯ ಶ್ರೀ ಹನುಮಂತ ದೇವರ ಪಲ್ಲಕ್ಕಿ ಉತ್ಸವ ಸಡಗರದಿಂದ ನಡೆದು, ರಾತ್ರಿ 10:00 ಗಂಟೆಗೆ ಸ್ಥಳೀಯ ಸ್ವಾಮಿ ವಿವೇಕಾನಂದ ನಾಟ್ಯ ಸಂಘದವರಿಂದ ‘ರೈತ ಹಚ್ಚದ ದೀಪ’ ಎಂಬ ಸಾಮಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸ್ಥಳೀಯ ಶ್ರೀ ಹನಮಂತ ದೇವರ ದೇವಸ್ಥಾನದ ಮಂಡಳೀಯ ಪ್ರಕಟನೆಯಲ್ಲಿ ತಿಳಿಸಿದೆ.

loading...

LEAVE A REPLY

Please enter your comment!
Please enter your name here